VIRAL STORY : ಮಾರ್ಕ್ಸ್‌ ಕಮ್ಮಿಯಾದರೇನು ಶಿವಾ. ಎಲ್ಲೆಡೆ ಈ ಪೋರನದ್ದೇ ಹವಾ!

ಮಂಗಳೂರು: ಇತ್ತೀಚೆಗೆ SSLC ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ರಾಜದಲ್ಲಿ ಶೇ. 73.04 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅನೇಕ ವಿದ್ಯಾರ್ಥಿಗಳು 625 ಅಂಕಗಳಿಗೆ 625.. 624.. 620 ಹೀಗೇ ಸೂಪರ್ ಆಗಿ ಸ್ಕೋರ್ ಮಾಡಿದ್ದಾರೆ. ಆದ್ರೆ ಈಗ ನಾವು ಹೇಳ್ತಿರೋ ವಿಷಯ ಅದಲ್ಲ..!

ಒಂದೇ ಒಂದು ಅಂಕ ಕಮ್ಮಿ ಬಂತೆಂದರೆ, ಇಲ್ಲ ಫೇಲ್ ಆದರೆ ಆತ್ಮಹತ್ಯೆ ಮಾಡಿಕೊಳ್ಳುವ ಇಂದಿನ ವಿದ್ಯಾರ್ಥಿಗಳಿಗೆ ಕರಾವಳಿಯ ಬ್ರೂಸ್ಲಿ ಎಂಬ ವಿದ್ಯಾರ್ಥಿ ಎಲ್ಲರಿಗೂ ಮಾದರಿಯಾಗಿದ್ದಾನೆ. ಈಗ ಈ ಹುಡುಗಂದೇ ಫುಲ್ ಚರ್ಚೆ. ಈ ಲೆವಲ್‌ಗೆ ಪಾಸಿಟಿವ್ ಮೈಂಡ್ ಇರುವ ವಿದ್ಯಾರ್ಥಿ ಮತ್ತವನ ಸ್ನೇಹ ಬಳಗದ ಬಗ್ಗೆ ಎಲ್ಲೆಡೆ ಚರ್ಚೆ ಶುರುವಾಗಿದೆ.

ಬ್ರೂಸ್ಲಿ ಅಲಿಯಾಸ್ ಹ್ಯಾಸ್ಲಿನ್ SSLC ಪರೀಕ್ಷೆಯಲ್ಲಿ 300 ಅಂಕ ಪಡೆದು ಜಸ್ಟ್ ಪಾಸ್ ಆಗಿದ್ದಾನೆ. ಇದಕ್ಕೆ ಮಂಗಳೂರಿನ ಕುಡುಪು ಮಂಗಳನಗರದ ಅವನ ಯುವ ಫ್ರೆಂಡ್ಸ್‌ನ ಗೆಳೆಯರು ಬ್ಯಾನರ್‌ ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ. ಬ್ಯಾನರ್ ನಲ್ಲಿ ಬರೆದ ಪಾಸಿಟಿವ್ ಪಂಚಿಂಗ್ ಲೈನ್ಗಳ ಸಾಲುಗಳ್ಳು ಈ ಫೋಟೋ ಫುಲ್ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ಬ್ಯಾನರ್‌ನಲ್ಲಿ ಏನಿದೆ?
“ಅಪ್ಪ ಅಮ್ಮನ ಆಶೀರ್ವಾದದಿಂದ, ಊರವರ ಬೈಗುಳದಿಂದ ಊರವರ ಪ್ರೋತ್ಸಾಹದಿಂದ, ಟ್ಯೂಶನ್‌ ಮಹಾತ್ಮೆಯಿಂದ, ಶಾಲೆಯ ಕಿರಿಕಿರಿಯಿಂದ, ಶಿಕ್ಷಕರ ಬೋಧನೆಯಿಂದ, ಸೈಕಲ್ , ಫೀಸ್ ಆಮಿಷದಿಂದ ಎಲ್ಲರ ಕುತೂಹಲ, ಬ್ರೂಸ್ಲಿ ಪಾಸೋ ಫೇಲೋ ಎಂಬ ಚರ್ಚೆಗೆ ತೆರೆ ಬಿದ್ದಿದೆ. ತೋಚಿದ್ದು, ಗೀಚಿ ಫೇಲ್ ಆಗುವವನು ಹರಕೆ ಬಲದಿಂದ, ಪ್ರಯತ್ನದ ಫಲದಿಂದ ಹೇಗೋ ಒಟ್ಟಾರೆ ನಮ್ಮ ಬ್ರೂಸ್ಲಿ ಜಸ್ಟ್‌ ಪಾಸಾಗಿರೋದೇ ನಮಗೆಲ್ಲ ಸಂಭ್ರಮ. SSLC ಪರೀಕ್ಷೆಯಲ್ಲಿ 300 ಅಂಕ ಪಡೆದು ಉತ್ತೀರ್ಣನಾದ ಹ್ಯಾಸ್ಲಿನ್‌ ನಿಮಗೆ ಅಭಿನಂದನೆಗಳು” ಎಂದು ಖುಷಿಯನ್ನು ವ್ಯಕ್ತಪಡಿಸುವ ಇಮೋಜಿಗಳಿರುವ ಬ್ಯಾನರ್‌ ಹಾಕಿಸಿ ಸ್ನೇಹಿತರು ಸಂಭ್ರಮಿಸಿದ್ದಾರೆ.

Source: https://m.dailyhunt.in/news/india/kannada/navasamaja-epaper-nvsamaja/viral+story+maarks+kammiyaadarenu+shiva+ellede+ee+poranadde+hava+-newsid-n608365750?listname=topicsList&topic=for%20you&index=8&topicIndex=0&mode=pwa&action=click

 

Leave a Reply

Your email address will not be published. Required fields are marked *