T20 World Cup 2024, CAN vs IRE: ಐರ್ಲೆಂಡ್ ತಂಡಕ್ಕೆ ಆರಂಭದಿಂದಲೇ ಕೆನಡಾ ಶಾಕ್ ನೀಡಿತು. ಇದರ ಭಾಗವಾಗಿ ಅಂತಿಮವಾಗಿ ಐರಿಶ್ ಪಡೆ ನಿಗದಿತ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸುವ ಮೂಲಕ 12 ರನ್ಗಳಿಂದ ಸೋಲನ್ನಪ್ಪಿತು. ಈ ಮೂಲಕ ಐರ್ಲೆಂಡ್ ಬಹುತೇಕ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.

ಟಿ20 ವಿಶ್ವಕಪ್ 2024ರ (T20 World Cup 2024) 13ನೇ ಪಂದ್ಯದಲ್ಲಿ ಇಂದು ಐರ್ಲೆಂಡ್ ಮತ್ತು ಕೆನಡಾ (IRE vs CAN) ತಂಡಗಳು ಮುಖಾಮುಖಿಮಾಗಿದ್ದವು. ಈ ಪಂದ್ಯವು ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ (Nassau County International Cricket Stadium) ನಡೆಯಿತು. ಇನ್ನು, ಎ ಗುಂಪಿನ ಅಂಗವಾಗಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆನಡಾ ಮೊತ್ತ ಗಳಿಸಿತು. ಈ ಮೂಲಕ ಐರ್ಲೆಂಡ್ ವಿರುದ್ಧದ T20 ವಿಶ್ವಕಪ್ 2024 ಪಂದ್ಯದಲ್ಲಿ ಕೆನಡಾ ಉತ್ತಮ ಸ್ಕೋರ್ ಗಳಿಸಿತು. ಮೊದಲು ಬ್ಯಾಟ್ ಮಾಡಿದ ಕೆನಡಾ 20 ಓವರ್ಗಳಲ್ಲಿ 7 ವಿಕೆಟ್ಗೆ 142 ರನ್ ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಐರ್ಲೆಂಡ್ ತಂಡಕ್ಕೆ ಆರಂಭದಿಂದಲೇ ಕೆನಡಾ ಶಾಕ್ ನೀಡಿತು. ಇದರ ಭಾಗವಾಗಿ ಅಂತಿಮವಾಗಿ ಐರಿಶ್ ಪಡೆ ನಿಗದಿತ 20 ಓವರ್ಗೆ 7 ವಿಕೆಟ್ ನಷ್ಟಕ್ಕೆ 125 ರನ್ ಗಳಿಸುವ ಮೂಲಕ 12 ರನ್ಗಳಿಂದ ಸೋಲನ್ನಪ್ಪಿತು. ಈ ಮೂಲಕ ಐರ್ಲೆಂಡ್ ಬಹುತೇಕ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ.
ಬ್ಯಾಟಿಂಗ್ನಲ್ಲಿ ಮುಗ್ಗರಿಸಿದ ಐರ್ಲೆಂಡ್:
ಇನ್ನು, ಕೆನಡಾ ನೀಡಿದ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ಪಡೆ 12 ರನ್ಗಳಿಂದ ಸೋಲನ್ನಪ್ಪಿತು. ಐರ್ಲೆಂಡ್ ಪರ ಮಾರ್ಕ್ ಅಡೈರ್ 34 ರನ್, ಜಾರ್ಜ್ 30 ರನ್ ಮತ್ತು ಆ್ಯಂಡ್ರ್ಯೂ 17 ರನ್ ಗಳಿಸಿದ್ದು ಬಿಟ್ಟರೆ ಬೆರೆ ಯಾವ ಬ್ಯಾಟರ್ ಸಹ ಉತ್ತಮ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ಕೆನಡಾ ಉತ್ತಮ ಬ್ಯಾಟಿಂಗ್:
ಇನ್ನು, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆನಡಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 142 ರನ್ ಗಳಿಸಿತು. ಕೆನಡಾ ಪರ ನಿಕೋಲಸ್ ಕಿರ್ಟನ್ ಅವರು 35 ಎಸೆತಗಳಲ್ಲಿ 49 ರನ್ ಗಳಿಸಿದರು. ಈ ವೇಳೆ ಅವರು 3 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದರು. ಈ ಮೂಲಕ ಕೆನಡಾ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಶ್ರೇಯಸ್ ಮೊವ್ವಾ ಅವರು 36 ಎಸೆತಗಳಲ್ಲಿ 37 ರನ್ ಚಚ್ಚಿದರು. ಇವರು 3 ಬೌಂಡರಿ ಸಿಡಿಸುವ ಮೂಲಕ ಮಿಂಚಿದರು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಕೆನಡಾ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು.
