‘777 ಚಾರ್ಲಿ’ ಸಿನಿಮಾ 2022ರ ಜೂನ್ 10ರಂದು ಕರ್ನಾಟಕದಾದ್ಯಂತ ಬಿಡುಗಡೆ ಕಂಡಿತು. ಈಗ ಚಿತ್ರ ಜಪಾನ್ನಲ್ಲಿ ರಿಲೀಸ್ ಆಗಿದೆ. ವಿದೇಶದಲ್ಲೂ ಚಿತ್ರ ಈಗ ಮೆಚ್ಚುಗೆ ಪಡೆಯುತ್ತಿದೆ. ರಕ್ಷಿತ್ ಶೆಟ್ಟಿ ಅವರು ನಿರ್ಮಾಪಕನಾಗಿಯೂ ಹೆಸರು ಮಾಡುತ್ತಿದದ್ದಾರೆ. ಅವರು ‘777 ಚಾರ್ಲಿ’ ಚಿತ್ರದಿಂದ ಲಾಭ ಕಂಡಿದ್ದಾರೆ.
![](https://samagrasuddi.co.in/wp-content/uploads/2024/06/image-251-1024x576.png)
ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರೋ ‘777 ಚಾರ್ಲಿ’ ಸಿನಿಮಾ ಭರ್ಜರಿ ಗಳಿಕೆ ಮಾಡಿತ್ತು. 2022ರಲ್ಲಿ ರಿಲೀಸ್ ಆದ ಈ ಚಿತ್ರ ಪ್ರಾಣಿ ಪ್ರಿಯರ ಮನ ಗೆದ್ದಿತ್ತು. ಕಲ್ಲು ಹೃದಯಿಗಳ ಮನಸ್ಸನ್ನೂ ಈ ಸಿನಿಮಾ ಕರಗಿಸಿತ್ತು. ಅನೇಕರು ಈ ಚಿತ್ರ ನೋಡಿ ಕಣ್ಣೀರು ಹಾಕಿದ್ದರು. ಈಗ ಸಿನಿಮಾ ಜಪಾನ್ನಲ್ಲಿ ರಿಲೀಸ್ ಆಗಿದೆ. ಅಲ್ಲಿಯ ಭಾಷೆಗೆ ಡಬ್ ಆಗಿ ಚಿತ್ರ ರಿಲೀಸ್ ಆಗಿದೆ. ಅಲ್ಲಿಯೂ ಸಿನಿಮಾ ಮೆಚ್ಚುಗೆ ಪಡೆದಿದೆ.
ರಕ್ಷಿತ್ ಶೆಟ್ಟಿ ಅವರು ನಿರ್ಮಾಪಕನಾಗಿಯೂ ಹೆಸರು ಮಾಡುತ್ತಿದದ್ದಾರೆ. ಅವರು ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸುತ್ತಾರೆ ಎಂದಾಗಲೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಈ ಚಿತ್ರದ ಟೀಸರ್ ಹಾಗೂ ಟ್ರೇಲರ್ಗಳು ಗಮನ ಸೆಳೆದವು. ಈ ಸಿನಿಮಾ 2022ರ ಜೂನ್ 10ರಂದು ಕರ್ನಾಟಕದಾದ್ಯಂತ ಬಿಡುಗಡೆ ಕಂಡಿತು. ವಿದೇಶದಲ್ಲೂ ಚಿತ್ರ ಈಗ ಮೆಚ್ಚುಗೆ ಪಡೆಯುತ್ತಿದೆ.
ಭಾರತದ ಅನೇಕ ಸಿನಿಮಾಗಳು ಜಪಾನ್ನಲ್ಲಿ ರಿಲೀಸ್ ಆಗುತ್ತವೆ. ‘ಕೆಜಿಎಫ್ 2’, ‘ಆರ್ಆರ್ಆರ್’ ಮೊದಲಾದ ಸಿನಿಮಾಗಳು ಜಪಾನ್ನಲ್ಲಿ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿವೆ. ಈಗ ‘777 ಚಾರ್ಲಿ’ ಸಿನಿಮಾ ಸಮಯ. ಈ ಚಿತ್ರ ಜಪಾನ್ ಭಾಷೆಯಲ್ಲಿ ರಿಲೀಸ್ ಆಗಿದೆ.
ಸಿನಿಮಾ ಜೂನ್ 28ರಂದು ಜಪಾನ್ನಲ್ಲಿ ರಿಲೀಸ್ ಆಗಿದೆ. ಸಿನಿಮಾ ನೋಡಿದ ಅನೇಕರು ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಇದನ್ನು ರಕ್ಷಿತ್ ಶೆಟ್ಟಿ ಅವರು ರೀ-ಟ್ವೀಟ್ ಮಾಡಿಕೊಳ್ಳುತ್ತಿದ್ದಾರೆ. ಜಪಾನ್ ಮಂದಿಗೆ ಸಿನಿಮಾ ಸಖತ್ ಇಷ್ಟ ಆಗುತ್ತಿದೆ.