What is the last date for TET Application 2024: ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇನ್ನೆರಡು ದಿನಗಳಷ್ಟೇ ಬಾಕಿ ಇವೆ. ಆಸಕ್ತರು ಇನ್ನು ಅರ್ಜಿ ಸಲ್ಲಿಸದಿದ್ದಲ್ಲಿ ಕೊನೆಕ್ಷಣದ ವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ.

- ಟಿಇಟಿ ರಿಜಿಸ್ಟ್ರೇಷನ್‌ಗೆ ಕೊನೆ 2 ದಿನ ಬಾಕಿ.
- ಮೇ 15 ಅರ್ಜಿಗೆ ಕೊನೆ ದಿನ.
- ಪರೀಕ್ಷೆ ದಿನಾಂಕ, ಅಡ್ಮಿಟ್ ಕಾರ್ಡ್ ಬಿಡುಗಡೆ ದಿನಾಂಕ ಇಲ್ಲಿದೆ.
ಪದವಿ, ಪಿಜಿ ಶಿಕ್ಷಣದ ಜತೆಗೆ ಬಿ.ಇಡಿ ಶಿಕ್ಷಣ ಪಡೆದು ಶಿಕ್ಷಕರಾಗುವ ಕನಸು ಹೊತ್ತವರಿಗೆ, ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಒಂದು ಸವಾಲು. ಕಾರಣ ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದರೆ ಮಾತ್ರ ಅವರು ಶಿಕ್ಷಕರಾಗಲು, ಶಿಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಪ್ರತಿವರ್ಷವು ಸಹ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ಪರೀಕ್ಷೆಯನ್ನು ನಡೆಸುತ್ತದೆ. ಇದರಂತೆ ಈ ವರ್ಷದ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲು ಈಗಾಗಲೇ ಅಧಿಸೂಚಿಸಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆ ಎರಡು ದಿನಗಳಷ್ಟೇ ಬಾಕಿ ಇವೆ. ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಟಿಇಟಿ ಅರ್ಜಿಗೆ ಮೇ 15 ರವರೆಗೆ ಅರ್ಜಿಗೆ ಅವಕಾಶ ನೀಡಿದೆ. ಈ ಪರೀಕ್ಷೆಯನ್ನು ಜೂನ್ 30 ರಂದು ನಡೆಸಲಿದ್ದು, ಜೂನ್ 20 ರಂದು ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಬಿಡುಗಡೆ ಮಾಡಲಾಗುತ್ತದೆ. ಪದವಿ ಜತೆಗೆ ಬಿ.ಇಡಿ ಶಿಕ್ಷಣ ಪಡೆದವರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಅರ್ಜಿ ಸಲ್ಲಿಸಿ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಅರ್ಜಿ ಪ್ರಕ್ರಿಯೆ, ಪರೀಕ್ಷೆ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 15-05-2024
ಕರ್ನಾಟಕ ಟಿಇಟಿ ಪತ್ರಿಕೆ-1: ದಿನಾಂಕ 30-06-2024, ಭಾನುವಾರ, ಸಮಯ : 09-30am ರಿಂದ 12-00am
ಕರ್ನಾಟಕ ಟಿಇಟಿ ಪತ್ರಿಕೆ-2: ದಿನಾಂಕ 30-06-2024, ಭಾನುವಾರ, ಸಮಯ : 02-00pm ರಿಂದ 04-30pm
ಕರ್ನಾಟಕ ಟಿಇಟಿ ಆನ್‌ಲೈನ್ ಅರ್ಜಿಯ ವಿಧಾನ
– ವೆಬ್ ವಿಳಾಸ https://sts.karnataka.gov.in/TET/LoginPage.aspx ಕ್ಕೆ ಭೇಟಿ ನೀಡಿ.
– ‘New User’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಹೊಸ ವೆಬ್‌ಪುಟ ತೆರೆಯುತ್ತದೆ. ಕೇಳಲಾದ ಮಾಹಿತಿಗಳನ್ನು ನೀಡಿ ರಿಜಿಸ್ಟ್ರೇಷನ್ ಪಡೆಯಿರಿ.
– ಮತ್ತೆ ಹಿಂದಿನ ಮೇನ್ ಪೇಜ್‌ಗೆ ಹೋಗಿ, ಯೂಸರ್ ಐಡಿ, ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿರಿ.
