ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಪ್ರಶಾಂತಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಲಿಂಗಪ್ಪನವರು ಪ್ರತಿಯೊಬ್ಬರಲ್ಲು ಸಾಧಿಸುವ ಗುಣವಿರುತ್ತದೆ,ಛಲವಿರುತ್ತದೆ.ಆದರೆ ಅದಕ್ಕೆಅಗತ್ಯ ಪ್ರೋತ್ಸಾಹ ಇಲ್ಲದೇ ಸಾಧಿಸುವ ಹೃದಯಗಳ ಆಸಕ್ತಿ ಸಾಧಿಸುವ ಮುನ್ನವೇ ಕಮರಿಹೋಗಿರುತ್ತದೆ ಎಂದರು.
ಚಿತ್ರದುರ್ಗ: ಸಾಧಕರ ಸಾಧನೆ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಐಯುಡಿಪಿ ನಿಸರ್ಗ ಯೋಗಕೇಂದ್ರದ ಯೋಗಗುರು ಶಿವಲಿಂಗಪ್ಪ ಹೇಳಿದರು. ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಪ್ರಶಾಂತಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರಲ್ಲುಸಾಧಿಸುವ ಗುಣವಿರುತ್ತದೆ,ಛಲವಿರುತ್ತದೆ.ಆದರೆ ಅದಕ್ಕೆಅಗತ್ಯ ಪ್ರೋತ್ಸಾಹ ಇಲ್ಲದೇ ಸಾಧಿಸುವ ಹೃದಯಗಳ ಆಸಕ್ತಿ ಸಾಧಿಸುವ ಮುನ್ನವೇ ಕಮರಿಹೋಗಿರುತ್ತದೆ.
ಕ್ರೀಡೆ,ಯೋಗಾಭ್ಯಾಸಸೇರಿದಂತೆ ವಿದೇಶಕ್ಕೆ ತೆರಳುವ ಅವಕಾಶ ಸಹ ಒಂದು ಸಾಧನೆಯಾಗಿದೆ.ಈ ಅವಕಾಶವನ್ನು ಸಿದ್ದರಾಜು ಅವರಿಗೆ ಒದಗಿಸಿದ ಅವರ ಸಂಸ್ಥೆಯ ಮಹತ್ವದ ನಿರ್ಧಾರಸ್ವಾಗತಾರ್ಹವಾದುದ್ದಾಗಿದೆ.ಅವರ ಪರಿಶ್ರಮ ಹಾಗು ಕರ್ತವ್ಯ ಪ್ರಜ್ಞೆಗೆ ಸಿಕ್ಕ ಸುವರ್ಣವಕಾಶ ಎನಿಸಿದೆ. ಅದರಲ್ಲು ನಮ್ಮ ಯೋಗ ಕೇಂದ್ರದ ಪ್ರತಿಯೊಬ್ಬ ಯೋಗಪಟುಗಳು ಕೂಡ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಸಾಧಕರೆನಿಸಿದ್ದು,ಅವರವರ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಾಧಕರಾಗಿದ್ದಾರೆ.ಹೀಗಾಗಿ, ಅಂತಹ ಸಾಧಕರನ್ನು ಗುರುತಿಸಿ ಅಭಿನಂಧಿಸೋದು ನಮ್ಮಸೌಭಾಗ್ಯ ಎಂದರು.ಇದೇ ವೇಳೆ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ವಿದೇಶ ಪ್ರವಾಸ ಪೂರೈಸಿಕೊಂಡು ಚಿತ್ರದುರ್ಗಕ್ಕೆ ಮರಳಿರುವ ಪತ್ರಕರ್ತ ಎಸ್.ಸಿದ್ದರಾಜು ಅವರಿಗೆ ಮೈಸೂರು ಪೇಟ ತೊಡಿಸಿ, ಯೋಗಕೇಂದ್ರದಿಂದ ಸನ್ಮಾನಿಸಲಾಯಿತು.
ಯೋಗಬಂಧುಗಳಿಂದ ಸನ್ಮಾನಸ್ವೀಕರಿಸಿ ಮಾತನಾಡಿದ ಅವರು ನಮ್ಮ ಭಾರತದ ಸಂಸ್ಕ್ರತಿ ಹಾಗು ಕಾನೂನು ಇತರೆ ವಿದೇಶಗಳಿಗೆ ಮಾದರಿಯಾಗಬೇಕು ಎಂದರು.ಹಾಗೆಯೇ ನಮ್ಮ ವಾಹಿನಿಯ ನೆರವಿನೊಂದಿಗೆ ಥೈಲ್ಯಾಂಡ್ ದೇಶಕ್ಕೆ ಪ್ರವಾಸಕ್ಕೆತೆರಳುವ ಅವಕಾಶ ಸಿಕ್ಕಿದ್ದು,ಈ ಅವಕಾಶದಿಂದಾಗಿ ನಮ್ಮಸಂಸ್ಥೆಯ 30 ಜನ ಪತ್ರಕರ್ತರು ಥೈಲ್ಯಾಂಡ್ ಪ್ರವಾಸ ಕೈಗೊಂಡಿದ್ದೆವು. ಥೈಲ್ಯಾಂಡ್ ದೇಶದ ಪಟ್ಟಯ್ಯ ಸಿಟಿ, ಬ್ಯಾಂಕಾಕ್ ನಗರಗಳಲ್ಲಿ ಪ್ರವಾಸ ಮಾಡಿದೆವು ಎಂದರು.
