Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
1 . ಬೇಗಂ ಅಕ್ಬರ್ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ
ಗಜಲ್
2 . “ಆನ್ ಮೈ ಟರ್ಮ್ಸ್” ಇದು ಯಾರ ಆತ್ಮಕತೆಯಾಗಿದೆ
ಶರದ್ ಪವಾರ್
3 . ಸುವರ್ಣ ಚತುಷ್ಕೋನ ಕಾರಿಡಾರ್ ಹೆದ್ದಾರಿ ಯೋಜನೆಯನ್ನು ಆರಂಭಿಸಿದ ಪ್ರಧಾನಮಂತ್ರಿ
ಅಟಲ್ ಬಿಹಾರಿ ವಾಜಪೇಯಿ
4 .” ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ” ಎಂಬ ಸಾಲುಗಳು ಯಾವ ಶಾಸನದಲ್ಲಿ ಉಲ್ಲೇಖಿತಗೊಂಡಿವೆ
ಬಾದಾಮಿ ಶಾಸನ
5 . ಭಾರತದಲ್ಲಿ ಕರ್ಕಾಟಕ ಸಂಕ್ರಾಂತಿ ವೃತ್ತವನ್ನು ಎರಡು ಬಾರಿ ಹಾದು ಹೋಗುವ ನದಿ
ಮಾಹಿ ನದಿ
6 . ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುತ್ತಿರುವ ಇಂಧನ
ಥೋರಿಯಂ
7 . ಕನ್ನಡದಲ್ಲಿ ರಚನೆಗೊಂಡ ಮೊದಲ ಜೀವನ ಚರಿತ್ರೆ
ಕುಣಿಗಲ್ ರಾಮ ಶಾಸ್ತ್ರಿಗಳ ಜೀವನ ಚರಿತ್ರೆ
8 . ವಿಶ್ವದ ಅತ್ಯಂತ ಎತ್ತರದ ಕ್ರಿಕೆಟ್ ಮೈದಾನ ಎಲ್ಲಿದೆ
ಬೇಲ್
9 . ಅಂತರಾಷ್ಟ್ರೀಯ ಓಝೋನ್ ದಿನ
ಸೆಪ್ಟಂಬರ್ 16
10 . ಕಾಲುಗಳು ಇಲ್ಲದಿರುವ ಉಭಯವಾಸಿ ಜೀವಿ
ಈಕ್ತಿಯೋಫಿಸ್