ಸೇಡಿನ ಸಮರದಲ್ಲಿ ಆಂಗ್ಲರನ್ನು ಬಗ್ಗುಬಡಿದು ಫೈನಲ್​ಗೇರಿದ ಭಾರತ..!

2022 ರ ಟಿ20 ವಿಶ್ವಕಪ್‌‌ ಸೆಮಿಸ್ ಸೋಲಿನ ಸೇಡು ತೀರಿಸಿಕೊಂಡಿದೆ ಟೀಂ ಇಂಡಿಯಾ. ಟಾಸ್‌ ಗೆದ್ದಯ ಇಂಗ್ಲೆಂಡ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.  ಟೀಂ ಇಂಡಿಯಾ ಬೌಲರ್ಸ್‌ಗಳ ಅದ್ಭುತ ಬೌಲಿಂಗ್‌ನಿಂದ ಗೆದ್ದು ಬೀಗಿದೆ. 2022 ರ ಸೆಮಿಸ್‌ ಸೋಲಿನ ಸೇಡು ತೀರಿಸಿಕೊಂಡಿದೆ ಭಾರತ. ಶನಿವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸೌತ್‌ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ. ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ 171 ರನ್‌ಗಳಿಸಿತ್ತು. 172 ರನ್‌‌ಗಳ ಗುರಿ ಬೆನ್ನತ್ತಿ ಬ್ಯಾಟಿಂಗ್‌ಗೆ ಬಂದ ಇಂಗ್ಲೆಂಡ್‌ ಬ್ಯಾಟರ್ಸ್‌ಗೆ ಟೀಂ ಇಂಡಿಯಾ ಬೌಲರ್ಸ್‌ ಚಳ್ಳೆ ಹಣ್ಣು ತಿನ್ನಿಸಿದ್ರು. ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ. ಇಂಗ್ಲೆಂಡ್ 20 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು 103 ರನ್‌‌ಗಳಿಸಿ ಟೀಂ ಇಂಡಿಯಾ ಎದುರು ಮಂಡಿಯೂರಿತು.

ಟೀಂ ಇಂಡಿಯಾ ಬೌಲರ್ಸ್ ಮ್ಯಾಜಿಕ್‌!

ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ಸ್ ಅದ್ಭುತ ಬೌಲಿಂಗ್ ಮಾಡಿದ್ರು. 172 ರನ್‌ ಟಾರ್ಗೆಟ್‌ ಇಂಗ್ಲೆಂಡ್‌ಗೆ ಏನೂ ಅಲ್ಲ ಕೆಲವರು ಅಂದುಕೊಂಡಿದ್ರು. ಆದರೆ ಟೀಂ ಇಂಡಿಯಾ ಬೌಲರ್ಸ್‌ ಇಂಗ್ಲೆಂಡ್‌ ಬ್ಯಾಟರ್ಸ್‌ಗೆ ಕಾಟ ಕೊಟ್ರು. 23 ರನ್‌ಗಳಿಸಿ ಅಪಾಯಕಾರಿಯಾಗಿ ಕಾಣಿಸುತ್ತಿದ್ದ ಬಟ್ಲರ್‌ ಅವರನ್ನು ಅಕ್ಷರ್ ಪಟೇಲ್‌ ತಮ್ಮ ಮೊದಲ ಓವರ್‌ನ ಮೊದಲ ಬಾಲ್‌‌ನಲ್ಲಿ ವಿಕೆಟ್‌ ಪಡೆದುಕೊಂಡ್ರು. ಬಟ್ಲರ್‌ ಪಂತ್‌ಗೆ ಕ್ಯಾಚ್ ನೀಡಿ ಔಟಾದ್ರು.

ಬುಮ್‌ ಬುಮ್‌ ಬುಮ್ರಾ ಮ್ಯಾಜಿಕ್!

ಇದರ ಹಿಂದೆಯೇ ಸಾಲ್ಟ್‌ ಅವರನ್ನು ಬುಮ್‌ ಬುಮ್‌ ಬುಮ್ರಾ ಕ್ಲೀನ್‌ ಬೋಲ್ಡ್‌ ಮಾಡಿದ್ರು. 5 ರನ್‌‌ಗಳಿಸಿ ಸಾಲ್ಟ್‌ ಔಟಾದ್ರು. ಇನ್ನೂ ಅಕ್ಷರ್ ಪಟೇಲ್‌ ತಮ್ಮ ಎರಡನೇ ಓವರ್‌‌ನ ಮೊದಲ ಎಸೆತದಲ್ಲೇ ಮತ್ತೆ ಬ್ಯಾರಿಸ್ಟೋ ಅವರು ಕ್ಲೀನ್‌ ಬೋಲ್ಡ್‌ ಆದ್ರು. ಇನ್ನೂ ಅಕ್ಷರ್ ಪಟೇಲ್‌ ತಮ್ಮ ಮೂರನೇ ಓವರ್‌ನಲ್ಲಿ ಮೊಯಿನ್‌ ಅಲಿ ಅವರನ್ನು ಔಟ್ ಮಾಡಿದ್ರು. ಅಕ್ಷರ್ ಎಸೆದ ಬೌಲ್‌ ಜಡ್ಜ್‌ ಮಾಡಲಾಗದೇ ಅಲಿ ಸ್ಟಂಪ್‌ ಔಟಾದ್ರು.

