ರಾಜಕಾರಣ, ಪ್ರಕೃತಿ ವಿಕೋಪ, ರಾಜ್ಯ ರಾಜಕಾರಣ, ದೇಶದ ರಾಜಕಾರಣ, ದೇಶ ವಿದೇಶದ ಸಂಘರ್ಷಗಳು, ಬಾಂಬ್ ಸ್ಫೋಟ ಇತ್ಯಾದಿಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿಯುವ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಇದೀಗ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಚಿಕ್ಕಬಳ್ಳಾಪುರ: ರಾಜಕಾರಣ, ಪ್ರಕೃತಿ ವಿಕೋಪ, ರಾಜ್ಯ ರಾಜಕಾರಣ, ದೇಶದ ರಾಜಕಾರಣ, ದೇಶ ವಿದೇಶದ ಸಂಘರ್ಷಗಳು, ಬಾಂಬ್ ಸ್ಫೋಟ ಇತ್ಯಾದಿಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿಯುವ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಇದೀಗ ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ನಟ ದರ್ಶನ್ ಕುರಿತಂತೆ ಸ್ಫೋಟಕ ಭವಿಷ್ಯ ನುಡಿದಿರುವ ಕೋಡಿ ಮಠದ ಶ್ರೀಗಳು, ಮತ್ತಷ್ಟು ಭಯಾನಕ ಭವಿಷ್ಯವನ್ನೂ ಹೇಳಿದ್ದಾರೆ!
ಕ್ರೋಧಿನಾಮ ಸಂವತ್ಸರದಲ್ಲಿ ಕ್ರೋಧ, ದ್ವೇಷ, ಮದ, ಅಸೂಯೆಗಳು ಹೆಚ್ಚಾಗುತ್ತವೆ ಅಂತ ಶ್ರೀಗಳು ಹೇಳಿದ್ದಾರೆ. ಕ್ರೋಧಿನಾಮ ಸಂವತ್ಸರದಲ್ಲಿ ಶುಭಕ್ಕಿಂತ ಅಶುಭಗಳೇ ಹೆಚ್ಚು ಅಂತ ಕೋಡಿಮಠ ಸ್ವಾಮೀಜಿ ಹೇಳಿದ್ದಾರೆ. ಈ ಬಾರಿ ಪಂಚಘಾತಕಗಳು ಸಂಭವಿಸಲಿದೆ. ಪಂಚಘಾತುಕಗಳನ್ನ ಗೆಲ್ಲೋದು ಕಷ್ಟ ಅಂತ ಸ್ವಾಮೀಜಿ ಹೇಳಿದ್ದಾರೆ.
ಭೂಕಂಪ, ಜಲಕಂಟಕ, ಆಗ್ನಿಯಿಂದಲೂ ಆಪತ್ತಿದೆ, ವಾಯುವಿನಿದಂದಲೂ ಆಪತ್ತಿದೆ ಅಂತ ಸ್ವಾಮೀಜಿ ಹೇಳಿದ್ದಾರೆ. ಕ್ರೋಧಿನಾಮ ಸಂವತ್ಸರದಲ್ಲಿ ಗುರು ಶಿಷ್ಯನಾಗುತ್ತಾನೆ, ಶಿಷ್ಯ ಗುರುವು ಆಗುತ್ತಾನೆ. ಹೆಣ್ಣುಮಕ್ಕಳ ಪ್ರಾಬಲ್ಯ ಹೆಚ್ಚಾಗುತ್ತದೆ. ಅದರಿಂದ ಸುಖವೂ ಇದೆ, ದುಃಖವೂ ಇದೆ ಅಂತ ಸ್ವಾಮೀಜಿ ಹೇಳಿದ್ದಾರೆ.
