ಮಹರಾಜ್‌-ರಬಾಡ ರಗಡ್‌ ಬೌಲಿಂಗ್‌, ಇಂಗ್ಲೆಂಡ್‌ ಜೇಬಿನಲ್ಲಿದ್ದ ಗೆಲುವು ಕಸಿದ ಹರಿಣಗಳು!

ಟಿ20 ವಿಶ್ವಕಪ್‌ನ ಸೂಪರ್‌ 8 ಪಂದ್ಯದಲ್ಲಿ ಇಂದು ಇಂಗ್ಲೆಂಡ್‌ ಹಾಗೂ ಸೌತ್‌ ಆಫ್ರಿಕಾ ಮುಖಾಮುಖಿಯಾಗಿತ್ತು. ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಇದೇ ಅವರಿಗೆ ಶಾಪವಾಯ್ತಾ ಅನ್ನೋ ಪ್ರಶ್ನೆ ಎದ್ದಿದೆ. ಮೊದಲು ಬ್ಯಾಟ್‌ ಮಾಡಿದ ಸೌತ್‌ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 162 ರನ್‌‌ಗಳಿಸಿದ್ರು. ಈ ಗುರಿ ಬೆನ್ನತ್ತುವಲ್ಲಿ  ಮಾಜಿ ಚಾಂಪಿಯನ್‌ ಇಂಗ್ಲೆಂಡ್‌ ಯಶಸ್ವಿಯಾಯ್ತು. ಸೌತ್‌ ಆಫ್ರಿಕಾ ಪರವಾಗಿ ಕಣಕ್ಕಿಳಿದ ಡಿ ಕಾಕ್‌ ಹಾಗೂ ಡೇವಿಡ್‌ ಮಿಲ್ಲರ್‌ ತಂಡದ ಮೊತ್ತ 162 ರನ್‌ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಡಿ ಕಾಕ್‌ 38 ಬಾಲ್‌‌ಗಳಲ್ಲಿ ಭರ್ಜರಿ ಅರ್ಧ ಶತಕ ಬಾರಿಸಿ 65 ರನ್‌‌ಗಳಿಸಿ ಔಟಾದ್ರು. ಡೇವಿಡ್ ಮಿಲ್ಲರ್‌ 28 ಬಾಲ್‌‌ಗಳಲ್ಲಿ 43 ರನ್‌ಗಳಿಸಿ ತಂಡಕ್ಕೆ ಆಸರೆಯಾದ್ರು. ಇಂಗ್ಲೆಂಡ್‌‌ 20 ಓವರ್‌ಗಳಲ್ಲಿ ವಿಕೆಟ್‌ ಕಳೆದುಕೊಂಡು ರನ್‌‌ಗಳಿಸಲಷ್ಟೇ ಸಾಧ್ಯವಾಯ್ತು.

ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ!

162 ರನ್‌ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತ ಎದುರಾಯ್ತು. ಕೇವಲ 15 ರನ್‌ಗಳಿಸುವಷ್ಟರಲ್ಲೇ ಫಿಲ್‌ ಸಾಲ್ಟ್‌ ಔಟಾದ್ರು. 43 ರನ್‌‌ಗಳಿಸಿದ್ದಾಗ ಜಾನಿ ಬ್ಯಾರಿಸ್ಟೋ ಕೂಡ ಔಟಾದ್ರು. 54 ರನ್‌‌ಗಳಿಸುವಷ್ಟರಲ್ಲಿ ನಾಯಕ ಜೋಸ್‌ ಬಟ್ಲರ್‌ 17 ರನ್‌‌ಗಳಿಸಿ ವಿಕೆಟ್‌ ಒಪ್ಪಿಸಿದ್ರು. ಮೊಯಿನ್‌ ಅಲಿ 9 ರನ್‌‌ಗಳಿಸಿ ಔಟಾದ್ರು. ಸೌತ್‌ ಆಫ್ರಿಕಾ ಪರ ಕಗ್ಗಿಸೋ ರಬಾಡ 2 ವಿಕೆಟ್‌ ಕಬಳಿಸಿದ್ರು.

ಬ್ರೂಕ್‌, ಲಿವಿಂಗ್‌ಸ್ಟನ್‌ ಸ್ಟನ್ನಿಂಗ್‌ ಬ್ಯಾಟಿಂಗ್!

ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ರೆ ಇತ್ತ ಬ್ರೂಕ್‌ ಹಾಗೂ ಲಿವಿಂಗ್‌ಸ್ಟನ್‌ ಇಂಗ್ಲೆಂಡ್‌ ತಂಡಕ್ಕೆ ಆಸರೆಯಾದ್ರು. ಸ್ಟನ್ನಿಂಗ್‌ ಬ್ಯಾಟಿಂಗ್ ಮಾಡಿ ಗೆಲುವಿನ ಸನಿಹ ಹೋಗಿದ್ರು. ಆದರೆ ಸೌತ್‌ ಆಫ್ರಿಕಾ ಬೌಲರ್ಸ್‌ಗಳ ಶಿಸ್ತು ಬದ್ಧಿನ ದಾಳಿಗೆ ಮಾಜಿ ಚಾಂಪಿಯನ್‌ ಸೋಲಬೇಕಾಯ್ತು. ಬ್ರೂಕ್‌ 53 ರನ್‌‌ಗಳಿಸಿ ಔಟಾದ್ರೆ, ಲಿವಿಂಗ್‌ಸ್ಟನ್‌ 33 ರನ್‌ಗಳಿಸಿ ಔಟಾದ್ರು.

ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್ (ಡಬ್ಲ್ಯೂ), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ಸಿ), ಡೇವಿಡ್ ಮಿಲ್ಲರ್, ಹೆನ್ರಿಕ್ ಕ್ಲಾಸೆನ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಆನ್ರಿಚ್ ನಾರ್ಟ್ಜೆ, ಒಟ್ನೀಲ್ ಬಾರ್ಟ್‌ಮನ್

ಇಂಗ್ಲೆಂಡ್ (ಪ್ಲೇಯಿಂಗ್ XI):ಫಿಲಿಪ್ ಸಾಲ್ಟ್, ಜೋಸ್ ಬಟ್ಲರ್ (w/c), ಹ್ಯಾರಿ ಬ್ರೂಕ್, ಜಾನಿ ಬೈರ್‌ಸ್ಟೋ, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟೋ

Source : https://kannada.news18.com/news/sports/t20-world-cup-super-8-live-updates-rsa-vs-eng-south-africa-won-by-7-runs-vdd-1749008.html

Views: 0

Leave a Reply

Your email address will not be published. Required fields are marked *