– ಅರ್ಜಿಗೆ ಕೇಳಲಾದ ಮಾಹಿತಿಗಳನ್ನು ನೀಡಿ.
– ಅಭ್ಯರ್ಥಿಯ ಭಾವಚಿತ್ರ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡಿ.
– ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿ ಮಾಡಿ.
– ಪೂರ್ಣಗೊಂಡ ಅರ್ಜಿಯನ್ನು ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಬಹುದು.
– ಯಾವುದೇ ಸಮಯದಲ್ಲಿ ಪುನಃ ಲಾಗಿನ್ ಆಗಿ ಆನ್‌ಲೈನ್ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಬಹುದು.
ಪರೀಕ್ಷಾ ಶುಲ್ಕ ವಿವರ
– ಜೆನೆರಲ್ ಕೆಟಗರಿ ಅಭ್ಯರ್ಥಿಗಳಿಗೆ ರೂ.700 (2 ಪತ್ರಿಕೆಗಳಿಗೆ ರೂ.1000).
– ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ.700 (2 ಪತ್ರಿಕೆಗಳಿಗೆ ರೂ.1000).
– ಎಸ್‌ಸಿ/ ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.350 (2 ಪತ್ರಿಕೆಗಳಿಗೆ ರೂ.500).
– ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ಇದೆ.
ಶಿಕ್ಷಕರ ಅರ್ಹತಾ ಪರೀಕ್ಷೆಯ ಮಾದರಿ
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಒಟ್ಟು 150 ಬಹು ಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತದೆ.
ತಪ್ಪು ಉತ್ತರಗಳಿಗೆ ನೆಗೆಟಿವ್ ಮೌಲ್ಯಮಾಪನ ಇರುತ್ತದೆ.
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತು
ಆರ್‌ಟಿಇ ಕಾಯ್ದೆಯ ಸೆಕ್ಷನ್ 23 ಉಪ ವಿಭಾಗ (1) ನಿಬಂಧನೆಗಳ ಅನುಸಾರ ರಾಷ್ಟ್ರೀಯ ಶಿಕ್ಷಣ ಶಿಕ್ಷಕರ ಪರಿಷತ್ (NCTE) 1 ರಿಂದ 8 ನೇ ತರಗತಿಗಳ ಶಿಕ್ಷಕರಾಗಿ ನೇಮಕಾತಿಗೆ ಅರ್ಹರಾಗಲು ಕನಿಷ್ಠ ಅರ್ಹತೆಗಳನ್ನು ನಿಗದಿಪಡಿಸಿದೆ. ಆರ್‌ಟಿಇ ಕಾಯ್ದೆ 2ನೇ ವಿಭಾಗದಲ್ಲಿ ಷರತ್ತು ನಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಯಾವುದೇ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿಗೆ ಅರ್ಹತೆ ಪಡೆಯಲು ಎನ್‌ಸಿಟಿಇ ಯಿಂದ ರೂಪಿಸಲಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸೂಕ್ತ ಸರ್ಕಾರದ ಮೂಲಕ ನಡೆಸಲಾಗುವ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಟಿಇಟಿ ಅನ್ನು ಕನಿಷ್ಠ ಅರ್ಹತೆಯನ್ನಾಗಿ ಅಳವಡಿಸುವ ಉದ್ದೇಶ
1. ನೇಮಕಾತಿ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಮಾನದಂಡಗಳನ್ನು ಮತ್ತು ಶಿಕ್ಷಕರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲು.
2. ಶಿಕ್ಷಕ ಶಿಕ್ಷಕ ಸಂಸ್ಥೆಗಳು ಮತ್ತು ಪ್ರಶಿಕ್ಷಣಾರ್ಥಿಗಳು ತಮ್ಮ ಕಾರ್ಯಕ್ಷಮತೆಯ ಸುಧಾರಣೆಯನ್ನು ಪ್ರೇರೆಪಿಸಲು.
3. ಸರ್ಕಾರವು ಶಿಕ್ಷಕರ ಶೈಕ್ಷಣಿಕ ಗುಣಮಟ್ಟಕ್ಕೆ ವಿಶೇಷ ಒತ್ತು ನೀಡುತ್ತದೆ ಎಂಬ ಸಕಾರಾತ್ಮಕ ಸಂದೇಶವನ್ನು ಎಲ್ಲಾ ಭಾಗಿದಾರರಿಗೆ ನೀಡಲು.
Views: 1