ಮದಕರಿ ಥೀಮ್ ಪಾರ್ಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಲಿದೆ : ಶಾಸಕ ರಘುಮೂರ್ತಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದಲ್ಲಿ ಅವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮದಕರಿ ಥೀಮ್ ಪಾರ್ಕನ್ನು ಮಾಡುವ ಭರವಸೆಯನ್ನು ನೀಡಿತ್ತು, ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಮದಕರಿ ನಾಯಕ ವಂಶಸ್ಥರು ,ಪಾಳೇಗಾರರು ಇರುವ ಈ ಜಾಗದಲ್ಲಿ ಮದಕರಿನಾಯಕ ಥೀಮ್ ಪಾರ್ಕನ್ನು ಮಾಡುತ್ತೇವೆ ಎಂದಿದ್ದರು. ಅದನ್ನು ಮಾಡಬೇಕು, ಇದರ ನಿರ್ಮಾಣಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ. ಕೇಂದ್ರದಲ್ಲಿ ಮಂಜೂರು ಮಾಡಿ ಸಹಕಾರ ನೀಡಿದರೆ ನಮ್ಮ ಸರ್ಕಾರವು ಸಹಾ ನೀಡುತ್ತದೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಕೇಂದ್ರ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು. 

ದಲಿತ ಮತ್ತು ಲಿಂಗಾಯತ ಸಮುದಾಯದವರು ಮುಖ್ಯಮಂತ್ರಿಯಾಗಬೇಕೆಂಬ ಹೇಳಿಕೆಯ ಬಗ್ಗೆ ಪಕ್ಷದ ಹೈಕಮಾಂಡ ನಿಗಾವನ್ನು ಇರಿಸಿದೆ. ಇದರ ಬಗ್ಗೆ ಗಮನವನ್ನು ಹರಿಸುತ್ತಿದೆ ಇಂದಿನ ದಿನಮಾನದಲ್ಲಿ ಇಂತಹ ಹೇಳಿಕೆ ಬರುವುದು ಸಾಮಾನ್ಯವಾಗಿದೆ ಇಂತಹ ಹೇಳಿಕೆಯ ಬಗ್ಗೆಯೂ ಸಹಾ ಪಕ್ಷದ ಮುಖಂಡರು ಗಮನ ಹರಿಸುತ್ತಿದ್ದಾರೆ ಮುಂದಿನ ದಿನದಲ್ಲಿ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಶಾಸಕ ರಘುಮೂರ್ತಿ ತಿಳಿಸಿದರು. 

Views: 0

Leave a Reply

Your email address will not be published. Required fields are marked *