Rajasthan: ಹೆದ್ದಾರಿಯಲ್ಲಿ ಏಕಾಏಕಿ ಯೂಟರ್ನ್:​ ಕಾರಿನ ಮೇಲೆ ಹರಿದ ಲಾರಿ​, 6 ಮಂದಿ ಸಾವು.

ರಾಜಸ್ಥಾನದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ(Delhi Mumbai Express Way) ಯಲ್ಲಿ ಕಾರಿಗೆ ಲಾರಿ ಡಿಕ್ಕಿ(Accident) ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದು, ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ. ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಲಾರಿ ಚಾಲಕನ ನಿರ್ಲಕ್ಷ್ಯವನ್ನು ತೋರಿಸಿದೆ.

ಲಾರಿ ಹಾಗೂ ಕಾರು ಬೇರೆ ಬೇರೆ ಲೇನ್​ನಲ್ಲಿ ಚಲಿಸುತ್ತಿತ್ತು ಕಾರು ಲಾರಿ​ ಸಮಕ್ಕೆ ಬರುವ ಸಂದರ್ಭದಲ್ಲಿ ಏಕಾ ಏಕಿ ಲಾರಿ​ ಎಡಕ್ಕೆ ತಿರುಗಿ ಯೂಟರ್ನ್​ ತೆಗೆದುಕೊಳ್ಳಲು ಮುಮದಾಗಿದೆ. ಆಗ ಕಾರಿನ ಮೇಲೆ ಟ್ರಕ್​ ಹರಿದಿದ್ದು ಒಂದೇ ಕುಟುಂಬದ 6 ಮಂದಿ ಜೀವ ಕಳೆದುಕೊಂಡಿದ್ದಾರೆ.

ಪೊಲೀಸರು ಸ್ಥಳಕ್ಕಾಗಮಿಸಿ ಲಾರಿಯನ್ನು ವಶಪಡಿಸಿಕೊಳ್ಳುವಷ್ಟರಲ್ಲಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮೃತರನ್ನು ಮನೀಶ್ ಶರ್ಮಾ, ಅನಿತಾ ಶರ್ಮಾ, ಸತೀಶ್ ಶರ್ಮಾ, ಪೂನಂ, ಸಂತೋಷ್ ಮತ್ತು ಕೈಲಾಶ್ ಎಂದು ಗುರುತಿಸಲಾಗಿದೆ. ಅವರು ಸಿಕರ್ ಜಿಲ್ಲೆಯಿಂದ ರಣಥಂಬೋರ್‌ನ ತ್ರಿನೇತ್ರ ಗಣೇಶ ದೇವಸ್ಥಾನಕ್ಕೆ ತೆರಳುತ್ತಿದ್ದರು.

ಏತನ್ಮಧ್ಯೆ, ಹೆಚ್ಚುವರಿ ಎಸ್ಪಿ ದಿನೇಶ್ ಕುಮಾರ್ ಅವರು ಗಾಯಗೊಂಡ ಇಬ್ಬರು ಮಕ್ಕಳನ್ನು ಜೈಪುರಕ್ಕೆ ಉಲ್ಲೇಖಿಸಲಾಗಿದೆ ಮತ್ತು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿ ಚಾಲಕನನ್ನು ಗುರುತಿಸಲಾಗಿದ್ದು, ಆತನನ್ನು ಶೀಘ್ರ ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಮತ್ತು ಅವರ ಉಪ ದಿಯಾ ಕುಮಾರಿ ಸಂತಾಪ ಸೂಚಿಸಿದರು. ಸವಾಯಿ ಮಾಧೋಪುರ್ ಜಿಲ್ಲೆಯ ಬೌನ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ನಾಗರಿಕರು ಸಾವನ್ನಪ್ಪಿದ ಸುದ್ದಿ ಅತ್ಯಂತ ದುಃಖಕರವಾಗಿದೆ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Source : https://tv9kannada.com/national/rajasthan-highway-6-dead-after-car-ploughs-into-truck-taking-wrong-u-turn-nyr-828503.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *