IND vs BAN : ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್‌ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಬಾಂಗ್ಲಾ ಭಾರತದ ಎದುರು ಮಂಡಿಯೂರಿದೆ.
ಜೂನ್ 22 ಶನಿವಾರ, 2024ರ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 8ನಲ್ಲಿ ಟೀಂ ಇಂಡಿಯಾ ಎದುರು ಬಾಂಗ್ಲಾದೇಶ ಕಣಕ್ಕಿಳಿದಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಗ್ರೂಪ್ ಹಂತದಲ್ಲಿ 3 ಪಂದ್ಯಗಳನ್ನು ಮತ್ತು ಸೂಪರ್-8 ಹಂತದಲ್ಲಿ 1 ಪಂದ್ಯವನ್ನು ಗೆದ್ದಿತ್ತು. ಇಂದು ಬಾಂಗ್ಲಾದೇಶದ ವಿರುದ್ಧ ಗೆದ್ರೆ ಟೀಂ ಇಂಡಿಯಾ ಸೆಮಿಸ್ ಹಾದಿ ಸುಲಭವಾಗಲಿದೆ ಎಂದು ಹೇಳಲಾಗ್ತಿತ್ತು. ಅದರಂತೆ ಟೀಂ ಇಂಡಿಯಾ ಗೆದ್ದು ಸೆಮಿಸ್ ಹಾದಿ ಸುಗುಮಗೊಳಿಸಿಕೊಂಡಿದೆ. ಟಾಸ್ ಗೆದ್ದ ಬಾಂಗ್ಲಾ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್‌ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಬಾಂಗ್ಲಾ ಭಾರತದ ಎದುರು ಮಂಡಿಯೂರಿದೆ. ಬಾಂಗ್ಲಾ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 146 ರನ್‌ನಷ್ಟೇ ಗಳಿಸಿತು.
ಉತ್ತಮ ಆರಂಭ ಪಡೆದಿದ್ದ ಬಾಂಗ್ಲಾ ಬ್ಯಾಟರ್ಸ್!
197 ಬಿಗ್ ಟಾರ್ಗೆಟ್ ಚೇಸ್ ಮಾಡಲು ಬಂದ ಬಾಂಗ್ಲಾ ಬ್ಯಾಟರ್ಸ್ ಉತ್ತಮ ಆರಂಭ ಪಡೆದಿದ್ರು. 35 ರನ್‌ಗಳಿಸಿದ್ದಾ ಬಾಂಗ್ಲಾ ತನ್ನ ಮೊದಲ ವಿಕೆಟ್ ಕಳೆದುಕೊಂಡ್ರು. ಲಿಟ್ಟನ್ ದಾಸ್ 13 ರನ್‌ಗಳಿಸಿ ಔಟಾದ್ರು. 29 ರನ್‌ಗಳಿಸಿ ಹಸನ್ ಔಟಾದ್ರು. ಇನ್ನೂ ತೌಹಿದ್ ಹೃದಯೊಯ್ ಕೇವಲ 6 ರನ್‌ಗಳಿಸಿ ಔಟಾದ್ರು. ಶಕೀಬ್ ಅಲ್ ಹಸನ್ ಕೂಡ 11 ರನ್‌ಗಳಿಸಿ ಔಟಾದ್ರು. ನಜ್ಮುಲ್ ಹೊಸೈನ್ ಶಾಂತೋ 40 ರನ್‌ಗಳಿಸಿ ಔಟಾದ್ರು. ಜಾಕರ್ ಅಲಿ ಕೇವಲ 1 ರನ್‌ಗಳಿಸಿ ಔಟಾದ್ರು.
ಸ್ಪಿನ್ ಮಾಂತ್ರಿಕ ಕುಲದೀಪ್ ಮ್ಯಾಜಿಕ್!
ವೆಸ್ಟ್ ಇಂಡೀಸ್ ಪಿಚ್ ತುಂಬಾ ಸ್ಲೋ ಅಂತ ಎಲ್ಲರಿಗೂ ಗೊತ್ತಿತ್ತು. ಹೀಗಾಗಿಯೇ ಭಾರತಕ್ಕೆ ಇದು ಪ್ಲಸ್ ಆಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ರು. ಯಾಕಂದ್ರೆ ಭಾರತ ತಂಡದಲ್ಲಿ ಟಾಪ್ ಸ್ಪಿನ್ನರ್ಸ್ ಇದ್ದಾರೆ. ಅದರಲ್ಲೂ ಚೈನಾಮನ್ ಕುಲದೀಪ್ ಯಾದವ್ ಮ್ಯಾಜಿಕ್ ಮಾಡಿದ್ದಾರೆ. ಪ್ರಮುಖ ಮೂರು ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ರಿಶಾದ್ ಹೊಸೈನ್ 24 ರನ್‌ಗಳಿಸಿ ಔಟಾದ್ರು.
ಟೀಂ ಇಂಡಿಯಾ ಪರ ಕುಲದೀಪ್ 3 ವಿಕೆಟ್, ಬುಮ್ರಾ 2 ವಿಕೆಟ್, ಹಾರ್ದಿಕ್ 1 ವಿಕೆಟ್ ಹಾಗೂ ಅರ್ಶದೀಪ್ 2 ವಿಕೆಟ್ ಪಡೆದುಕೊಂಡ್ರು. ಇನ್ನೂ ಗ್ರೂಪ್ 1ನಲ್ಲಿ ಮೊದಲ ಸ್ಥಾನ ಪಡೆದುಕೊಂಡು ಸೆಮಿಸ್ ದಾರಿಯನ್ನು ಸುಗಮಗೊಳಿಸಿದೆ.
ಟೀಂ ಇಂಡಿಯಾಗೆ ಕೈ ಕೊಟ್ಟ ಓಪನರ್ಸ್
ಟಿ20 ವಿಶ್ವಕಪ್ 2024 ಆರಂಭವಾಗಿನಿಂದಲೂ ಟೀಂ ಇಂಡಿಯಾ ಓಪನಿಂಗ್ ಮೇಲೆ ಫ್ಯಾನ್ಸ್ ಗರಂ ಆಗಿದ್ದರು. ಐಪಿಎಲ್‌ನಲ್ಲಿ ಅದ್ಭುತವಾಗಿ ಓಪನಿಂಗ್ ಮಾಡ್ತಿದ್ದ ಕೊಹ್ಲಿ ಇಲ್ಲಿ ಫೇಲ್ ಆಗ್ತಿದ್ದಾರೆ. ಪದೇ ಪದೇ ಇದೇ ಆಗುತ್ತಿದೆ. ಆದರೆ ಇಂದು ಮತ್ತೆ ರೋಹಿತ್ ಕೈ ಕೊಟ್ಟಿದ್ದಾರೆ. ಕೊಹ್ಲಿ-ರೋಹಿತ್ ಜೋಡಿಯಿಂದ ಈ ಟೂರ್ನಿಯಲ್ಲಿ ಹೆಚ್ಚು ರನ್ ಬಂದೇ ಇಲ್ಲ. ಹೀಗಾಗಿ ಇಂದು ಕೊಹ್ಲಿ ಬದಲು ಬೇರೆಯವರು ರೋಹಿತ್ ಜೊತೆ ಓಪನಿಂಗ್ ಮಾಡ್ತಾರೆ ಅಂತ ಫ್ಯಾನ್ಸ್ ಅಂದುಕೊಂಡಿದ್ದರು.
ಆದರೆ ಮತ್ತೆ ಈ ಜೋಡಿಯೇ ಇಂದು ಓಪನಿಂಗ್ ಮಾಡಿತು. ಹಿಂದಿನ ಪಂದ್ಯಗಳಂತೆ ಈ ಪಂದ್ಯ ಆರಂಭ ಸ್ಲೋ ಆಗಿರಲಿಲ್ಲ. ಮೊದಲ ಬಾಲ್‌ನಿಂದಲೇ ಇಬ್ಬರು ದೊಡ್ಡ ಹೊಡೆತಗಳನ್ನು ಬಾರಿಸಿದರು.ಈ ಪ್ರಯತ್ನದಲ್ಲೇ ಮತ್ತೆ ರೋಹಿತ್ ಶರ್ಮಾ ಔಟಾದ್ರು. 11 ಬಾಲ್‌ಗಳಲ್ಲಿ 23 ರನ್‌ಗಳಿಸಿ ಔಟಾದ್ರು. ಆದರೆ 3 ಫೋರ್ ಒಂದು ಭರ್ಜರಿ ಸಿಕ್ಸರ್ ಸಿಡಿಸಿ ಅಭಿಮಾನಿಗಳಲ್ಲಿ ಆಸೆ ಹುಟ್ಟಿಸಿದರು. ಇಂದು ದೊಡ್ಡ ಸ್ಕೋರ್ ಮಾಡ್ತಾರೆ ಅಂದುಕೊಳ್ಳುವಾಗಲೇ ಔಟಾದ್ರು. ಕೊಹ್ಲಿ 37 ರನ್‌ಗಳಿಸಿ ಔಟಾದ್ರೆ, ಪಂತ್ 36 ರನ್‌ಗಳಿಸಿ ಔಟಾದ್ರು.
ಸಿಕ್ಸರ್ ಬಾರಿಸಿ ಔಟಾದ ಸೂರ್ಯ!
ಕಳೆದ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದ ಸೂರ್ಯ ಇಂದಿನ ಪಂದ್ಯದಲ್ಲಿ ಎರಡು ಎಸೆತಗಳನ್ನು ಎದುರಿಸಿ ಔಟಾದ್ರು. ಮೊದಲ ಬಾಲ್ ಸಿಕ್ಸರ್ ಬಾರಿಸಿ ಆಸೆ ಮೂಡಿಸಿದ್ರು. ಆದ್ರೆ ಇದರ ಮುಂದಿನ ಬೌಲ್‌ನಲ್ಲಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ರು. ಇನ್ನೂ ಶಿವಂ ದುಬೆ 34 ರನ್ ಬಾರಿಸಿ ಔಟಾದ್ರು.
ಅರ್ಧಶತಕ ಬಾರಿಸಿದ ಹಾರ್ದಿಕ್ ಪಾಂಡ್ಯ!
ಹಾರ್ದಿಕ್ ಪಾಂಡ್ಯ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಭರ್ಜರಿ ಅರ್ಧಶತಕ ಬಾರಿಸಿ ಟೀಂ ಇಂಡಿಯಾ 196 ರನ್‌ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಟೀಂ ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್‌ಗಳಿಸಿದೆ. ಸೂಪರ್ 8ನಲ್ಲೇ ಗರಿಷ್ಠ ರನ್ ಇದಾಗಿದೆ. ಬಾಂಗ್ಲಾಗೆ ಗೆಲ್ಲಲು 197 ರನ್‌ಗಳ ಅವಶ್ಯಕತೆ ಇದೆ.