ಶಾಲಾ ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳಿಗೆ ‘ಪಠ್ಯಪುಸ್ತಕ ವಿತರಣೆ’ಗೆ ಬಗ್ಗೆ ಗುಡ್ ನ್ಯೂಸ್.

ಬೆಂಗಳೂರು: 2024-25ನೇ ಸಾಲಿನ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ಬ್ಲಾಕ್ ಹಂತದಿಂದ ಶಾಲಾ ಹಂತಕ್ಕೆ ವಿತರಣೆ ಬಗ್ಗೆ ಕರ್ನಾಟಕ ಪಠ್ಯಪುಸ್ತಕ ಸಂಘ ಸೂಚಿಸಿದೆ. ಈ ಮೂಲಕ ಶಾಲಾ ಆರಂಭಕ್ಕೂ ಮುನ್ನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಿಗೋ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರು ಜ್ಞಾಪನ ಪತ್ರವನ್ನು ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಹೊರಡಿಸಿದ್ದಾರೆ. ಅದರಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳ ನಿರ್ವಹಣೆ ಕುರಿತು ಈಗಾಗಲೇ ಉಲ್ಲೇಖಿತ ಸುತ್ತೋಲೆಯಲ್ಲಿ ಸೂಚಿಸಲಾಗಿರುತ್ತದೆ ಎಂದಿದ್ದಾರೆ.

ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಲಭ್ಯಗೊಳಿಸಬೇಕಾಗಿರುವುದರಿಂದ ಈಗಾಗಲೇ ಬ್ಲ್ಯಾಕ್ ಹಂತಕ್ಕೆ ಸರಬರಾಜು ಆಗಿರುವ ಎಲ್ಲಾ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ದಿನಚರಿಗಳನ್ನು ಆಯಾ ಶಾಲಾ ಬೇಡಿಕೆಗೆ ಅನುಗುಣವಾಗಿ ದಿನಾಂಕ:13.05.2024 ರಿಂದ ಆಯಾ ಶಾಲೆಗಳಿಗೆ ಸಾಗಾಣಿಕೆ ಮಾಡಿ ನಿಯಮಾನುಸಾರ ವಿತರಿಸಲು ಕ್ರಮವಹಿಸಲು ತಿಳಿಸಿದೆ. ಮುಂದುವರೆದು, ಮಾರಾಟ ಪಠ್ಯಪುಸ್ತಕಗಳನ್ನು ಆಯಾ ಶಾಲೆಗಳ ಬೇಡಿಕೆಯನ್ವಯ ಶೇ.10 ರಷ್ಟು ಮುಂಗಡ ಹಣ ಪಾವತಿಸಿರುವ ಶಾಲೆಗಳು ಶೇ.100 ರಷ್ಟು ಹಣ ಪಾವತಿಸಿದ ನಂತರ ಶೇ.100 ರಷ್ಟು ಪಠ್ಯಪುಸ್ತಕಗಳನ್ನು ವಿತರಿಸಲು, ಸಮಾಜ ಕಲ್ಯಾಣ ಇಲಾಖೆ ಮತ್ತು ಇತರೆ ಅಲ್ಪಸಂಖ್ಯಾತ ಇಲಾಖೆಗಳಿಂದ ಅನುಷ್ಠಾನಗೊಂಡಿರುವ ಶಾಲೆಗಳಿಗೆ ಬೇಡಿಕೆಯನ್ವಯ ಪೂರ್ಣ ಪ್ರಮಾಣದ ಪಠ್ಯಪುಸ್ತಕಗಳನ್ನು ಹಾಗೂ ಶೇ.10 ರಷ್ಟು ಮುಂಗಡ ಹಣ ಪಾವತಿಸದೇ ಇರುವ ಶಾಲೆಗಳು ಪಠ್ಯಪುಸ್ತಕಗಳ ಬೇಡಿಕೆ ಅನ್ವಯ ಶೇ.100 ರಷ್ಟು ಹಣ ಪಾವತಿಸಿ ಖರೀದಿಸಲು ಕೋರಿದ್ದಲ್ಲಿ ಅಂತಹ ಖಾಸಗಿ ಶಾಲೆಗಳಿಗೆ ಜೇಷ್ಠತೆ ಆಧಾರದ ಮೇಲೆ ಪಠ್ಯಪುಸ್ತಕಗಳನ್ನು ವಿತರಿಸಲು ತಿಳಿಸಿದ್ದಾರೆ.

ಸದರಿ ಎಲ್ಲಾ ಪಾವತಿಯು ಕಡ್ಡಾಯವಾಗಿ Payment gateway ಮೂಲಕವೇ ಆಗುವಂತೆ ಕ್ರಮವಹಿಸಲು ಈ ಮೂಲಕ ಸೂಚಿಸಿದೆ. ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಿದ ನಂತರ ವಿದ್ಯಾರ್ಥಿವಾರು SATS ತಂತ್ರಾಂಶದಲ್ಲಿ ಕಡ್ಡಾಯವಾಗಿ ಆ ದಿನವೇ ದಾಖಲಿಸಲು ಸಹ ಸೂಚಿಸಿದ್ದಾರೆ.

Source: https://nearme.dailyhunt.in/news/india/kannada/kannada+news+now-epaper-kanowcom/shaala+aarambhakku+munnave+vidyaarthigalige+pathyapustaka+vitarane+ge+bagge+gud+nyus-newsid-n605791348?pgs=N&pgn=8&mode=wap&&nsk=homee-updates-homee

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *