ಕರ್ನಾಟಕ ಪೊಲೀಸ್​ ಇಲಾಖೆಯಿಂದ “ಸೇಫ್​​ ಕನೆಕ್ಟ್​​” ಆರಂಭ, ಇಲ್ಲಿದೆ ವಿಶೇಷತೆ.

ಬೆಂಗಳೂರು, ಜುಲೈ 18: ಜನರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು (Bengaluru City Police) ಹಲವು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ. ವೇಗವಾಗಿ ಜನರ ಸುರಕ್ಷತೆಗೆ ಧಾವಿಸುವ ದೃಷ್ಟಿಯಿಂದ ಪೊಲೀಸ್​ ಇಲಾಖೆ 112 ಪ್ರಾರಂಭಿಸಿದೆ. ಇದೀಗ ಇನ್ನೂ ವೇಗವಾಗಿ ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ​​ ತಂತ್ರಜ್ಞಾನ ಮೊರೆ ಹೋಗಿದೆ. ಪೊಲೀಸ್ ಇಲಾಖೆ “ಸೇಫ್​ ಕನೆಕ್ಟ್​​” ಎಂಬ ವಿಶಷ್ಟ ಉಪಕ್ರಮ ಪರಿಚಯಿಸಿದ್ದು, ಇದರಿಂದ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪೊಲೀಸರಿಗೆ ಅನಕೂಲವಾಗಲಿದೆ. ಯಾವ ಉಪಕ್ರಮ​, ಅದರ ವಿಶೇಷತೆ, ಹೇಗೆ ಕಾರ್ಯ ನಿರ್ವಹಿಸುತ್ತೆ ಎಂಬ ಎಲ್ಲ ಮಾಹಿತಿ ಇಲ್ಲಿದೆ.

“ಸೇಫ್ ಕನೆಕ್ಟ್” ಮೂಲಕ ಸುರಕ್ಷಿತವಾಗಿರಿ!

Karnataka State App (KSP) ಆ್ಯಪ್​ನಲ್ಲಿ ಸೇಫ್ ಕನೆಕ್ಟ್ ವೈಶಿಷ್ಟ್ಯವು, ತಕ್ಷಣವೇ ಪೊಲೀಸ್​ ಕಮಾಂಡ್ ಸೆಂಟರ್​​ಗೆ​ ​ ವಿಡಿಯೋ ಹಾಗೂ ಆಡಿಯೋ ಕಾಲ್​ ಮಾಡಬಹುದು. ಇದರಿಂದ ನಿಮ್ಮ ಲೈವ್ ಲೋಕೇಶನ್ ಪೊಲೀಸರಿಗೆ ತಿಳಿಯುತ್ತದೆ. ಆಗ ಪೊಲೀಸರು ತಕ್ಷಣ ನಿಮ್ಮ ನೆರವಿಗೆ ಧಾವಿಸುತ್ತಾರೆ.

ಆ್ಯಪ್​ ಡೌನ್​ಲೋಡ್​ ಹೇಗೆ

  1. ಪ್ಲೇಸ್ಟೋರ್​​ನಲ್ಲಿ ಕೆಎಸ್​​ಪಿ ಅಂತ ಸರ್ಚ್​​ ಮಾಡಿ, ಆ್ಯಪ್​ ಇನ್​ಸ್ಟಾಲ್​ ಮಾಡಿಕೊಳ್ಳಿ.
  2. ನಿಮ್ಮ ದೂರವಾಣಿ ಸಂಖ್ಯೆ, ಜಿಲ್ಲೆ ನಮೂದಿಸಿ ಲಾಗಿನ್​​ ಆಗಿ.
  3. ಆ್ಯಪ್​ ಕಾರ್ಯಾರಂಭವಾಗುತ್ತದೆ.
  4. ಆ್ಯಪ್​ ಒಳಗಡೆ ಸೇಫ್ ​ಕನೆಕ್ಟ್​​ ಮೇಲೆ ಕ್ಲಿಕ್​ ಮಾಡುವ ಮೂಲಕ ಆಡಿಯೋ ಅಥವಾ ವಿಡಿಯೋ ಕರೆ ಮಾಡಬಹುದು.

ಕಾರ್ಯನಿರ್ವಹಣೆ ಹೇಗೆ?

ತುರ್ತು ವಿಡಿಯೋ ಕರೆ: KSP ಆ್ಯಪ್ ಮೂಲಕ, ಸೇಫ್ ಕನೆಕ್ಟ್ ಸೌಲಭ್ಯ ಬಳಸಿ ತೊಂದರೆಯಲ್ಲಿರುವ ವ್ಯಕ್ತಿ ಕಮಾಂಡ್ ಸೆಂಟರ್​ಗೆ ತುರ್ತು ವಿಡಿಯೋ ಕರೆ ಮಾಡಬಹುದು.

ಘಟನೆಯ ಸ್ಥಳದ ಮಾಹಿತಿ ಹಂಚಿಕೆ: ಕರೆ ಮಾಡಿದ ವ್ಯಕ್ತಿಯ ಈಗಿನ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಕಮಾಂಡ್ ಸೆಂಟರ್ ನಿಂದ ವ್ಯಕ್ತಿಯ ಸ್ಥಳವನ್ನು ಗುರುತಿಸಲು ಸಾಧ್ಯವಾಗುತ್ತದೆ.

