20 ವರ್ಷದ ವಿವಾಹಿತ ಗರ್ಭಿಣಿಯೊಬ್ಬರು ಬರೋಬ್ಬರಿ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಅಪರೂಪದಲ್ಲಿ ಅಪರೂಪದ ಘಟನೆ ನಡೆದಿದ್ದು, ಇಂತಹ ಅಚ್ಚರಿಯ ಪ್ರಕರಣ ಇದೀಗ ಇಡೀ ಪ್ರದೇಶದಲ್ಲಿ ಬಿಸಿಬಿಸಿ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿದೆ.

ಪಾಟ್ನಾ: ತಾಯಿಯೊಬ್ಬರು ಅವಳಿ ಮಕ್ಕಳಿಗೆ ಜನನ ನೀಡಿರುವ ಬಗ್ಗೆ ಕೇಳಿರುತ್ತೀರಿ. ಇದು ಇತ್ತೀಚೆಗೆ ಸಹಜ ಎಂಬಂತೆ ಅನೇಕ ಕಡೆಗಳಲ್ಲಿ ನಡೆಯುತ್ತದೆ. ಅಪರೂಪ ಎಂಬಂತೆ ತ್ರಿವಳಿ ಮಕ್ಕಳಿಗೂ ಜನ್ಮ ನೀಡಿರುವ ಘಟನೆಗಳು ಆಗಾಗ ನಡೆಯುತ್ತವೆ. ಆದರೆ ಎಲ್ಲಾದರೂ ಗರ್ಭಿಣಿಯೊಬ್ಬರು ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಮಕ್ಕಳಿಗೆ (Quintuplet) ಜನ್ಮ ನೀಡಿರುವುದನ್ನು ನೀವು ಕೇಳಿದ್ದೀರಾ? ಇಂತಹ ಘಟನೆಯೊಂದು ಈಗ ನಡೆದಿದೆ.
ಹೌದು.. 20 ವರ್ಷದ ವಿವಾಹಿತ ಗರ್ಭಿಣಿಯೊಬ್ಬರು ಬರೋಬ್ಬರಿ ಐದು ಮಕ್ಕಳಿಗೆ ಜನ್ಮ ನೀಡಿದ ಅಪರೂಪದಲ್ಲಿ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿನ ಕಿಶನ್ಗಂಜ್ ಜಿಲ್ಲೆಯಲ್ಲಿ ಇಂತಹ ಅಚ್ಚರಿಯ ಪ್ರಕರಣವೊಂದು ನಡೆದಿದ್ದು, ಈ ವಿಷಯ ಇದೀಗ ಇಡೀ ಪ್ರದೇಶದಲ್ಲಿ ಬಿಸಿಬಿಸಿ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿದೆ. ಗರ್ಭಿಣಿ ಜನ್ಮ ನೀಡಿದ ಎಲ್ಲಾ ಐದು ಮಕ್ಕಳು ಹೆಣ್ಣು ಶಿಶುಗಳಾಗಿದ್ದು, 1 ಕೆಜಿಗಿಂತ ಕಡಿಮೆ ತೂಕವಿದೆ. ಸದ್ಯ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
ಇಂತಹ ಅಪರೂಪದ ಘಟನೆಯಲ್ಲಿ ಐವರು ಹೆಣ್ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿಗೆ ಹೆರಿಗೆ ಮಾಡಿಸಿಕೊಟ್ಟ ವೈದ್ಯೆ ಡಾ.ಫರ್ಜಾನಾ ಮಾತನಾಡಿ, ಈ ಪ್ರಕರಣ ಸವಾಲಿನದ್ದಾಗಿದ್ದು, ಇಂತಹ ಪ್ರಕರಣಗಳು ತೀರಾ ವಿರಳ. ಅಚ್ಚರಿಯ ವಿಷಯ ಎಂದರೆ ಎಲ್ಲಾ ಮಕ್ಕಳು ಸಾಮಾನ್ಯ ಹೆರಿಗೆಯ ಮೂಲಕ ಜನಿಸಿದರು ಎಂದು ಹೇಳಿದ್ದಾರೆ.
