Wagh Nakh: ಲಂಡನ್ ಮ್ಯೂಸಿಯಂನಿಂದ ಛತ್ರಪತಿ ಶಿವಾಜಿಯ ಹುಲಿ ಉಗುರು ಮುಂಬೈಗೆ ಆಗಮನ; ಜುಲೈ 19ರಿಂದ ಪ್ರದರ್ಶನ.

ಛತ್ರಪತಿ ಶಿವಾಜಿ ಮಹಾರಾಜರು ಬಳಸುತ್ತಿದ್ದ ‘ವಾಘ್ ನಖ್’ ಅಥವಾ ಹುಲಿ ಉಗುರು ಆಕಾರದ ಆಯುಧವನ್ನು ಬುಧವಾರ ಲಂಡನ್ ಮ್ಯೂಸಿಯಂನಿಂದ ಮುಂಬೈಗೆ ತರಲಾಗಿದೆ. ಈ ವಾಘ್ ನಖ್ ಅನ್ನು ಸತಾರಾಕ್ಕೆ ತೆಗೆದುಕೊಂಡು ಹೋಗಿ ಶುಕ್ರವಾರದಿಂದ ಪ್ರದರ್ಶನಕ್ಕೆ ಇಡಲಾಗುತ್ತದೆ.

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರು ಬಳಸುತ್ತಿದ್ದ ‘ವಾಘ್ ನಖ್’ ಅಥವಾ ಹುಲಿ ಉಗುರಿನ ಆಕಾರದ ಆಯುಧ ಲಂಡನ್ ಮ್ಯೂಸಿಯಂನಿಂದ ಮುಂಬೈಗೆ ಆಗಮಿಸಿದೆ.

ಲಂಡನ್​ನಿಂದ ತರಿಸಲಾದ ಈ ಪುರಾತನ ಕಾಲದ ಆಯುಧಕ್ಕೆ ಬುಲೆಟ್ ಪ್ರೂಫ್ ಕವರ್ ಹಾಕಿ ತರಲಾಗಿತ್ತು. ಇದನ್ನು ಜುಲೈ 19ರಿಂದ 7 ತಿಂಗಳ ಕಾಲ ಸತಾರಾದಲ್ಲಿರುವ ಮ್ಯೂಸಿಯಂನಲ್ಲಿ ಇರಿಸಲಾಗುವುದು. ಈಗಾಗಲೇ ಮುಂಬೈಗೆ ಆಗಮಿಸಿರುವ ವಾಘ್ ನಖ್ ಅನ್ನು ಈಗ ಪಶ್ಚಿಮ ಮಹಾರಾಷ್ಟ್ರದ ಸತಾರಾಕ್ಕೆ ಕೊಂಡೊಯ್ಯಲಾಗುವುದು. ಅಲ್ಲಿ ಅದನ್ನು ಜುಲೈ 19ರಿಂದ ಪ್ರದರ್ಶಿಸಲಾಗುವುದು.

ಈ ಹುಲಿ ಉಗುರಿನ ಆಕಾರದ ಶಿವಾಜಿಯ ಆಯುಧವನ್ನು ಬುಧವಾರ ಲಂಡನ್ ಮ್ಯೂಸಿಯಂನಿಂದ ಮುಂಬೈಗೆ ತರಲಾಗಿದೆ. ಲಂಡನ್‌ನಿಂದ ತರಿಸಲಾದ ಆಯುಧಕ್ಕೆ ಬುಲೆಟ್ ಪ್ರೂಫ್ ಕವರ್ ಇದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮಹಾರಾಷ್ಟ್ರದ ಸಚಿವರು ತಿಳಿಸಿದ್ದಾರೆ.

1659ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್‌ನನ್ನು ಕೊಲ್ಲಲು ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮಹಾರಾಜ ಬಳಸಿದ ವಾಘ್ ನಖ್ ಸತಾರಾದಲ್ಲಿಯೇ ಇತ್ತು ಎಂದು ಇತಿಹಾಸಕಾರರು ಹೇಳಿದ್ದರು. ಈ ಹೇಳಿಕೆಯನ್ನು ನಿರಾಕರಿಸಿದ ಸಚಿವರು, ಮಹಾರಾಷ್ಟ್ರಕ್ಕೆ ಲಂಡನ್​ನಿಂದ ವಾಪಾಸ್ ತರಲಾಗುತ್ತಿರುವ ವಾಘ್ ನಖ್ ಸ್ಪೂರ್ತಿದಾಯಕ ಕ್ಷಣವಾಗಿದೆ. ಅದನ್ನು ಸತಾರಾದಲ್ಲಿ ಭವ್ಯ ಸಮಾರಂಭದಲ್ಲಿ ಸ್ವಾಗತಿಸಲಾಗುವುದು ಎಂದು ಹೇಳಿದ್ದಾರೆ.

ಲಂಡನ್‌ನಿಂದ ರಾಜ್ಯಕ್ಕೆ ತರಲಾಗುತ್ತಿರುವ ವಾಘ್ ನಖ್ ಅನ್ನು ಛತ್ರಪತಿ ಶಿವಾಜಿ ಮಹಾರಾಜರು ಬಳಸಿದ್ದರು ಎಂದು ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಕಳೆದ ವಾರ ವಿಧಾನಸಭೆಯಲ್ಲಿ ಹೇಳಿದ್ದರು. ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿಂದ ಮಹಾರಾಷ್ಟ್ರಕ್ಕೆ ಶಸ್ತ್ರಾಸ್ತ್ರ ತರಲು ಸರ್ಕಾರ ಹಲವಾರು ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂಬ ಹೇಳಿಕೆಯನ್ನು ಮುಂಗಂತಿವಾರ್ ತಳ್ಳಿಹಾಕಿದ್ದಾರೆ. ಪ್ರಯಾಣ ವೆಚ್ಚ ಮತ್ತು ಒಪ್ಪಂದಕ್ಕೆ ಸಹಿ ಹಾಕಲು 14.8 ಲಕ್ಷ ರೂ. ಖರ್ಚಾಗಿದೆ ಎಂದಿದ್ದಾರೆ.

ಲಂಡನ್‌ನಲ್ಲಿರುವ ಮ್ಯೂಸಿಯಂ ಆರಂಭದಲ್ಲಿ 1 ವರ್ಷಕ್ಕೆ ಈ ಶಸ್ತ್ರಾಸ್ತ್ರವನ್ನು ನೀಡಲು ಒಪ್ಪಿಕೊಂಡಿತು. ಆದರೆ ರಾಜ್ಯ ಸರ್ಕಾರವು ಅದನ್ನು 3 ವರ್ಷಗಳ ಕಾಲ ರಾಜ್ಯದಲ್ಲಿ ಪ್ರದರ್ಶನಕ್ಕೆ ಹಸ್ತಾಂತರಿಸುವಂತೆ ಮನವೊಲಿಸಿತು ಎಂದು ಅವರು ಹೇಳಿದ್ದಾರೆ.

Source: https://tv9kannada.com/national/chhatrapati-shivaji-maharaj-wagh-nakh-arrives-from-london-museum-to-be-displayed-from-july-19-sct-868053.html#:~.

 

Leave a Reply

Your email address will not be published. Required fields are marked *