ಸೆಮಿ ಫೈನಲ್ 1ರಲ್ಲಿ ಆಫ್ಘಾನಿಸ್ತಾನ ಮಣಿಸಿ ಫೈನಲ್ ಪ್ರವೇಶಿಸಿದ ಸೌತ್ ಆಫ್ರಿಕಾ, ಐತಿಹಾಸಿಕ ಗೆಲುವು.

1992 ರಿಂದ ವಿಶ್ವಕಪ್​ ನಲ್ಲಿ ಆಫ್ರಿಕನ್ನರು ಒಮ್ಮೆಯೂ ಫೈನಲ್ ಪ್ರವೇಶಿಸಿರಲಿಲ್ಲ. ಟ್ರಿನಿಡಾಡ್​ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಮೊದಲ ಓವರ್​ನಿಂದಲೇ ಸಂಘಟಿತವಾಗಿ ದಕ್ಷಿಣ ಆಫ್ರಿಕಾ ತಂಡದ ಬೌಲರ್​ಗಳು ಆರಂಭದಲ್ಲಿಯೇ ಗೆಲುವು ಸಾಧಿಸುತ್ತಾ ಹೋದರು. ಹೆಂಡ್ರಿಕ್ಸ್ ಮೊದಲ ಬಾಲ್‌ನಲ್ಲಿ ಸಿಂಗಲ್ ನ್ನು ಆರಿಸಿದಾಗ ಓಮರ್ಜೈ ಮುಂದುವರಿದರು. ಮಾರ್ಕ್ರಾಮ್ ಅವರು ವೇಗಿಗಳನ್ನು ಮಿಡ್-ಆಫ್‌ನಲ್ಲಿ ಬೌಂಡರಿಗಾಗಿ ಮೇಲಕ್ಕೆತ್ತಿ ಆಕ್ರಮಣವನ್ನು ಮುಂದುವರೆಸಿದರು. ಒಮರ್ಜಾಯ್ ನೋ ಬಾಲ್ ಮತ್ತು ಫ್ರೀ ಹಿಟ್ ಎಸೆತವನ್ನು ಬಿಟ್ಟುಕೊಡಲು ಅತಿಕ್ರಮಿಸಿದ್ದಾರೆ.

ಮೊದಲ ಬಾರಿಗೆ ಫೈನಲ್ ಪ್ರವೇಶ: ದಕ್ಷಿಣ ಆಫ್ರಿಕಾ 67 ಎಸೆತಗಳು ಬಾಕಿ ಇರುವಂತೆಯೇ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿತು. ಹೆಂಡ್ರಿಕ್ಸ್ 25 ಎಸೆತಗಳಲ್ಲಿ 29 ರನ್ ಸಿಡಿಸಿದರೆ, ಮಾರ್ಕ್ರಾಮ್ 21 ಎಸೆತಗಳಲ್ಲಿ 23 ರನ್ ಗಳಿಸಿದರು, ಈ ಹಿಂದೆ ದಕ್ಷಿಣ ಆಫ್ರಿಕಾ ಅಂತಿಮ ಸೆಮಿಸ್‌ ಪಂದ್ಯಗಳಲ್ಲಿ ಏಳು ಬಾರಿ ಸೋತ ನಂತರ ತಮ್ಮ ಮೊದಲ ವಿಶ್ವಕಪ್ ಫೈನಲ್‌ಗೆ ಈ ಬಾರಿ ಪ್ರವೇಶಿಸಿದ್ದಾರೆ.

ಮಾರ್ಕೊ ಯಾನ್ಸೆನ್ ಮೊದಲ ಓವರ್​ನಲ್ಲೇ ರಹಮಾನುಲ್ಲಾ ಗುರ್ಬಾಝ್ (0) ವಿಕೆಟ್ ಪಡೆದರೆ, ಆ ಬಳಿಕ ಬಂದ ಗುಲ್ಬದ್ದಿನ್ ನೈಬ್ (9) ಕ್ಲೀನ್ ಬೌಲ್ಡ್ ಆದರು. ಇಬ್ರಾಹಿಂ ಝದ್ರಾನ್ (2) ರಬಾಡ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ಅಝ್ಮತುಲ್ಲಾ ಒಮರ್​ಝಾಹಿ 10 ರನ್​ಗಳಿಸಿದರೂ ಅನ್ರಿಕ್ ನೋಕಿಯಾ ಎಸೆತದಲ್ಲಿ ಔಟಾದರು. ಅನುಭವಿ ಬ್ಯಾಟರ್ ಮೊಹಮ್ಮದ್ ನಬಿ ಸೊನ್ನೆ ಸುತ್ತಿದರೆ, ನಂಗೆಯಾಲಿಯಾ ಖರೋಟೆ 2 ರನ್​ಗಳಿಸಿ ಔಟಾದರು. ಪರಿಣಾಮ 23 ರನ್​ ಕಲೆಹಾಕುವಷ್ಟರಲ್ಲಿ ಅಫ್ಘಾನಿಸ್ತಾನ್ ತಂಡವು 5 ವಿಕೆಟ್ ಕಳೆದುಕೊಂಡಿತು. ಆ ಬಳಿಕ ಬಂದ ಕರೀಮ್ ಜನ್ನತ್ (8) ಮತ್ತು ರಶೀದ್ ಖಾನ್ (8) ಅಲ್ಪ ಹೊತ್ತು ಕ್ರೀಸ್​ನಲ್ಲಿದ್ದರು. ಇವರಿಬ್ಬರ ಪತನದೊಂದಿಗೆ ಪೆವಿಲಿಯನ್ ಪರೇಡ್ ಮುಂದುವರೆಸಿದ ಅಫ್ಘಾನಿಸ್ತಾನ್ ತಂಡ 11.5 ಓವರ್​ಗಳಲ್ಲಿ 56 ರನ್​ಗಳಿಸಿ ಆಲೌಟ್ ಆಯಿತು.

ಸೌತ್ ಆಫ್ರಿಕಾ ಪರ ತಬ್ರೇಝ್ ಶಂಸಿ ಹಾಗೂ ಮಾರ್ಕೊ ಯಾನ್ಸೆನ್ ತಲಾ 3 ವಿಕೆಟ್ ಪಡೆದರೆ, ಕಗಿಸೊ ರಬಾಡ ಹಾಗೂ ಅನ್ರಿಕ್ ನೋಕಿಯಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು. ನಾಡಿದ್ದು ಭಾನುವಾರ ಜೂನ್ 29 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

Leave a Reply

Your email address will not be published. Required fields are marked *