ಘಟನೆಯ ಪ್ರಸಾರ: ಬಳಕೆದಾರರು ಘಟನೆಯ ನೇರಪ್ರಸಾರ ಮಾಡುವ ಮೂಲಕ ಘಟನೆಯ ದೃಶ್ಯ ಸಾಕ್ಷ್ಯ ಒದಗಿಸಿ. ಪರಿಣಾಮಕಾರಿ ಮತ್ತು ತ್ವರಿತ ಪ್ರತಿಕ್ರಿಯೆಯನ್ನು ಪಡೆಯಬಹುದು.

ಕಮಾಂಡ್ ಸೆಂಟರ್ ಪ್ರತಿಕ್ರಿಯೆ: ಪೊಲೀಸ್ ಅಧಿಕಾರಿಗಳು ಕರೆಯನ್ನು ಸ್ವೀಕರಿಸಿ, ಘಟನೆಯನ್ನು ಪರಿಶೀಲಿಸಿ, ಹತ್ತಿರದ ಹೊಯ್ಸಳ ವಾಹನವನ್ನು ಸ್ಥಳಕ್ಕೆ ಕಳುಹಿಸುವ ಮೂಲಕ ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ತೆಗೆದುಕೊಳ್ಳುತ್ತಾರೆ.

ನಾಗರೀಕರಿಗೆ ಪ್ರಯೋಜನಗಳು

 ತುರ್ತು ಸಂದರ್ಭದಲ್ಲಿ ಪೊಲೀಸರೊಂದಿಗೆ ತ್ವರಿತವಾಗಿ ಸಂಪರ್ಕ ಸಾಧಿಸಿ, ನೈಜ-ಸಮಯದ ಸಂವಹನ ಮತ್ತು ಲೈವ್ ಟ್ರ್ಯಾಕಿಂಗ್ ಸಮಯೋಚಿತ ಸಹಾಯವನ್ನು ಖಚಿತಪಡಿಸುತ್ತದೆ. ನಿಮ್ಮ ವರದಿಯನ್ನು ರೆಕಾರ್ಡ್ ಮಾಡಿ ಗಂಭೀರವಾಗಿ ಪರಿಗಣಿಸಲಾಗುವುದು.

ಪೊಲೀಸರಿಗೆ ಪ್ರಯೋಜನಗಳು

ವಿಡಿಯೋ ಮತ್ತು ಲೊಕೇಷನ್​ ಮಾಹಿತಿಯ ಮೂಲಕ, ಘಟನೆಯ ಸ್ಪಷ್ಟ ಚಿತ್ರಣ ಲಭ್ಯವಿರುತ್ತದೆ. ನಿಖರವಾದ ಸ್ಥಳ ಬ್ಯಾಕಿಂಗ್​ನಿಂದ, ತ್ವರಿತವಾಗಿ ಘಟನೆಯ ಸ್ಥಳಕ್ಕೆ ತಲುಪಿ, ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ರೆಕಾರ್ಡ್ ಮಾಡಿದ ಕರೆಗಳು ಮತ್ತು ವರದಿಗಳು ಅಮೂಲ್ಯವಾದ ಪುರಾವೆಗಳಾಗಿ ಕಾರ್ಯನಿರ್ವಹಿಸುತ್ತವೆ. ಸಮುದಾಯದಲ್ಲಿ ವಿಶ್ವಾಸ ಮತ್ತು ಸಹಕಾರವನ್ನು ಉತ್ತಮಗೊಳಿಸುವುದು.

ಪ್ರಮುಖ ಅಂಶಗಳು

  • ಸೇಫ್ ಕನೆಕ್ಟ್ ಬಳಕೆದಾರರಿಗೆ ಸುರಕ್ಷತೆ ಮತ್ತು ಹೆಚ್ಚಿಸುತ್ತದೆ.
  • ಕರೆ ಮಾಡಿದವರ ಲೈವ್ ಲೊಕೇಶನ್ ಅನ್ನು ಕಮಾಂಡ್ಸೊಂಟರ್ ನೊಂದಿಗೆ ಹಂಚಿಕೊಳ್ಳುತ್ತದೆ.
  • ಬೆಂಗಳೂರು ನಗರ ಪೊಲೀಸರು ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡು ತ್ವರಿತ ಪರಿಹಾರವನ್ನು ಒದಗಿಸುತ್ತಾರೆ.
  • ಬಳಕೆದಾರರಿಗೆ ಪೊಲೀಸರೊಂದಿಗೆ ಸಲೀಸಾಗಿ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ.
  • ಬಳಕೆದಾರರು ತಮ್ಮ ಡೇಟಾ ರಕ್ಷಿಸಲಾಗಿದೆ ಮತ್ತು ಅವರ ಸಂವಹನಗಳು ಎಲ್ಲಾ ಸಮಯದಲ್ಲೂ ಖಾಸಗಿಯಾಗಿವೆ ಎಂದು ನಂಬಹುದು.

Source : https://tv9kannada.com/karnataka/bengaluru-city-police-started-safe-connect-initiative-for-public-safety-bengaluru-news-in-kannada-vkb-868170.html

Leave a Reply

Your email address will not be published. Required fields are marked *