ಜಿಯೋ ಬೆನ್ನಲ್ಲೇ ಏರ್ಟೆಲ್​ನಿಂದಲೂ ಬೆಲೆ ಹೆಚ್ಚಳ; ಗ್ರಾಹಕರ ಕೈಸುಡಲಿದೆ ಮೊಬೈಲ್ ಬಿಲ್.

ನವದೆಹಲಿ, ಜೂನ್ 28: ಹತ್ತು ವರ್ಷಗಳ ಹಿಂದೆ ರಿಲಾಯನ್ಸ್ ಜಿಯೋ ಅಗ್ಗದ ದರಕ್ಕೆ ಮೊಬೈಲ್ ಮತ್ತು ಡಾಟಾ ನೀಡಿ ಬೆಲೆ ಸಮರಕ್ಕೆ ಅಡಿ ಇಟ್ಟಿತ್ತು. ಇದೀಗ ಬೆಲೆ ಏರಿಕೆಯಲ್ಲೂ ಮುಂದಾಳತ್ವ ವಹಿಸಿದೆ. ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಜಿಯೋ ನಿನ್ನೆ ವಿವಿಧ ಪ್ಲಾನ್​ಗಳಿಗೆ ಶೇ. 27ರವರೆಗೂ ಬೆಲೆ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಏರ್ಟೆಲ್ ಕೂಡ ಶೇ. 21ರವರೆಗೂ ಬೆಲೆ ಏರಿಸಲು ನಿರ್ಧರಿಸಿದೆ. ಎರಡೂ ಟೆಲಿಕಾಂ ಆಪರೇಟರ್​ಗಳ ಹೊಸ ದರಗಳು ಜುಲೈ 3ರಿಂದ ಜಾರಿಗೆ ಬರಲಿವೆ.

ರಿಲಾಯನ್ಸ್ ಜಿಯೋದ ದರ ಏರಿಕೆ ಶೇ. 12ರಿಂದ ಆರಂಭವಾಗಿ ಶೇ. 27ರವರೆಗೂ ಇದೆ. ಏರ್ಟೆಲ್​ನ ಏರಿಕೆಯು ಶೇ. 11ರಿಂದ ಆರಂಭವಾಗಿ ಶೇ. 21ರವರೆಗೂ ಇದೆ.

ಏರ್ಟೆಲ್​ನ ಪರಿಷ್ಕೃತ ಪ್ರೀಪೇಯ್ಡ್ ಪ್ಲಾನ್​ಗಳು (ಜುಲೈ 3ರಿಂದ ಜಾರಿ)

ಅನ್​ಲಿಮಿಟೆಡ್ ವಾಯ್ಸ್ ಪ್ಲಾನ್:

  • 179ರಿಂದ 199 ರೂಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
  • 455ರಿಂದ 509 ರೂಗೆ ಹೆಚ್ಚಳ (84 ದಿನ ವ್ಯಾಲಿಡಿಟಿ)
  • 1,799 ರೂನಿಂದ 1,999 ರೂಗೆ ಹೆಚ್ಚಳ (365 ದಿನ ವ್ಯಾಲಿಡಿಟಿ)

ಏರ್ಟೆಲ್ ಪ್ರೀಪೇಡ್ ನಿತ್ಯದ ಡಾಟಾ ಪ್ಲಾನ್​ಗಳು

  • 265 ರೂನಿಂದ 299 ರೂಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
  • 299 ರೂನಿಂದ 349 ರೂಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
  • 359ರೂನಿಂದ 409 ರೂಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
  • 399ರೂನಿಂದ 449 ರೂಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
  • 479ರೂನಿಂದ 579 ರೂಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)
  • 549 ರೂನಿಂದ 649 ರೂಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)
  • 719 ರೂನಿಂದ 859 ರೂಗೆ ಹೆಚ್ಚಳ (84 ದಿನ ವ್ಯಾಲಿಡಿಟಿ)
  • 839ರೂನಿಂದ 979 ರೂಗೆ ಬೆಲೆ ಹೆಚ್ಚಳ (84 ದಿನ ವ್ಯಾಲಿಡಿಟಿ)
  • 2,999ರೂನಿಂದ 3,599 ರೂಗೆ ಹೆಚ್ಚಳ (365 ದಿನ ವ್ಯಾಲಿಡಿಟಿ)

ಏರ್ಟೆಲ್ ಪರಿಷ್ಕೃತ ಡಾಟಾ ಆಡಾನ್​ಗಳ ದರ

  • ಒಂದು ಜಿಬಿ ಹೆಚ್ಚುವರಿ ಡಾಟಾಗೆ 19ರೂನಿಂದ 22ರೂಗೆ ಹೆಚ್ಚಳ (1 ದಿನ ವ್ಯಾಲಿಡಿಟಿ)
  • ಎರಡು ಜಿಬಿ ಹೆಚ್ಚುವರಿ ಡಾಟಾ ದರ 29 ರೂನಿಂದ 33 ರೂಗೆ ಹೆಚ್ಚಳ (1 ದಿನ ವ್ಯಾಲಿಡಿಟಿ)
  • ನಾಲ್ಕು ಜಿಬಿ ಹೆಚ್ಚುವರಿ ಡಾಟಾಗೆ 65ರೂನಿಂದ 77 ರೂಗೆ ಬೆಲೆ ಹೆಚ್ಚಳ (ಪ್ಲಾನ್ ಕಾಲಮಿತಿಯವರೆಗೂ ವ್ಯಾಲಿಡಿಟಿ)

ಏರ್ಟೆಲ್ ಪೋಸ್ಟ್​ಪೇಡ್ ಪರಿಷ್ಕೃತ ದರ

  • 399 ರೂ ಪ್ಲಾನ್ ಬೆಲೆ 449 ರೂಗೆ ಏರಿಕೆ
  • 499 ರೂ ಪ್ಲಾನ್ ಬೆಲೆ 549 ರೂಗೆ ಏರಿಕೆ
  • 599 ರೂ ಪ್ಲಾನ್ ಬೆಲೆ 699 ರೂಗೆ ಏರಿಕೆ
  • 999 ರೂ ಪ್ಲಾನ್ ಬೆಲೆ 1,199 ರೂಗೆ ಏರಿಕೆ

Source : https://tv9kannada.com/business/airtel-and-jio-hike-mobile-tariffs-here-is-list-of-airtel-rates-details-in-kannada-snvs-857224.html

Leave a Reply

Your email address will not be published. Required fields are marked *