ಈ ವೇಳೆ ಅಲ್ಲಿನ ಸುಂಧರ ವಾತಾವರಣ ಸವಿದೆವು.ಆಕರ್ಷಕ ಹಾಗು ಸೊಬಗಿನ ವಾತಾವರಣ ತುಂಭಾ ವಿಭಿನ್ನವಾಗಿತ್ತು.ನಮ್ಮದೇಶದಲ್ಲಿರುವಂತೆ ಬೇಸಿಗೆ,ಚಳಿ ಹಾಗು ಮಳೆ ಇಲ್ಲದೇ ಯಾವಾಗಲು ಬಿಸಿಯಾದ ವಾತಾವರಣ ಅಲ್ಲಿತ್ತು.ಥೈಲ್ಯಾಂಡ್ ದೇಶದ ಸಂಸ್ಕ್ರತಿ ಹಾಗು ಕಾನೂನು ಕೂಡ ಭಾರತಕ್ಕಿಂತ ಭಿನ್ನವಾಗಿದ್ದು,ಭಾರತದಲ್ಲಿರುವ ಕೆಲ ಕ್ರಿಮಿನಲ್ ಅಫೆನ್ಸ್ ಗಳು ಅಲ್ಲಿ ಸಹಜ ಪ್ರಕ್ರಿಯೆಗಳಾಗಿವೆ.
ಅಲ್ಲಿನ ಹೋಟೆಲ್, ರೆಸ್ಟೊರೆಂಟ್ ಸೇರಿದಂತೆ ನೈಟ್ ಕ್ಲಬ್,ಪಬ್ ಹಾಗು ವಾಕಿಂಗ್ ಸ್ಟ್ರೀಟ್ ಗಳು ರಾತ್ರಿಯಿಡಿ ತೆರೆದಿದ್ದು,ಮೋಜು,ಮಸ್ತಿಗಾಗಿಯೇ ದೊಡ್ಡ ವ್ಯಾಪಾರೋದ್ಯಮ ಎನಿಸಿದೆ.ಜೊತೆಗೆ ನಮ್ಮೊಂದಿಗೆ ಆಗಮಿಸಿದ್ದ ಅನೇಕರು,ಕಣ್ಮುಂದೆ ಓಪನ್ ಮಾರುಕಟ್ಟೆಯಲ್ಲಿ ತೆರೆದಿದ್ದ ಬಾಡಿ ಮಸಾಜ್ ಪಾರ್ಲರ್,ಥಯ್‌ಮಸಾಜ್‌ಸೇರಿದಂತೆ ಮಹಿಳೆಯರ ಮೈಮಾಟ ಹಾಗು ಆಕರ್ಷಕ ತುಂಡು ಉಡುಗೆ,ತೊಡುಗೆಗಗಳನ್ನು ಕಂಡುಅಚ್ಚರಿಗೊಂಡರು. ಕೆಲವರು ಇರಿಸುಮುರಿಸುಗೊಂಡರು. ಹಾಗೆಯೇ ನಮ್ಮದೇಶದಲ್ಲಿರುವ ಸಂಸ್ಕ್ರತಿ ಹಾಗು ಗೌರವ ಭಾವಗಳನ್ನುವಿದೇಶಗಳಲ್ಲಿ ಗಾಳಿಗೆ ತೂರಿದ್ದಾರೆಂಬ ಅಸಮಧಾನ ಹೊರಹಾಕಿದರು.ಜೊತೆಗೆ ಅಲ್ಲಿನ ಸಮುದ್ರದಂಡೆಗಳು ತುಂಭಾ ಆಕರ್ಷಕವಾಗಿದ್ದು,ಹಾಲುಬಿಳುಪಿನಿಂದ ಹರಿಯುತಿದ್ದಸಮುದ್ರದಕಡಲುಗಳ ಅಪ್ಪಳಿಸುವಿಕೆ ರೋಮಾಂಚನಗೊಳಿಸಿದವು ಎಂಬ ಅನುಭವ ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ನಿಸರ್ಗ ಯೋಗ ಸಂಸ್ಥೆಯ ಅಧ್ಯಕ್ಷರಾದ ರಾಮಣ್ಣನವರು ಸ್ವಾಗತಿಸಿದ್ದು,ಕೇಂದ್ರದಲ್ಲಿನ ಒಗ್ಗಟ್ಟಿನ ಮಂತ್ರ ಜಪಿಸಿದರು. ಯೋಗ ಶಿಕ್ಷಣತರಭೇತಿಪಡೆದ ಯುವ ಯೋಗ ಶಿಕ್ಷಕರಾದ ಸಂಯಕ್ತ, ಅನುಸೂಯ,ಪುಷ್ಪ,ಮಂಜುಳ,ವಾಸವಿ,ದಿವ್ಯ,ಜಯ್ಯಣ್ಣ,ಹನುಮಂತಪ್ಪ,ಅಣ್ಣೇಶ್ ಯೋಗ ಶಿಕ್ಷಣ ತರಭೇತಿಯಲ್ಲಿನ ಅನುಭವಗಳನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ ಯೋಗಪಟು ಪುಷ್ಪ ಪ್ರಾರ್ಥಿಸಿದರು.ಹಿರಿಯ ಯೋಗಶಿಕ್ಷಕರಾದ ಮಹಲಿಂಗಪ್ಪ ನಿರೂಪಿಸಿದರು.ಹಿರಿಯ ಯೋಗಸಾಧಕರಾದ ಗೀತಮ್ಮ,ಶೇಖರಪ್ಪ,ಲೋಕೇಶ್ ,ಲಕ್ಷ್ಮಿಕಾಂತ್, ಲೀಲಾವತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾಧಕರನ್ನು ಅಭಿನಂದಿಸಿದರು.