ಪರದೇಶದಲ್ಲಿ ಜಲಪ್ರಳಯ ಬಾಂಬ್ ಸ್ಪೋಟದ ಬಗ್ಗೆ ಮೊದಲೇ ಹೇಳಿದ್ದೆ. ಯುದ್ದ ಭೀತಿ, ಪ್ರಧಾನಿಗಳ ಬಗ್ಗೆ ಹೇಳಿದ್ದೆ. ಅದೆಲ್ಲವೂ ನಡೆದು ಹೋಯ್ತು ಅಂತ ಸ್ವಾಮೀಜಿ ಹೇಳಿದ್ರು. ದೊಡ್ಡ ದೊಡ್ಡ ಜನರಿಗೆ ಆಘಾತದ ಬಗ್ಗೆ ಹೇಳಿದ್ದೆ, ಅದೂ ನಡೆದಿದೆ, ಈಗಲೂ ನಡೆಯುತ್ತಿದೆ ಅಂತ ಕೋಡಿಮಠದ ಸ್ವಾಮೀಜಿ ಹೇಳಿದ್ರು
ಇನ್ನು ನಟ ದರ್ಶನ್ ಅರೆಸ್ಟ್ ಆಗಿರೋ ಪ್ರಕರಣದ ಬಗ್ಗೆಯೂ ಕೋಡಿ ಮಠದ ಶ್ರೀಗಳು ಮಾತನಾಡಿದ್ರು. ಮನುಷ್ಯ ಸಹನೆ ನೆಮ್ಮದಿ ಕಳೆ ಕೋಡಿ ಮಠದ ಸ್ವಾಮೀಜಿ ಈ ಹಿಂದೆಯೂ ಅನೇಕ ಬಾರಿ ಸ್ಫೋಟಕ ಭವಿಷ್ಯವನ್ನು ನುಡಿದಿದ್ದರು.
ಜಾಗತಿಕ ಮಟ್ಟದಲ್ಲಿ ಮತಾಂಧತೆ ಹೆಚ್ಚಾಗಲಿದೆ. ಬಾಂಬ್ ಸ್ಫೋಟ, ಭೂಕಂಪ ಆಗುವ ಸಾಧ್ಯತೆ ಇದೆ. ಈ ವೇಳೆ ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಕೋಡಿಶ್ರೀ ಭೀಕರ ಭವಿಷ್ಯ ನುಡಿದಿದ್ದರು.ದುಕೊಂಡಾಗ ಕೋಪಕ್ಕೆ ತುತ್ತಾಗುತ್ತಾನೆ ಅಂತ ಕೋಡಿ ಮಠದ ಶ್ರೀಗಳು ಹೇಳಿದ್ದಾರ
2024 ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ,ಭೂಕಂಪನ, ಜಲ ಕಂಟಕ ಎದುರಾಗಲಿದೆ ಅಕಾಲಿಕ ಮಳೆ, ಬಾಂಬ್ ಸಿಡಿಯುವ ಸಂಭವ, ಯುದ್ಧ ಭೀತಿ, ಜನರು ತಲ್ಲಣವಾಗುತ್ತಾರೆ. ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ, ಜಗತ್ತಿನಲ್ಲಿ ಒಂದೆರಡು ಪ್ರಧಾನಿಗಳಿಗೆ ಸಾವಾಗುವ ಲಕ್ಷಣವಿದೆ ಎಂದು ಸ್ವಾಮಿಜಿ ನುಡಿದಿದ್ದರು. ಅಸ್ಥಿರತೆ, ಯುದ್ಧ ಭೀತಿ. ಅಣು ಬಾಂಬ್ ಸ್ಫೋಟವಾಗುವ ಅವಕಾಶವಿದೆ ಎಂದು ಕೋಡಿ ಶ್ರೀಗಳು ಭವಿಷ್ಯದ ಕುರಿತು ತಿಳಿಸಿದ್ದರು.
ಜಗತ್ತಿಗೆ ವಿನಾಶ, ಜಗತ್ತಿಗೆ ಅಪಾಯ, ರೋಗ, ಸುನಾಮಿ ಹಾಗೂ ಮತೀಯ ಸಮಸ್ಯೆಯಿಂದ ಜನರು ದುಖಃ ಅನುಭವಿಸುತ್ತಾರೆ ಎಂದು ಸ್ವಾಮೀಜಿ 2023ರಲ್ಲಿ ತಿಳಿಸಿದ್ದರು. ಮುಂಬರುವ ದಿನಗಳಲ್ಲಿ ಬರಬಹುದಾದ ಸಮಸ್ಯೆಗಳನ್ನು ಎದುರಿಸಲು ಜನರು ದೈವ ನಂಬುವುದೊಂದೆ ಪರಿಹಾರ, ದೈವ ಮೊರೆ ಹೋಗಬೇಕು ಎಂದು ಶ್ರೀಗಳು ಸಲಹೆ ನೀಡಿದ್ದರು.