RCB vs DC Match: ಡೆಲ್ಲಿ ವಿರುದ್ಧ ತವರಿನಲ್ಲಿ ಆರ್‌‌ಸಿಬಿಗೆ ಭರ್ಜರಿ ಗೆಲುವು, ಪ್ಲೇಆಫ್‌ ಆಸೆ ಜೀವಂತ.

ಐಪಿಎಲ್ 2024ರ 62ನೇ ಪಂದ್ಯ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RCB vs DC) ನಡುವೆ ನಡೆಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ತವರು ನೆಲದಲ್ಲಿ ಅಬ್ಬರಿಸುವ ಮೂಲಕ ಡೆಲ್ಲಿ ವಿರುದ್ಧ ಭರ್ಜರಿ ಗೆಲುವು ದಾಖಲಸಿತು. ಮಹತ್ವದ ಪಂದ್ಯದಲ್ಲಿ ಟಾಸ್‌‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಅಕ್ಷರ್‌ ಪಟೇಲ್‌ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಇದರ ಲಾಭವನ್ನು ಆರ್‌‌ಸಿಬಿ ಬಾಯ್ಸ್‌ ಉತ್ತಮವಾಗಿ ಬಳಿಸಿಕೊಂಡರು. ಆರ್‌‌ಸಿಬಿ ಮೊದಲು ಬ್ಯಾಟಿಂಗ್‌ ಮಾಡಿ ನಿಗದಿತ 20 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 187 ರನ್‌ ಸಿಡಿಸಿತು. ಈ ಟಾರ್ಗೆಟ್‌‌ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 19.1 ಓವರ್‌ಗೆ 10 ವಿಕೆಟ್ ನಷ್ಟಕ್ಕೆ 140 ರನ್‌ ಗಳಿಸುವ ಮೂಲಕ 47 ರನ್‌ಗಳ ಸೋಲನ್ನಪ್ಪಿದೆ.

ಮುಗ್ಗರಿಸಿದ ಡೆಲ್ಲಿ ಬ್ಯಾಟಿಂಗ್‌:

ಇನ್ನು, ಆರ್‌‌ಸಿಬಿ ನೀಡಿದ ಟಾರ್ಗೆಟ್‌‌ ಬೆನ್ನಟ್ಟಿದ ಡೆಲ್ಲಿ ತಂಡ 47 ರನ್‌ಗಳಿಂದ ಸೋಲನ್ನಪ್ಪಿತು. ಈ ವೇಳೆ ಡೆಲ್ಲಿ ಪರ ನಾಯಕ ಅಕ್ಷರ್‌ ಪಟೇಲ್‌ ಮಾತ್ರ ಉತ್ತಮ ಬ್ಯಾಟಿಂಗ್‌ ಮಾಡಿದರು. ಅಕ್ಷರ್‌ ಪಟೇಲ್‌ 39 ಎಸೆದತಲ್ಲಿ 3 ಸಿಕ್ಸ್‌ ಹಾಗೂ 5 ಬೌಂಡರಿ ಸಹಿತ 57 ರನ್‌ ಗಳಿಸಿದರು. ಡೇವಿಡ್‌‌ ವಾರ್ನರ್‌ 1 ರನ್, ಜಾಕ್‌ ಪ್ರಸಿರ್‌ 21 ರನ್, ಅಭಿಷೇಕ್‌ ಪೋರೆಲ್‌ 2 ರನ್, ಶಾಯ್‌ ಹೋಪ್‌ 29 ರನ್, ಕುಮಾರ್ ಕುಶಾಗರ್‌ 2 ರನ್, ಟ್ರಿಸ್ಟನ್‌ ಸ್ಟಬ್ಸ್‌ 3 ರನ್‌, ರಾಸಿಕ್‌ 10 ರನ್, ಕುಲ್‌ದೀಪ್‌ ಯಾದವ್ 6 ರನ್, ಮುಖೇಶ್ ಕುಮಾರ್ 3 ರನ್ ಗಳಿಸಿದರು.

ಅಬ್ಬರಿಸಿದ ಆರ್‌‌ಸಿಬಿ ಬಾಯ್ಸ್‌:

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರೆ, ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡುವ ಸವಾಲನ್ನು ಎದುರಿಸಿತು. ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 187 ರನ್ ಗಳಿಸಿದರು. ಇದರಲ್ಲಿ ಆರ್‌ಸಿಬಿಯ ಯುವ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಅರ್ಧಶತಕ ತಂಡಕ್ಕೆ ದೊಡ್ಡ ಮುನ್ನಡೆ ನೀಡಿತು.

ಈ ಅರ್ಧಶತಕದಲ್ಲಿ ಪಾಟಿದಾರ್‌ 3 ಬೌಂಡರಿ ಮತ್ತು 3 ಸಿಕ್ಸರ್‌ ಮೂಲಕ ಅಮೋಘ 52 ರನ್‌ ಸಿಡಿಸಿದರು. ಇವರಿಗೆ ಉತ್ತಮ ಸಾಥ್‌ ನೀಡಿದ ವಿಲ್‌ ಜ್ಯಾಕ್ಸ್‌ ಸಹ 29 ಎಸೆದತಲ್ಲಿ 2 ಸಿಕ್ಸ್ ಹಾಗೂ 3 ಬೌಂಡರಿಗಳ ಮೂಲಕ 41 ರನ್‌ ಗಳಿಸಿದರು. ಉಳಿದಂತೆ ವಿರಾಟ್ ಕೊಹ್ಲಿ 13 ಎಸೆತದಲ್ಲಿ 27 ರನ್, ಕ್ಯಾಮರೂನ್ ಗ್ರೀನ್ 24 ಎಸೆದತಲ್ಲಿ 2 ಸಿಕ್ಸ್‌ ಸಹಿತ ಅಜೇಯ 32 ರನ್ ಮತ್ತು ಮಹಿಪಾಲ್ ಲೋಮ್ರೋರ್‌ 8 ಎಸೆತದಲ್ಲಿ 13 ರನ್ ಗಳಿಸಿದರು.

ಆದರೆ ನಾಯಕ ಫಾಫ್‌ ಡುಪ್ಲೇಸಿಸ್‌‌ 6 ರನ್ ಹಾಗೂ ಕಾರ್ತಿಕ್‌ ಶೂನ್ಯಕ್ಕೆ ಮರಳಿದರು. ಡೆಲ್ಲಿ ಬೌಲರ್‌ಗಳು ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ಸ್ವಲ್ಪ ಸಫಲರಾದರೂ ಯಶಸ್ವಿಯಾಗಲಿಲ್ಲ. ಡೆಲ್ಲಿ ಪರ ಖಲೀಲ್ ಅಹ್ಮದ್ ಮತ್ತು ರಸಿಕ್ ದಾರ್ ಸಲಾಮ್ ತಲಾ 2 ವಿಕೆಟ್ ಪಡೆದರೆ, ಕುಲದೀಪ್ ಮತ್ತು ಇಶಾನ್ ಶರ್ಮಾ ತಲಾ 1 ವಿಕೆಟ್ ಪಡೆದರು. ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 188 ರನ್‌ಗಳ ಗೆಲುವಿಗೆ ಸವಾಲು ಹಾಕಿತು.

Source : https://kannada.news18.com/news/sports/ipl-2024-rcb-vs-dc-match-royal-challengers-bengaluru-won-by-47-runs-skb-1696657.html

Views: 0

Leave a Reply

Your email address will not be published. Required fields are marked *