ಸರ್ಕಾರ HSRP ನೋಂದಣಿ ಅವಧಿಯನ್ನು ಮೂರೂ ಬಾರಿ ವಿಸ್ತರಿಸಿದರೂ ರಾಜ್ಯದ ವಾಹನ ಸವಾರರು ಮಾತ್ರ ಇನ್ನು ಕೂಡಾ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. 2 ಕೋಟಿ ವಾಹನಗಳ ಪೈಕಿ ಇಲ್ಲಿಯವರೆಗೆ ಕೇವಲ 36 ಲಕ್ಷ ವಾಹನಗಳು ಮಾತ್ರ HSRP ನೊಂದಣಿ ಮಾಡಿಸಿದೆ.
- ರಾಜ್ಯದ ವಾಹನಗಳಿಗೆ HSRP ನೋಂದಣಿ ಕಡ್ಡಾಯ
- ನೋಂದಣಿ ಅವಧಿಯನ್ನು ಮೂರು ಬಾರಿ ವಿಸ್ತರಿಸಿದ ಸರ್ಕಾರ
- ಮೇ 31ರೊಳಗೆ ಎಲ್ಲಾ ವಾಹನಗಳಿಗೆ HSRP ಕಡ್ಡಾಯ
ಬೆಂಗಳೂರು : ರಾಜ್ಯದ ವಾಹನಗಳಿಗೆ HSRP ನೋಂದಣಿ ಮಾಡಿಸುವ ಗಡುವನ್ನು ಸರ್ಕಾರ ಮೂರು ಬಾರಿ ಗಡುವು ವಿಸ್ತರಿಸಿದೆ. ಮೂರನೆ ಬಾರಿಗೆ ನಿಗದಿ ಪಡಿಸಿರುವ ಗಡುವಿನ ಪ್ರಕಾರ ಮೇ 31ರೊಳಗೆ ಎಲ್ಲಾ ವಾಹನಗಳಿಗೆ HSRP ಅಳವಡಿಸಬೇಕು. ಇಲ್ಲವಾದರೆ ದಂಡ ತೆರಬೇಕಾಗುತ್ತದೆ.
ಸರ್ಕಾರ HSRP ನೋಂದಣಿ ಅವಧಿಯನ್ನು ಮೂರೂ ಬಾರಿ ವಿಸ್ತರಿಸಿದರೂ ರಾಜ್ಯದ ವಾಹನ ಸವಾರರು ಮಾತ್ರ ಇನ್ನು ಕೂಡಾ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. 2 ಕೋಟಿ ವಾಹನಗಳ ಪೈಕಿ ಇಲ್ಲಿಯವರೆಗೆ ಕೇವಲ 36 ಲಕ್ಷ ವಾಹನಗಳು ಮಾತ್ರ HSRP ನೊಂದಣಿ ಮಾಡಿಸಿದೆ.
ವಾಹನ ಸವಾರರ ನೀರಸ ಸ್ಪಂದನೆಗೆ RTO ಬೇಸರ :
HSRP ನಂಬರ್ ಪ್ಲೇಟ್ ಗಳನ್ನ ಅಳವಡಿಸಿಕೊಳ್ಳಲು ಎರಡು ಬಾರಿ ಗಡುವು ವಿಸ್ತರಿಸಿದರೂ ವಾಹನ ಮಾಲೀಕರು ನಂಬರ್ ಪ್ಲೆಟ್ ಬದಲಾಯಿಸಲು ಆಸಕ್ತಿ ತೋರುತ್ತಿಲ್ಲ. ವಾಹನ ಸವಾರರ ನೀರಸ ಸ್ಪಂದನೆಗೆ RTO ಬೇಸರ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಒಟ್ಟು ಎರಡು ಕೋಟಿ ವಾಹನಗಳಿವೆ. ಈ ಪೈಕಿ ಕೇವಲ 36 ಲಕ್ಷ ವಾಹನಗಳು ಮಾತ್ರ ಇಲ್ಲಿವರೆಗೆ ಹೊಸ ನಂಬರ್ ಪ್ಲೇಟ್ ಗೆ ನೋಂದಣಿ ಮಾಡಿಕೊಂಡಿದೆ.
