ಚಿತ್ರದುರ್ಗ : ಅನುಪಮ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ’ ಚೈತನ್ಯ ಗುರುಕುಲ ಆಂಗ್ಲಮಾಧ್ಯಮ ಶಾಲೆ, ಸಂತೆಬೆನ್ನೂರು, ಚನ್ನಗಿರಿ (ತಾ), ಈ ಶಾಲೆಯ 26 ಮಕ್ಕಳಿಂದ “ನಮ್ಮ ದೇಶೀಯ ಕಲೆಯಾದ ಮಲ್ಲಗಂಬದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
![](https://samagrasuddi.co.in/wp-content/uploads/2024/07/image-33-300x287.png)
‘ಚೈತನ್ಯ ಗುರುಕುಲ ಆಂಗ್ಲಮಾಧ್ಯಮ ಶಾಲೆ, ಸಂತೆಬೆನ್ನೂರು, ಚನ್ನಗಿರಿ (ತಾ), ಈ ಶಾಲೆಯ 26 ಮಕ್ಕಳು “ನಮ್ಮ ದೇಶೀಯ ಕಲೆಯಾದ ಮಲ್ಲಗಂಬದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ಮಲ್ಲಗಂಬದ ವಿವಿಧ ಪಟ್ಟುಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ರಾಷ್ಟ್ರೀಯ ಮಟ್ಟದ ಮಲ್ಲಗಂಬದ ತರಬೇತುದಾರರಾದ ಶ್ರೀ ರುದ್ರಮುನಿಯವರ ನೇತೃತ್ವದಲ್ಲಿ ಮನಮೋಹಕವಾದ ಮಲ್ಲಕಂಬದ ವಿವಿಧ ಅದ್ಭುತ ಭಂಗಿ ಪ್ರದರ್ಶನಗಳನ್ನು ನೀಡಿದರು.”
![](https://samagrasuddi.co.in/wp-content/uploads/2024/07/image-35-279x300.png)
ಅನುಪಮ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್, ಚಿತ್ರದುರ್ಗ ಶಾಲೆಯ ಕಾರ್ಯದರ್ಶಿಗಳಾದ ರಕ್ಷಣ್.ಎಸ್.ಬಿ ‘ಮಲ್ಲಕಂಬ’ ದೇಶೀಯ ಕ್ರೀಡೆಯನ್ನು ಪ್ರತಿ ಶಾಲೆಯಲ್ಲಿ ಕಲಿಸಿ ಬೆಳೆಸುವುದು ನಮ್ಮ ಕರ್ತವ್ಯ. ನಮ್ಮ ಶಾಲೆಯ ವಿದ್ಯಾರ್ಥಿಗಳು ಮಲ್ಲಗಂಬ ಕ್ರೀಡೆಯನ್ನು ಕಲಿತು ಸದೃಡ ದೇಹವನ್ನು ಸದೃಡ ಮನಸ್ಸನ್ನು ಹೊಂದಲಿ ಎಂದು ಆಶಿಸಿದರು.
ಪ್ರಾಚಾರ್ಯರಾದ ಸಿ.ಡಿ.ಸಂಪತ್ ಕುಮಾರ್ರವರು ಮಾತನಾಡಿ ‘ಮಲ್ಲಕಂಬ’ ನಮ್ಮ ದೈಹಿಕ ಸಾಮರ್ಥ್ಯ, ಕುಸ್ತಿಯ ವಿವಿಧ ಪಟ್ಟುಗಳನ್ನು ಕಲಿಯಲು ಹಿಂದೆ ಕುಸ್ತಿಪಟುಗಳು ಬಳಸುತ್ತಿದ್ದರು ಎಂದರು.
![](https://samagrasuddi.co.in/wp-content/uploads/2024/07/image-37-135x300.png)
ಮಲ್ಲಗಂಬ ಮತ್ತು ಯೋಗದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಅನುಪಮ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಪರವಾಗಿ ಕಿರುಕಾಣಿಕೆಯನ್ನು ನೀಡಲಾಯಿತು. ‘ಚೈತನ್ಯ ಗುರುಕುಲ ಅಂಗ್ಲಮಾಧ್ಯಮ ಶಾಲೆಯ ನಿರ್ದೇಶಕರಾದ ಶ್ರೀ ಶಿವಸ್ವಾಮಿ ಮತ್ತು ಮಲ್ಲಗಂಬದ ತರಬೇತುದಾರರಾದ ಶ್ರೀ ರುದ್ರಮುನಿಯವರನ್ನು ಗೌರವಿಸಲಾಯಿತು.
![](https://samagrasuddi.co.in/wp-content/uploads/2024/07/image-34-300x135.png)
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಭಾಸ್ಕರ್.ಎಸ್, ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಹೆಡ್ ಕೋಆರ್ಡಿನೇಟರ್ ಕೆ.ಬಸವರಾಜ್, ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರು ಭಾಗವಹಿಸಿ ಮಲ್ಲಗಂಬದ ಪ್ರದರ್ಶನವನ್ನು ವೀಕ್ಷಿಸಿದರು.