ತರಳಬಾಳು ಮಠದಿಂದ ಉಚಿತ ಶಿಕ್ಷಣ: ಮೇ 20ರಂದು ಲಿಖಿತ ಪರೀಕ್ಷೆ.

ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇಕಡ 80ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.

ಈ ಪರೀಕ್ಷೆಯಲ್ಲಿ 8, 9 ಮತ್ತು 10ನೇ ತರಗತಿಯ ವಿಜ್ಞಾನ, ಗಣಿತ ಪಠ್ಯ, ವ್ಯಾಕರಣ, ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇರುತ್ತವೆ. ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಮಠದ ವತಿಯಿಂದ ಎರಡು ವರ್ಷಗಳ ಕಾಲ ಕಾಲೇಜು ಶುಲ್ಕ ಭರಿಸಲಿದ್ದು, ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಾಗುವುದು.

ರಾಜ್ಯದ ಯಾವುದೇ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಿರಿಗೆರೆಯ ಎಂ. ಬಸವಯ್ಯ ವಸತಿಯುತ ಪದವಿಪೂರ್ವ ಕಾಲೇಜಿನಲ್ಲಿ ಪ್ರವೇಶ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಪ್ರಾಚಾರ್ಯರು, ಬಸವಯ್ಯ, ವಸತಿ ಪದವಿಪೂರ್ವ ಕಾಲೇಜು, ಸಿರಿಗೆರೆ, ಚಿತ್ರದುರ್ಗ ಜಿಲ್ಲೆ, ಮೊ.‌ 94499 81283, 94488 60886 ಸಂಪರ್ಕಿಸಬಹುದಾಗಿದೆ.

ಕಳೆದ 20 ವರ್ಷಗಳಿಂದ ದಾನಿಗಳ ದತ್ತಿ ನೆರವಿನಿಂದ 10 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆ ನಡೆಸಲಾಗುತ್ತಿದೆ.

Source : https://m.dailyhunt.in/news/india/kannada/kannadadunia-epaper-kannadad/taralabaalu+mathadindha+uchita+shikshana+me+20randu+likhita+parikshe-newsid-n607076164?listname=topicsList&index=21&topicIndex=1&mode=pwa&action=click

 

Leave a Reply

Your email address will not be published. Required fields are marked *