ಕುಲದೀಪ್‌ ಸ್ಪಿನ್‌ ದಾಳಿ!

ಇನ್ನೂ ಇದಾದ ಬಳಿಕ ಕುಲದೀಪ್‌ ಓವರ್‌ನಲ್ಲಿ ಸ್ಯಾಮ್‌ ಕರನ್‌ ಎಲ್‌ಬಿಡಬ್ಲೂ ಆದ್ರು. ಅಲ್ಲಿಗೆ ಇಂಗ್ಲೆಂಡ್‌ 49 ರನ್‌ಗಳಿಗೆ 5 ವಿಕೆಟ್‌‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕುಲದೀಪ್ ಮತ್ತೆ ತಮ್ಮ ಮೂರನೇ ಓವರ್‌ನಲ್ಲಿ ಹ್ಯಾರಿ ಬ್ರೂಕ್‌ ಅವರನ್ನು ಕ್ಲೀನ್‌ ಬೋಲ್ಡ್‌ ಮಾಡಿದ್ರು. ಇನ್ನೂ ಕಡೆ ಓವರ್ ಮಾಡಲು ಬಂದ ಕುಲದೀಪ್‌ ಜೋರ್ಡಾನ್‌ ಅವರನ್ನು ಎಲ್‌ಬಿಡಬ್ಲೂ ಮಾಡಿದ್ರು.

ಇನ್ನೂ ಅಕ್ಷರ್‌ ಕೊನೆ ಓವರ್‌ ಬೌಲಿಂಗ್‌‌ನಲ್ಲಿ ಲಿವಿಂಗ್‌ಸ್ಟರ್‌ ರನೌಟ್‌ ಆದ್ರು. ಇನ್ನೂ 15ನೇ ಓವರ್ ಮಾಡಲು ಬಂದ ಹಾರ್ದಿಕ್‌ ಅವರು ಎಸೆದ ಮೊದಲ ಎಸೆತದಲ್ಲಿ ಆದಿಲ್ ರಶೀದ್‌ ರನೌಟ್‌ ಆದ್ರು. ಇನ್ನೂ ಬುಮ್ರಾ ಅವರ ಓವರ್‌ನಲ್ಲಿ ಆರ್ಚರ್‌ ಎಲ್‌ಬಿಡಬ್ಲೂಗೆ ಔಟಾದ್ರು. 10 ವರ್ಷಗಳ ನಂತ್ರ ಭಾರತ ಮತ್ತೊಮ್ಮೆ ಫೈನಲ್‌ಗೆ ತಲುಪಲಿದೆ. ಹಾಲಿ ಚಾಂಪಿಯನ್ಸ್‌ಗೆ ಸೋಲುಣಿಸಿ ಟೀಂ ಇಂಡಿಯಾ ಗೆದ್ದು ಬೀಗಿದೆ.

ರೋಹಿತ್ ಶರ್ಮಾ ಅರ್ಧ ಶತಕ!

ಮೊದಲು ಬ್ಯಾಟ್ ಮಾಡಲು ಬಂದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯ್ತು. ವಿರಾಟ್‌ ಕೊಹ್ಲಿ ಮತ್ತೊಮ್ಮೆ ಫೇಲ್ ಆದ್ರು. ಕೇವಲ 9 ರನ್‌ಗಳಿಸಿ ಕ್ಲೀನ್‌ ಬೋಲ್ಡ್‌ ಆದ್ರು. ಇದಾದ ಬಳಿಕ ರಿಷಭ್‌ ಪಂತ್‌ ಕೂಡ ಕೇವಲ 4 ರನ್‌ಗಳಿಸಿ ಕ್ಯಾಚ್ ನೀಡಿ ಔಟಾದ್ರು. 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಮತ್ತೆ ಆಸರೆಯಾಗಿತ್ತು ನಾಯಕ ರೋಹಿತ್‌ ಶರ್ಮಾ. ಹಿಟ್‌ ಮ್ಯಾನ್ ಮತ್ತೊಂದು ಭರ್ಜರಿ ಅರ್ಧ ಶತಕ ಬಾರಿಸಿದ್ರು. ಮಳೆಯಿಂದ ಸ್ಥಗಿತಗೊಂಡಿದ್ದ ಪಂದ್ಯ ಮತ್ತೆ ಆರಂಭವಾಗ್ತಿದ್ದಂತೆ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್‌ ಮಾಡಿದ್ರು.

Source : https://kannada.news18.com/news/sports/t20-world-cup-2024-semi-final-ind-vs-eng-team-india-beats-england-by-68-runs-and-enters-to-finals-vdd-1756316.html

Leave a Reply

Your email address will not be published. Required fields are marked *