VIDEO: ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಅಕ್ಷರ್ ಪಟೇಲ್

Axar Patel Catch

India vs Sri Lanka, 2nd ODI:  ಕೊಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡಿತು. ಅದರಲ್ಲೂ ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ್ದ ಭಾರತೀಯ ಬೌಲರ್​ಗಳು ಲಂಕಾ ಬ್ಯಾಟ್ಸ್​ಮನ್​ಗಳು ರನ್​ಗಳಿಸದಂತೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು. ಶ್ರೀಲಂಕಾ ತಂಡವು 29 ರನ್​ಗಳಿಸಿದ್ದ ವೇಳೆ ಮೊಹಮ್ಮದ್ ಸಿರಾಜ್ ಅವಿಷ್ಕ ಫರ್ನಾಂಡೊ ವಿಕೆಟ್ ಪಡೆದು ಟೀಮ್ ಇಂಡಿಯಾಗೆ (Team India)  ಮೊದಲ ಯಶಸ್ಸು ತಂದುಕೊಟ್ಟಿದ್ದರು. ಆ ಬಳಿಕ ಜೊತೆಯಾದ ಕುಸಾಲ್ ಮೆಂಡಿಸ್ ಹಾಗೂ ನುವಾನಿಡು 73 ರನ್​​ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ದಾಳಿಗಿಳಿದ ಕುಲ್ದೀಪ್ ಯಾದವ್ ಕುಸಾಲ್ ಮೆಂಡಿಸ್ (34) ರನ್ನು ಎಲ್​ಬಿ ಬಲೆಗೆ ಬೀಳಿಸಿದರು. ಇದರ ಬೆನ್ನಲ್ಲೇ ಅಕ್ಷರ್ ಪಟೇಲ್ ಧನಂಜಯ್ ಡಿಸಿಲ್ವಾರನ್ನು ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಮಾಡಿದರು.

ಆ ಬಳಿಕ ಬಂದ ಚರಿತ್ ಅಸಲಂಕಾ (15) ಹಾಗೂ ದಸುನ್ ಶಾನಕ (2) ಕೂಡ ಕುಲ್ದೀಪ್ ಸ್ಪಿನ್ ಮೋಡಿಗೆ ಬಲಿಯಾದರು. ಇನ್ನು ವನಿಂದು ಹಸರಂಗ 21 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ಮತ್ತೊಂದೆಡೆ ಚಮಿಕ ಕರುಣರತ್ನೆ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಮೂರು ಫೋರ್ ಬಾರಿಸುವ ಮೂಲಕ ಅಬ್ಬರಿಸಿದ್ದ ಕರುಣರತ್ನೆ ಅಕ್ಷರ್ ಪಟೇಲ್ ಅವರ ಅತ್ಯುತ್ತಮ ಫೀಲ್ಡಿಂಗ್​ಗೆ ಬಲಿಯಾಗಬೇಕಾಯಿತು.

34ನೇ ಓವರ್​ನಲ್ಲಿ ಉಮ್ರಾನ್ ಮಲಿಕ್ ಎಸೆದ ಬಾಲ್​ಗೆ ಕರುಣರತ್ನೆ ಸ್ಕ್ವೇರ್​ ಮೂಲಕ ಫೋರ್ ಬಾರಿಸಲು ಯತ್ನಿಸಿದ್ದರು. ಅತ್ತ ಸ್ಕ್ವೇರ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಅಕ್ಷರ್ ಪಟೇಲ್ ಕ್ಷಣಾರ್ಧದಲ್ಲಿ ಜಿಗಿಯುವ ಮೂಲಕ ಅದ್ಭುತವಾಗಿ ಕ್ಯಾಚ್ ಹಿಡಿದರು. ಇದೀಗ ಈ ಅಧ್ಭುತ ಫೀಲ್ಡಿಂಗ್ ವಿಡಿಯೋ ವೈರಲ್ ಆಗಿದೆ.

ಇನ್ನು ಕರುಣರತ್ನೆ (17) ಔಟಾದ ಬೆನ್ನಲ್ಲೇ ದುನಿತ್ ವೆಲ್ಲಲಗೆ (32) ಗೆ ಸಿರಾಜ್ ಪೆವಿಲಿಯನ್ ಹಾದಿ ತೋರಿಸಿದರು. ಅಂತಿಮವಾಗಿ ಕಣಕ್ಕಿಳಿದ ಲಹಿರು ಕುಮಾರರನ್ನು ಶೂನ್ಯಕ್ಕೆ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಸಿರಾಜ್ ಶ್ರೀಲಂಕಾ ತಂಡವನ್ನು 39.4 ಓವರ್​ಗಳಲ್ಲಿ 215 ರನ್​ಗಳಿಗೆ ಆಲೌಟ್ ಮಾಡಿದರು. ಟೀಮ್ ಇಂಡಿಯಾ ಪರ ಸಿರಾಜ್ 5.4 ಓವರ್​ಗಳಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದರೆ, 10 ಓವರ್​ಗಳಲ್ಲಿ 51 ರನ್​ ನೀಡಿ ಕುಲ್ದೀಪ್ 3 ವಿಕೆಟ್ ಕಬಳಿಸಿದರು. ಇನ್ನು ಉಮ್ರಾನ್ ಮಲಿಕ್ 7 ಓವರ್​ಗಳಲ್ಲಿ 48 ರನ್ ನೀಡಿ 2 ವಿಕೆಟ್ ಪಡೆದರು.

ಇದನ್ನೂ ಓದಿ: ICC T20 Rankings: ಐಸಿಸಿ ರ‍್ಯಾಂಕಿಂಗ್​ನಲ್ಲೂ ಸರ್ವಶ್ರೇಷ್ಠ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಶುಭ್​ಮನ್​ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್: ಅವಿಷ್ಕಾ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಕುಸಲ್ ಮೆಂಡಿಸ್ , ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶಾನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಲಹಿರು ಕುಮಾರ, ಕಸುನ್ ರಜಿತ

 

 

source https://tv9kannada.com/sports/cricket-news/video-axar-patel-takes-a-sharp-catch-to-dismiss-chamika-kannada-news-zp-au50-500289.html

Leave a Reply

Your email address will not be published. Required fields are marked *