ನವ್ ನೀತ್ 6 ರನ್, ದಿಲ್ಪ್ರೀತ್ ಬಜ್ವಾ 7 ರನ್ ಮತ್ತು ಆರೋನ್ ಜಾನ್ಸನ್ 14 ರನ್ಗಳಿಗೆ ವಿಕೆಟ್ಗಳನ್ನು ತ್ವರಿತವಾಗಿ ಕಳೆದುಕೊಂಡರು. ಈ ಹಂತದಲ್ಲಿ ನಿಕೋಲಸ್ ಮತ್ತು ಶ್ರೇಯಸ್ ತಂಡಕ್ಕೆ ಆಸರೆಯಾದರು. ಇವರಿಬ್ಬರು 5ನೇ ವಿಕೆಟ್ಗೆ 75 ರನ್ ಸೇರಿಸಿದರು. ಇದರೊಂದಿಗೆ ಕೆನಡಾ ಗೌರವಾನ್ವಿತ ಮೊತ್ತ ಗಳಿಸಲು ಸಹಾಯಕರಾದರು. ಐರ್ಲೆಂಡ್ನ ಬೌಲರ್ಗಳ ಪೈಕಿ ಬ್ಯಾರಿ ಮೆಕಾರ್ಥಿ ಮತ್ತು ಕ್ರೇಗ್ ಯಂಗ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಇನ್ನು, ಎ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾನದಂತಹ ಬಲಿಷ್ಠ ತಂಡಗಳ ಜೊತೆಗೆ ಅಮೆರಿಕ, ಐರ್ಲೆಂಡ್ ಮತ್ತು ಕೆನಡಾ ತಂಡಗಳಿವೆ. ಈ ಗುಂಪಿನಿಂದ ಸೂಪರ್ 8 ತಲುಪುವ ತಂಡಗಳು ಭಾರತ ಮತ್ತು ಪಾಕಿಸ್ತಾನ ಎಂದು ಟೂರ್ನಿ ಆರಂಭಕ್ಕೂ ಮುನ್ನ ಹೇಳಲಾಗಿತ್ತು. ಆದಾಗ್ಯೂ, ಪಾಕಿಸ್ತಾನದ ವಿರುದ್ಧ ಅಮೆರಿಕದ ಭರ್ಜರಿ ವಿಜಯದ ನಂತರ ಸಮೀಕರಣಗಳು ಬದಲಾದವು. ಭಾರತದೊಂದಿಗೆ ಪಾಕಿಸ್ತಾನ, ಅಮೆರಿಕ ತಂಡಗಳು ಈಗಾಗಲೇ ಸೂಪರ್ 8 ಹಂತಕ್ಕೆ ಭರ್ಜರಿ ಫೈಪೋಟಿ ನಡೆಸುತ್ತಿದ್ದು, ಅಮೇರಿಕಾ ಇನ್ನೊಂದು ಪಂದ್ಯ ಗೆದ್ದರೆ ಸೂಪರ್ 8 ಹಂತದ ಸಮೀಪಕ್ಕೆ ಬಂದು ನಿಲ್ಲುತ್ತದೆ. ಆದರೆ ಐರ್ಲೆಂಡ್ ಮತ್ತು ಕೆನಡಾ ನಡುವಿನ ಪಂದ್ಯದಲ್ಲಿ ಕೆನಡಾ ತಂಡ ಗೆಲ್ಲುವ ಮೂಲಕ ಇನ್ನೂ ಸೂಪರ್ 8 ಅವಕಾಶವನ್ನು ಉಳಿಸಿಕೊಂಡಿದೆ. ಸೋತ ಐರ್ಲೆಂಡ್ ತಂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ.