ಅಪರ್ಣಾ ಸಾವು: ಮೆಟ್ರೋ ರೈಲಿಗೆ ಕನ್ನಡ ಧ್ವನಿಗೆ ಹುಡುಕಾಟ- ನಿಮ್ಮದು ಕಂಚಿನ ಕಂಠವೇ ನಿಮಗಿದೆ ಸುವರ್ಣ ಅವಕಾಶ!

ನಮ್ಮ ಮೆಟ್ರೋದ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ಕನ್ನಡದಲ್ಲಿ ಕೇಳಲಾಗುತ್ತಿದ್ದ ಅಚ್ಚ ಕನ್ನಡ ಧ್ವನಿ ಈಗ ಮರೆಯಾಗಿದೆ. ಈ ಚಿಂತೆ ನಿಜಕ್ಕೂ ಬಿಎಂಆರ್‌ಸಿಎಲ್‌ ಹೊಸ ಕೆಲಸವನ್ನು ನೀಡಿದಂತಾಗಿದೆ. ಇನ್ನು ಮೆಟ್ರೋ ಹೊಸ ಮಾರ್ಗಗಳಲ್ಲಿ ಕನ್ನಡ ವಾರ್ಯ್‌ಗಾಗಿ ಮೆಟ್ರೋ ಅಧಿಕಾರಿಗಳು ಹೊಸ ಧ್ವನಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದಕ್ಕಾಗಿ ಅಧಿಕಾರಿಗಳು ಕನ್ನಡದ ಎಫ್‌ಎಂ ರೆಡಿಯೋದ ಜಾಕಿಗಳು, ನಿರೂಪಕರು ಹಾಗೂ ಸಿಂಗರ್‌ಗಳ ವಾಯ್ಸ್‌ಗಳ ಧ್ವನಿಗಳ ಸ್ಯಾಂಪಲ್‌ ಕೇಳಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಅಪರ್ಣಾ ಧ್ವನಿ ಬದಲಿಸುವುದು ಯಾರು?

ಈಗಾಗಲೇ ಮೆಟ್ರೋ ನಿಲ್ದಾಣಗಳಲ್ಲಿ ಕೇಳಿ ಬರಲಾಗುತ್ತಿದ್ದ ಅಪರ್ಣಾ ಅವರ ಧ್ವನಿಯನ್ನೇ ಮುಂದಿನ ಹೊಸ ಮಾರ್ಗಗಳಿಗೂ ಬಳಸಿಕೊಳ್ಳಲು ಮೆಟ್ರೋ ನಿರ್ಧರಿಸಿತ್ತು. ಆದರೆ ಅಪರ್ಣಾ ಅವರ ನಿಧನದಿಂದಾಗಿ ನಮ್ಮ ಮೆಟ್ರೋಗೆ ಹೊಸ ಧ್ವನಿ ಹುಡುಕುವುದು ದೊಡ್ಡ ತಲೆ ನೋವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆರ್‌ವಿ ರೋಡ್‌ ನಿಂದ ಬೊಮ್ಮಸಂದ್ರ, ನಾಗಸಂದ್ರದಿಂದ ಮಾದವಾರ (ಹಳದಿ ಮಾರ್ಗ) ಸಿದ್ಧವಾಗಿದೆ. ಈ ನಿಲ್ದಾಣದಲ್ಲಿ ಯಾರು ಧ್ವನಿ ಬಳಿಸಬೇಕು ಎಂಬುದು ಸದ್ಯ ಬಿಎಂಆರ್‌ಸಿಎಲ್ ಚಿಂತೆಯನ್ನು ದ್ವಿಗುಣಗಳಿಸಿದೆ. ಈಗಾಗಲೆ ಹಲವು ಜನರು ತಮ್ಮ ಧ್ವನಿಯ ಸ್ಯಾಂಪಲ್‌ ನೀಡುವುದಾಗಿ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದಾರೆ.

ಸದ್ಯ ಅಪರ್ಣಾ ಅವರ ಧ್ವನಿಯನ್ನು ಹೊಂದಿರುವ ಮಾರ್ಗಗಳಲ್ಲಿ ಅವುಗಳನ್ನೇ ಮುಂದುವರೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಆದರೆ ಹೊಸ ಮಾರ್ಗದಲ್ಲಿ ಯಾರಿಂದ ವಾಯ್ಸ್‌ ಓವರ್‌ ಕೊಡಿಸಬೇಕು ಎಂಬುದೇ ದೊಡ್ಡ ಸಮಸ್ಯೆ ಎಂತೆ ಪರಿಣಮಿಸಿದೆ. ಈ ಹಿನ್ನೆಲೆ ಮೆಟ್ರೋ ಉತ್ತಮ ಧ್ವನಿ ಹುಡುಕಾಟ ನಡೆಸಿದೆ.

ಅಪರ್ಣಾ ನಿಧನರಾದ ಬಳಿಕ ನಮ್ಮ ಮೆಟ್ರೋ ಸಹ ಧ್ವನಿ ನಮನ ಸಲ್ಲಿಸಿತ್ತು. ಪ್ರಯಾಣಿಕರು ಸಹ ಅಪರ್ಣಾ ಅವರ ಧ್ವನಿ ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ವಾಯ್ಸ್‌ ಓವರ್‌ಗಾಗಿ ಕನ್ನಡಿಗರಿಗೆ ಅವಕಾಶ ನೀಡಬೇಕು. ಬೇರೆಯವರಿಗೆ ನೀಡಬೇಡಿ ಎಂದು ಮನವಿಯನ್ನು ಸಹ ಮಾಡಿಕೊಂಡಿದ್ದಾರೆ. ಅದೇನಾದ್ರೂ ಬೆಂಗಳೂರಿಗೆ ಬಂದ ಹೊಸ ಸಖಿಯಂತೆ ಕೈ ಹಿಡಿದು ನಡೆಸುತ್ತಿದ್ದ ವಾಯ್ಸ್‌ ಮಿಸ್‌ ಆಗಿದ್ದಂತೂ ಸುಳ್ಳು ಅಲ್ಲವೇ ಅಲ್ಲ.

Source : https://m.dailyhunt.in/news/india/kannada/oneindiakannada-epaper-thatskannada/anchor+aparna+aparna+saavu+metro+railige+kannada+dhvanige+hudukaata+nimmadu+kanchina+kanthave+nimagide+suvarna+avakaasha+-newsid-n622283495?listname=topicsList&topic=news&index=0&topicIndex=1&mode=pwa&action=click

Leave a Reply

Your email address will not be published. Required fields are marked *