ಕರ್ನಾಟಕ ‘ದ್ವಿತೀಯ ಪಿಯುಸಿ ಪರೀಕ್ಷೆ-3’ರ ‘ಅಂತಿಮ ವೇಳಾಪಟ್ಟಿ’ ಪ್ರಕಟ.

ಬೆಂಗಳೂರು: ಕರ್ನಾಟಕ ದ್ವಿತಿಯ ಪಿಯುಸಿ ಪರೀಕ್ಷೆ-2ರ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ. ಈ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ-3ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಜೂನ್, ಜುಲೈ 2024ರ ದ್ವಿತೀಯ ಪಿಯುಸಿ ಪರೀಕ್ಷೆ-3ರ ಅಂತಿಮ ವೇಳಾಪಟ್ಟಿ ಈ ಕೆಳಕಂಡಂತೆ ಇದೆ ಅಂತ ಹೇಳಿದೆ.

ಹೀಗಿದೆ ದ್ವಿತೀಯ ಪಿಯುಸಿ ಪರೀಕ್ಷೆ-3ರ ಅಂತಿಮ ವೇಳಾಪಟ್ಟಿ

ದಿನಾಂಕ 24-06-2024ರ ಸೋಮವಾರ- ಕನ್ನಡ, ಅರೇಬಿಕ್

ದಿನಾಂಕ 25-06-2024ರ ಮಂಗಳವಾರ – ಇಂಗ್ಲೀಷ್

ದಿನಾಂಕ 26-06-2024ರ ಬುಧವಾರ – ಸಮಾಜಶಾಸ್ತ್ರ, ಜೀವ ಶಾಸ್ತ್ರ, ಭೂಗರ್ಭ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ.

ದಿನಾಂಕ 27-06-2024ರ ಗುರುವಾರ – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ

ದಿನಾಂಕ 28-06-2024ರ ಶುಕ್ರವಾರ – ಅರ್ಥ ಶಾಸ್ತ್ರ, ರಾಸಾಯನ ಶಾಸ್ತ್ರ

ದಿನಾಂಕ 29-06-2024ರ ಶನಿವಾರ – ಇತಿಹಾಸ, ಭೌತಶಾಸ್ತ್ರ

ದಿನಾಂಕ 01-07-2024ರ ಸೋಮವಾರ- ಗೃಹ ವಿಜ್ಞಾನ, ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ದಿನಾಂಕ 02-07-2024ರ ಮಂಗಳವಾರ – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣ ಶಾಸ್ತ್ರ

ದಿನಾಂಕ 03-07-2024ರ ಬುಧವಾರ – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಮೂಲಗಣಿತ

ದಿನಾಂಕ 04-07-2024ರ ಗುರುವಾರ – ಹಿಂದಿ

ದಿನಾಂಕ 05-07-2024ರ ಶುಕ್ರವಾರ- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.

Source : https://m.dailyhunt.in/news/india/kannada/kannadanewsnow-epaper-kanowcom/breaking+karnaataka+dvitiya+piyusi+parikshe+3+ra+antima+velaapatti+prakata-newsid-n610525906?listname=topicsList&index=3&topicIndex=0&mode=pwa&action=click

Leave a Reply

Your email address will not be published. Required fields are marked *