ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಲಾ 17 ಅಂಕಗಳನ್ನು ಹೊಂದಿವೆ. ಅದರೆ ರಾಯಲ್ಸ್ ನೆಟ್ರನ್ರೇಟ್ನಲ್ಲಿ ಹೈದರಾಬಾದ್( +0.414) ರಾಜಸ್ಥಾನ್ಗಿಂತ (+0.273) ಮುಂದಿರುವುದರಿಂದ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಗುವಾಹಟಿ: ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕತ್ತಾ ನಡುವೆ ನಡೆಯಬೇಕಿದ್ದ ಐಪಿಎಲ್ 2024ರ ಕೊನೆಯ ಲೀಗ್ ಪಂದ್ಯ ಮಳೆಗೆ ಆಹುತಿಯಾಗಿದೆ. ಗುವಾಹಟಿಯಲ್ಲಿ ಸಂಜೆಯಿಂದ ಶುರುವಾದ ಮಳೆ ನಿರಂತರವಾಗಿ ಶುರಿದಿದ್ದರಿಂದ ಪಂದ್ಯವನ್ನ ರದ್ದುಗೊಳಿಸಲಾಗಿದೆ. ಈ ಪಂದ್ಯದ ಫಲಿತಾಂಶ ಕೆಕೆಆರ್ಗೆ ಯಾವುದೆ ನಷ್ಟವನ್ನುಂಟು ಮಾಡದಿದ್ದರೂ, ಕೊನೆಯ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ರಾಜಸ್ಥಾನ್ ಆಸೆಗೆ ಮಳೆ ತಣ್ಣೀರೆರಚಿದೆ. ಎರಡೂ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡಿದ್ದು, ಕೆಕೆಆರ್ 20 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಲೀಗ್ ಅಂತ್ಯಗೊಳಿಸಿದರೆ, ರಾಯಲ್ಸ್ 17 ಅಂಕದೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದೆ.
ಆರ್ಸಿಬಿಗೆ ರಾಜಸ್ಥಾನ್ ರಾಯಲ್ಸ್ ಎದುರಾಳಿ
ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಲಾ 17 ಅಂಕಗಳನ್ನು ಹೊಂದಿವೆ. ಅದರೆ ರಾಯಲ್ಸ್ ನೆಟ್ರನ್ರೇಟ್ನಲ್ಲಿ ಹೈದರಾಬಾದ್( +0.414) ರಾಜಸ್ಥಾನ್ಗಿಂತ (+0.273) ಮುಂದಿರುವುದರಿಂದ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಹಾಗಾಗಿ ಮೇ 22ರಂದು ನಡೆಯಲಿರುವ ಎಲಿಮಿನೇಟರ್ನಲ್ಲಿ ರಾಜಸ್ಥಾನ್ ರಾಯಲ್ಸ್ 4ನೇ ಸ್ಥಾನದಲ್ಲಿರುವ ಆರ್ಸಿಬಿ ವಿರುದ್ಧ ಸೆಣಸಾಡಲಿದೆ.
ಕ್ವಾಲಿಫೈಯರ್ನಲ್ಲಿ ಕೆಕೆಆರ್ vs ಎಸ್ಆರ್ಹೆಚ್
ಟೂರ್ನಿಯಲ್ಲಿ ಮೊದಲೆರಡು ಸ್ಥಾನ ಪಡೆದುಕೊಂಡಿರುವ ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಮೊದಲ ಕ್ವಾಲಿಫೈಯರ್ನಲ್ಲಿ ಕಣಕ್ಕಿಳಿಯಲಿವೆ. ಮೇ 21ರಂದು ಈ ಪಂದ್ಯ ನಡೆಯಲಿದ್ದು, ಗೆದ್ದ ತಂಡ ನೇರ ಫೈನಲ್ ಪ್ರವೇಶಿಸಲಿದೆ. ಸೋಲುವ ತಂಡ ಮೇ 24ರಂದು ಆರ್ಸಿಬಿ-ಆರ್ಆರ್ ನಡುವೆ ಮೇ 22ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ. ಮೇ 26 ಭಾನುವಾರದಂದು ಫೈನಲ್ ಪಂದ್ಯ ನಡೆಯಲಿದೆ.
ನೌಕೌಟ್ ಪಂದ್ಯಗಳು ನಡೆಯುವದು ಎಲ್ಲಿ?
ಕ್ವಾಲಿಫೈಯರ್ 1: ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್ರೈಸರ್ಸ್ ಹೈದರಾಬಾದ್, ಮೇ 21- ಅಹ್ಮದಾಬಾದ್
ಎಲಿಮಿನೇಟರ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್, ಮೇ 22, ಅಹ್ಮದಾಬಾದ್
ಕ್ವಾಲಿಫೈಯರ್ 2: ಚೆನ್ನೈ, ಮೇ 24
ಫೈನಲ್ ಪಂದ್ಯ: ಚೆನ್ನೈ, ಮೇ 26