ಮೇ 31ಕ್ಕೆ ಮೂರನೇ ಬಾರಿಗೆ ಕೊಟ್ಟ ಗಡುವು ಅಂತ್ಯ :
ರಾಜ್ಯದಲ್ಲಿ ಇಲ್ಲಿಯವರೆಗೆ ಕೇವಲ ಶೇ.18ರಷ್ಟು ವಾಹನಗಳಿಗೆ HSRP ಅಳವಡಿಕೆ ಮಾಡಲಾಗಿದೆ. ಅಂದರೆ ಇನ್ನೂ 1.64 ಕೋಟಿ ವಾಹನಗಳಿಗೆ ಹೊಸ ಫಲಕ ಅಳವಡಿಕೆಯಾಗಿಲ್ಲ. ಹೊಸ ಫಲಕ ಅಳವಡಿಸುವ ಗಡುವು ಮೇ 31ಕ್ಕೆ ಅಂತ್ಯವಗಾಲಿದೆ. ಜನ ತೋರುತ್ತಿರುವ ನೀರಸ ಪ್ರತಿಕ್ರಿಯೆ ಬಗ್ಗೆ RTO ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ.
ಮೇ 31ರ ಒಳಗೆ ಹೊಸ ನಂಬರ್ ಪ್ಲೇಟ್ ಅಳವಡಿಸಿಕೊಳ್ದಿದ್ದರೆ ದಂಡ :
ಹೊಸ ನಂಬರ್ ಪ್ಲೇಟ್ ಅಳವಡಿಸುವ ಗಡುವು ಮುಕ್ತಾಯವಾದ ನಂತರ ದಂಡ
ವಿಧಿಸುವ ಪ್ರಕ್ರಿಯೆ ಆರಂಭವಾಗಲಿದೆ.
ದಂಡದ ಪ್ರಕ್ರಿಯೆ ಹೇಗಿರಲಿದೆ ? :
*ಮೊದಲ ಬಾರಿ 500 ರೂಪಾಯಿ ದಂಡ
*ಎರಡನೇ ಬಾರಿಗೆ ಒಂದು ಸಾವಿರ ದಂಡ
*ಮುಂದೆ ಸಿಕ್ಕಿಬೀಳುವ ಪ್ರತಿ ಬಾರಿಗೆ 1 ಸಾವಿರ ದಂಡ ತೆರಬೇಕು
ಏನಿದು HSRP ನಂಬರ್ ಪ್ಲೇಟ್? :
ಇದು ವಾಹನಕ್ಕೆ ನೀಡುವ ಶಾಶ್ವತ ಗುರುತಿನ ನಂಬರ್. ರಸ್ತೆಯಲ್ಲಿ ವಾಹನ ಸಂಚರಿಸುವಾಗಲೇ ವಾಹನವನ್ನು ಗುರುತಿಸಲು ಈ ನಂಬರ್ ಪ್ಲೇಟ್ ಸಹಕರಿಸುತ್ತದೆ. ಈ ನಂಬರ್ ಪ್ಲೇಟ್ಗಳಲ್ಲಿ ಲೇಸರ್ ತಂತ್ರಜ್ಷಾನದ ಅಳವಡಿಕೆ ಮಾಡಲಾಗುತ್ತದೆ. ಇದರಿಂದಾಗಿ ವಾಹನ ಕಳ್ಳತನವಾದಲ್ಲಿ ಪತ್ತೆಗೆ ಸಹಾಯವಾಗುತ್ತದೆ.
Source : https://zeenews.india.com/kannada/business/hsrp-number-plate-deadline-till-may-31st-211449