ಈ ಪ್ರಕರಣವು ಕಿಶನ್ಗಂಜ್ ಜಿಲ್ಲೆಯ ಪೋಥಿಯಾ ಬ್ಲಾಕ್ನಲ್ಲಿ ನಡೆದಿದ್ದು, ಠಾಕೂರ್ಗಂಜ್ ಕನಕಪುರ ಪಂಚಾಯತ್ನ ಜಲ್ಮಿಲಿಕ್ ಗ್ರಾಮದ ನಿವಾಸಿ ತಾಹಿರಾ ಬೇಗಂ (20) ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಹಿರಾ ಅವರು 2 ತಿಂಗಳ ಗರ್ಭಿಣಿಯಾಗಿದ್ದಾಗ ಹೊಟ್ಟೆಯಲ್ಲಿ ನಾಲ್ಕು ಮಕ್ಕಳಿರುವುದು ಗೊತ್ತಾಗಿದೆ. ಬಳಿಕ ವೈದ್ಯರ ಬಳಿ ತಪಾಸಣೆಗೆ ಹೋದಾಗ ನಾಲ್ಕಲ್ಲ ಐದು ಮಕ್ಕಳಿರುವುದು ಗೊತ್ತಾಯಿತು. ಆರಂಭದಲ್ಲಿ ಗರ್ಭಿಣಿ ತುಂಬಾ ಹೆದರುತ್ತಿದ್ದಳು, ಆದರೆ ವೈದ್ಯರು ಅವಳಿಗೆ ಭರವಸೆ ನೀಡಿ ಆತ್ಮವಿಶ್ವಾಸ ತುಂಬಿದ್ದಾರೆ. ಪರಿಣಾಮ ಐದು ಹೆಣ್ಮಕ್ಕಳಿಗೆ ನಾರ್ಮಲ್ ಡೆಲಿವರಿ ಮೂಲಕ ಜನ್ಮ ನೀಡಿದ್ದಾರೆ.
ಇದನ್ನು ಓದಿ : ವಾಟ್ಸಾಪ್ ಹೋದ್ರೆ ಬೇರೆ ಆ್ಯಪ್ಗಳು ಯಾವ್ಯಾವಿವೆ? ಈ ಪರ್ಯಾಯ ಮೆಸೇಜಿಂಗ್ ಅಪ್ಲಿಕೇಶನ್ಗಳ ಬಗ್ಗೆ ಒಂದು ಪರಿಚಯ
ಈ ಪ್ರಕರಣವು ಸವಾಲಿನದ್ದಾಗಿತ್ತು!
ಇಂತಹ ಪ್ರಕರಣಗಳು ಬಹಳ ವಿರಳವಾಗಿ ಬರುತ್ತವೆ ಎಂದು ಹೆರಿಗೆ ಮಾಡಿದ ಡಾ.ಫರ್ಜಾನಾ ಹೇಳಿದ್ದು, ಅಲ್ಟ್ರಾಸೌಂಡ್ನಲ್ಲಿ ತಪಾಸಣೆ ಮಾಡಿದಾಗ, ಗರ್ಭಿಣಿ ಮಹಿಳೆ ಹೆದರುತ್ತಿದ್ದರು, ಆದರೆ ನಾವು ಅವರಿಗೆ ಆತ್ಮವಿಶ್ವಾಸ ತುಂಬಿದೆವು. ನಿಯಮಿತ ತಪಾಸಣೆ 9 ತಿಂಗಳವರೆಗೆ ಮುಂದುವರೆಯಿತು. ಕಳೆದ ಶನಿವಾರ ಬೆಳಗ್ಗೆ ತಾಹಿರಾ ಹೆರಿಗೆ ನೋವಿನಿಂದ ಬಳಲುತ್ತಿದ್ದು, ಕ್ಲಿನಿಕ್ಗೆ ದಾಖಲಾಗಿದ್ದರು ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಡಾ ಓರ್ಜನಾ, ಈ ಪ್ರಕರಣವು ಸಾಕಷ್ಟು ಸವಾಲಿನದ್ದಾಗಿತ್ತು. ಆದರೂ ನಾವು ಸಾಮಾನ್ಯ ಹೆರಿಗೆಗೆ ಆದ್ಯತೆ ನೀಡಿದ್ದೇವೆ. ರೋಗಿಯು ಸಾಮಾನ್ಯ ಹೆರಿಗೆ ಮೂಲಕ 5 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಅವಳ ಹೆಣ್ಣುಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಹೇಳಿದರು.
ಅಂದಹಾಗೆ ಈ ಬಾರಿ ತಾಹಿರಾ ಎರಡನೇ ಬಾರಿಗೆ ತಾಯಿಯಾಗಿದ್ದು, ಈಗಾಗಲೇ ಮೂರು ವರ್ಷದ ಮಗ ಇದ್ದಾನೆ. ಒಟ್ಟು ಆರು ಮಕ್ಕಳ ತಾಯಿಯಾಗಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1