ಕಾರ್ಮಿಕ ಸಂಘಟನೆಗಳು ಕಾರ್ಮಿಕರಲ್ಲಿ ಗೊಂದಲ ಸೃಷ್ಠಿಸುವ ಬದಲು, ಅವರ ಹಿತವನ್ನು ಕಾಯುವ ಕೆಲಸ ಮಾಡಬೇಕಿದೆ : ಕಾ||. ಕೆ.ಪ್ರಕಾಶ್.  

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ : ನಗರದ ಪತ್ರ್ರಕರ್ತರ ಭವನದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಸಂಘದ ಚಿತ್ರದುರ್ಗ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಚಿತ್ರದುರ್ಗ ವಿಭಾಗದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಐಟಿಯು ಸಂಘಟನೆಯು ಕಾರ್ಮಿಕರ ಹಿತವನ್ನು ಕಾಯುವ ಕೆಲಸವನ್ನು ಮಾಡುತ್ತಿದೆ. ಇವರ ಬಗ್ಗೆ ಹೋರಾಟವನ್ನು ಮಾಡುವುದರ ಮೂಲಕ ಅಂದಿನ ಸರ್ಕಾರದಲ್ಲಿ ಮಾತುಕತೆಯನ್ನು ನಡೆಸುವುದರ ಮೂಲಕ ಸಮಸ್ಯೆಯನ್ನು ಇತ್ಯರ್ಥ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ನಮ್ಮ ಸಂಘಟನೆ ಬೇರೆ ಸಂಘಟನೆಯೊಂದಿಗೆ ಕೈಜೋಡಿಸುವುದರ ಮೂಲಕ ಕಾರ್ಮಿಕರಿಗೆ ಸೌಲಭ್ಯಗಳನ್ನು ಕೊಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.

ಕಾರ್ಮಿಕರ ಪರವಾಗಿ ಸಂಘಟನೆಗಳು ಕೆಲಸವನ್ನು ಮಾಡಬೇಕಿದೆ. ಇಲ್ಲಿ ವ್ಯಕ್ತಿಗಿಂತ ಸಂಘಟನೆ ದೃಷ್ಟಿಯಿಂದ ಕಾರ್ಮಿಕರ ಸರ್ವಾಂಗೀಣ ಅಭಿವೃದ್ದಿಗೆ ಪಣವನ್ನು ತೊಡಬೇಕಿದೆ. ಕೆಲವು ದಿನಗಳ ಹಿಂದೆ ಸಾರಿಗೆ ನಿಗಮ ಲಾಭದಲ್ಲಿ ಇದೆ ಎಂದ ನಿಗಮದ ಅಧ್ಯಕ್ಷರು ತದ ನಂತರ ನಿಗಮ ನಷ್ಠದಲ್ಲಿದೆ ಎಂದು ಹೇಳುವುದರ ಮೂಲಕ ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದೆಲ್ಲ ಸಾರಿಗೆಯ ದರವನ್ನು ಹೆಚ್ಚಳ ಮಾಡುವುದಕ್ಕೆ ಮಾಡುವ ನಾಟಕವಾಗಿದೆ. ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ನಷ್ಠವಾಗಿಲ್ಲ, ಲಾಭದ ಹಾದಿಯಲ್ಲಿದೆ. ಆದರೆ ಇದನ್ನು ಮುಚ್ಚಿಡುವ ಕಾರ್ಯವು ನಿಗಮದ ವತಿಯಿಂದ ನಡೆಯುತ್ತಿದೆ. ಸರ್ಕಾರದ ವತಿಯಿಂದ ನಿಗಮದ ವಾಹನಗಳಿಗೆ ಸಹಾಯಧನದಡಿ ಡೀಸೆಲ್‍ನ್ನು ನೀಡುವುದರ ಮೂಲಕ ನಿಗಮವನ್ನು ಕಾಪಾಡಬೇಕಿದೆ. ಡಿಸೇಲ್ ಏರಿಕೆಯಿಂದಾಗಿ ನಿಗಮ ಆರ್ಥಿಕವಾಗಿ ತೊಂದರೆಯನ್ನು ಅನುಭವಿಸುತ್ತದೆ. ಇದಲ್ಲದೆ ಈಗ ಇ.ವಿ.ಬಸ್‍ಗಳನ್ನು ಓಡಿಸುವುದರ ಮೂಲಕ ಸಾರಿಗೆ ಸಂಸ್ಥೆಯನ್ನು ನಷ್ಠದಲ್ಲಿ ಅನುಭವಿಸುವಂತೆ ಮಾಡಲಾಗಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಜಿಎಸ್.ಟಿ. ಹಣವನ್ನು ನೀಡುವಲ್ಲಿ ತಾರತಮ್ಯ ಮಾಡುತ್ತಿದೆ, ಇದಲ್ಲದೆ ಇ.ವಿ.ಬಸ್ ಗಳನ್ನು ಓಡಿಸುವ ಖಾಸಗಿಯವರಿಗೆ 50 ಲಕ್ಷ ರೂ.ಗಳ ಸಹಾಯಧನ ನೀಡಲು ಮುಂದಾಗಿದೆ, ಆದರೆ ಇದನ್ನು ನಮ್ಮ ಸಾರಿಗೆ ಸಂಸ್ಥೆಗೆ ನೀಡುವಂತೆ ಮನವಿ ಮಾಡಲಾಗಿದೆ ಆದರೆ ಸರ್ಕಾರ ಇದರ ಬಗ್ಗೆ ಗಮನ ನೀಡಿಲ್ಲ ಎಂದ ಅವರು, ನಿಗಮದಲ್ಲಿ ಈಗ ಖಾಯಂ ನೌಕರರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ, ಹೂರ ಗುತ್ತಿಗೆ ನೌಕರರನ್ನು ತೆಗೆದುಕೊಳ್ಳುವುದರ ಮೂಲಕ ಖಾಯಂ ನೌಕರರನ್ನು ಕಡಿಮೆ ಮಾಡುತ್ತಿದೆ. ದೇಶದಲ್ಲಿ ನಮ್ಮ ರಾಜ್ಯದಲ್ಲಿ ಮಾತ್ರ ಸಾರಿಗೆ ಇಲಾಖೆಯ ಬಸ್‍ಗಳು ಹೆಚ್ಚಾಗಿ ಇವೆ ಆದರೆ ಬೇರೆ ರಾಜ್ಯಗಳಲ್ಲಿ 50ಕ್ಕಿಂತ ಕಡಿಮೆ ಬಸ್‍ಗಳು ಮಾತ್ರ ಓಡುತ್ತಿವೆ. ಇದರೊಂದಿಗೆ ಸರ್ಕಾರದ ನೀತಿಗಳು ಸಹಾ ನಿಗಮ ತೊಂದರೆಯನ್ನು ಅನುಭವಿಸುವಂತೆ ಆಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ನಿಗಮದ ಅಧ್ಯಕ್ಷರಾದ ಕಾ||. ಹೆಚ್.ಡಿ.ರೇವಪ್ಪ ಮಾತನಾಡಿ, ಸರ್ಕಾರ ಇಂದಿನ ದಿನಮಾನದಲ್ಲಿ ಬಸ್‍ಗಳಲ್ಲಿನ ಕಂಡಕ್ಟರ್ ಹುದ್ದೆಗಳನ್ನು ತೆಗೆಯುವುದರ ಮೂಲಕ ಚಾಲಕನೇ ಎರಡು ಹುದ್ದೆಗಳನ್ನು ನಿಭಾಯಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಇದರಿಂದ ನಿಗಮಕ್ಕೆ ಲಾಭವಾಗುತ್ತಿದೆ. ಕಾರ್ಮಿಕರ ಸಂಘಟನೆಯಾದ ಸಿಐಯುಟಿ ಸಂಘಟನೆಯು ಕಾರ್ಮಿಕರ ಹಿತವನ್ನು ಕಾಯುವ ಕಾರ್ಯವನ್ನು ಮಾಡಲಾಗುತ್ತಿದೆ. ಕಾರ್ಮಿಕರಿಗೆ ನ್ಯಾಯವನ್ನು ಕೊಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ನಿಗಮದ ಮಹಿಳಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕುಸುಮ ಓಂ.