ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಅಂತಾರಾಷ್ರ್ಟೀಯ ಸಂಗೀತ ದಿನಾಚರಣೆ.

ಶಾಲೆಯ ವಿದ್ಯಾರ್ಥಿಯಾದ ನಿನಾದ್ ಸೂರ್ಯ ಸಂಗೀತ ವಾದ್ಯವನ್ನು ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂತರರಾಷ್ರ್ಟೀಯ ಸಂಗೀತ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿನಿಯರಾದ ಸುಪ್ರಿಯ ಮತ್ತು ಸಿರಿಗೌರಿ.ಪಿ.ಶೆಟ್ಟಿ ವೀಣಾ ವಾದನದ ನುಡಿಸಿದರು.

ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಎಸ್.ಎಂ. ಪೃಥ್ವೀಶ ಮಾತನಾಡುತ್ತಾ ಬಿಡುವಿನ ವೇಳೆಯಲ್ಲಿ ಮನೆಯ ಹಿರಿಯರಿಂದ ಸಂಗೀತದ ಅಭ್ಯಾಸವನ್ನು ಮಾಡಿ, ಇದು ಮನಸ್ಸಿಗೆ ಉಲ್ಲಾಸ ನೀಡುತ್ತದೆ, ಎಂದು ಕಿವಿ ಮಾತುಗಳನ್ನು ಹೇಳಿದರು. ಹಾಗೂ ಪುರಂದರದಾಸರ ಕೀರ್ತನೆಯನ್ನು ಹೇಳಿಕೊಡುವ ಮೂಲಕ ಮಕ್ಕಳನ್ನು ಆಕರ್ಷಿಸಿದರು.

ನಂತರ ಕಾರ್ಯಕ್ರಮಕ್ಕೆ ಅತಿಥಿಗಳಾದ ಆಗಮಿಸಿದ ಶ್ರೀಯುತ ತೋಟಪ್ಪ ಉತ್ತಂಗಿ, ಗಾನಯೋಗಿ ಬಳಗದ ಅಧ್ಯಕ್ಷರು, “ಮುರುಘಾಮಠದ ಜಮುರ ಕಲಾಲೋಕದ ಪ್ರಸಿದ್ದ ಹಿಂದೂಸ್ಥಾನಿ ಗಾಯಕರು” ಇವರು ವಿದ್ಯಾರ್ಥಿಗಳಿಗೆ ದಿನದ ವಿಶೇಷತೆಯ ಕುರಿತಾಗಿ ಸಂಗೀತದ ಇತಿಹಾಸ, ಬೆಳವಣಿಗೆ, ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿಸಿಕೊಟ್ಟರು. ಅಷ್ಟೇ ಅಲ್ಲದೆ ಅಲ್ಲಮ ಪ್ರಭುಗಳ ವಚನವನ್ನು ಹೇಳಿಕೊಟ್ಟರು. ಸಂಗೀತದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗುತ್ತದೆ ಎಂದು ಹೇಳಿದರು.

4ನೇ ತಗರತಿ, 5ನೇ ತಗರತಿಯ ಮಕ್ಕಳು ಭಾವಗೀತೆ 6ನೇ ತರಗತಿಯ ವಿದ್ಯಾರ್ಥಿಗಳು ಜನಪದ ಗೀತೆಯನ್ನು ಹಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ರಿತಿಕಾ.ವಿ ಹಾಗೂ ಕೀರ್ತಿಭೂಷಣ್ ರೆಡ್ಡಿ ನೆರವೇರಿಸಿದರು. ಅತಿಥಿಗಳಾಗಿ ಆಗಮಿಸಿದ ಶ್ರೀಯುತ ತೋಟಪ್ಪ ಉತ್ತಂಗಿ ಅವರನ್ನು ಸಂಸ್ಥೆಯ ನಿರ್ದೇಶಕರಾದ ಶ್ರೀಯುತ ಎಸ್.ಎಂ. ಪೃಥ್ವೀಶ ಅವರು ಸನ್ಮಾನಿಸಿದರು.

Leave a Reply

Your email address will not be published. Required fields are marked *