ಪ್ರಕಾಶ್ ಮಾತನಾಡಿ, ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡುವುದರ ಮೂಲಕ ಅವರ ಸಮಸ್ಯೆಗಳನ್ನು ಪರಿಹಾರ ಮಾಡಬಹುದಾಗಿದೆ. ಇಂದಿನ ದಿನದಲ್ಲಿ ಕಾರ್ಮಿಕರಲ್ಲಿ ವಿಷ ಬೀಜವನ್ನು ಬಿತ್ತುವ ಕೆಲಸವನ್ನು ಬೇರೆ ಸಂಘಟನೆಗಳು ಮಾಡುತ್ತಿದ್ದಾರೆ ಇದರ ಬಗ್ಗೆ ಎಚ್ಚರದಿಂದ ಇರಬೇಕಿದೆ. ಕಾರ್ಮಿರಿಕೆ ವಿವಿಧ ರೀತಿಯ ಸೌಲಭ್ಯ ಸಿಕ್ಕಿದ ಎಂದು ಸುಳ್ಳು ಹೇಳುವುದರ ಮೂಲಕ ನಂಬಿಸುತ್ತಿದ್ದಾರೆ ಇದರ ಬಗ್ಗೆ ಎಚ್ಚರವಾಗಿರುವಂತೆ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಿಐಟಿಯುನ ಜಿಲ್ಲಾ ಸಂಚಾಲಕರಾದ ಕಾ||. ಸಿ.ಕೆ.ಗೌಸ್‍ಪೀರ್ ಮಾತನಾಡಿ, ಜನರ ಸುರಕ್ಷತ ಪ್ರಯಾಣಕ್ಕೆ ನಿಗಮದ ನೌಕರರ ಕೊಡುಗೆ ಅಪಾರವಾಗಿದೆ, ನೀವುಗಳು ಶ್ರಮವಹಿಸಿ ಕೆಲಸ ಮಾಡುವುದರಿಂದ ರಾಜ್ಯದ ಜನತೆ ಸುರಕ್ಷಿತವಾಗಿ ಬಸ್ ಗಳಲ್ಲಿನ ಪ್ರಯಾಣ ಮಾಡುತ್ತಿದ್ದಾರೆ. ಸರ್ಕಾರ ಮತ್ತು ಕಾರ್ಮಿಕರು ಸೇರಿ ಸಾರಿಗೆ ನಿಗಮವನ್ನು ಉಳಿಸಬೇಕಿದೆ. ತಮ್ಮ ಹೋರಾಟದ ಮೂಲಕ ಸೌಲಭ್ಯವನ್ನು ಪಡೆಯಬೇಕಿದೆ ಎಂದರು.

ಈ ಸಂದರ್ಭದಲ್ಲಿ ಮಾಧ್ಯಮ ಅಕಾಡೆಮಿಯ ಸದಸ್ಯರಾದ ಹಿರಿಯ ಪತ್ರಕರ್ತರಾದ ಆಹೋಬಲಪತಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ನಿಗಮದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಂಜುನಾಥ್, ಸಿಐಟಿಯುನ ರಾಜ್ಯ ಸಮಿತಿ ಸದಸ್ಯರಾಧ ನಿಂಗಪ್ಪ, ಪ.ಜಾ.ಪ.ಪಂ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಆರ್.ಬಾಬುರಾವ್ ದಾವಣಗೆರೆ ವಿಭಾಗದ ಮುಖಂಡರಾದ ಎಂ.ಆರ್.ತಿಪ್ಪೇಸ್ವಾಮಿ ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಸಂಘಟನಾ ಕಾರ್ಯದರ್ಶಿ ಎಸ್.ರವಿ ಭಾಗವಹಿಸಿದ್ದರು.

ಚಿತ್ರದುರ್ಗ ವಿಭಾಗದ ಸಮಾವೇಶದಲ್ಲಿ ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ವಿಭಾಗದ ಅದ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಚಿತ್ರದುರ್ಗ ವಿಭಾಗದ, ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಪಾವಗಡ, ಘಟಕದ ಸಿಐಟಿಯುನ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *