ಶಿಕ್ಷಣವೊಂದೆ ನಮ್ಮಬದುಕಿನ ಪ್ರಗತಿಗೆ ಮೂಲಾಧಾರ : ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 28 : ಶಿಕ್ಷಣವನ್ನು ಪಡೆಯುವುದರ ಮೂಲಕ ನಮ್ಮ ಪ್ರಗತಿಯನ್ನು ನಾವೇ ಮಾಡಿಕೊಳ್ಳಬೇಕಿದೆ, ಅಂಬೇಡ್ಕರ್ ರವರು ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಮಾನ್ಯತೆಯನ್ನು ನೀಡಬೇಕಿದೆ ಎಂದು  ಅಪರ ಜಿಲ್ಲಾಧಿಕಾರಿಗಳಾದ ಕುಮಾರಸ್ವಾಮಿ ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮೀಸಲಾತಿ)ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ  ಹಮ್ಮಿಕೊಂಡಿದ್ದ ಬಿಎನ್.ಎಸ್., ಬಿ.ಎನ್.ಎಸ್,ಎಸ್, ಬಿಎನ್.ಎಸ್.ಎ. ಹಾಗೂ ಪಿಓಎ ಕಾಯ್ದೆಗಳ ಕುರಿತಾದ ಕಾನೂನು ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವುಗಳು ಇಲ್ಲಿ ಇರಲು ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣರಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಎಷ್ಟು ಹೋರಾಟವಾಯಿತೂ ಅಷ್ಟೇ ಪ್ರಮಾಣದಲ್ಲಿ ಹೋರಾಟ ಸ್ವಾತಂತ್ರ್ಯ ನಂತರವೂ ಆಗಿದೆ. ಸ್ವಾತಂತ್ರಯ ನಂತರ ದೇಶದಲ್ಲಿ ಹಲವಾರು ಸಮಸ್ಯೆಗಳು ಇದ್ದವು ಈ ಸಮಯದಲ್ಲಿ ಅಂಬೇಡ್ಕರ್ ರವರ ಪ್ರಪಂಚವನ್ನು ಪರ್ಯಟನೆ ಮಾಡುವುದರ ಮೂಲಕ ದೇಶಕ್ಕೆ ಅರ್ಥ ಗರ್ಭೀತವಾದ, ವೈಶಿಷ್ಟ ಪೂರ್ಣವಾದ, ಉತ್ತಮವಾದ ಸಂವಿಧಾನವನ್ನು ನೀಡಿದ್ದಾರೆ. ಸಮ ಸಮಾಜದ ಪರಿಕಲ್ಪನೆಯನ್ನು ಅಂಬೇಡ್ಕರ್ ರವರು ನೀಡಿದ್ದಾರೆ ಎಂದರು.

ದೇಶದಲ್ಲಿ ಬದುಕುತ್ತಿರುವ ನಾವುಗಳೆಲ್ಲಾ ಕಾನೂನು ಅಡಿಯಲ್ಲಿ ಬದುಕುತ್ತಿದ್ದೆವೆ ಅದನ್ನು ರಕ್ಷಣೆ ಮಾಡಬೇಕಿದೆ. ಹಾಗೂ ಅವುಗಳನ್ನು ಅನುಸರಿಸಬೇಕಿದೆ. ಬಡತನ, ಅಸ್ಪೃಶ್ಯತೆ ಹಾಗೂ ಮೌಢ್ಯ ಇವು ಮೂರು ನಾಡಿಗೆ ಇಟ್ಟಂತ ಶಾಪಗಳಾಗಿವೆ. ಯಾರೂ ಸಹಾ ನಾವು ಇಂತಹ ಜಾತಿಯಲ್ಲಿ ಹುಟ್ಟಬೇಕೆಂದು ಅರ್ಜಿಯನ್ನು ಹಾಕುವುದಿಲ್ಲ, ಆದರೆ ಹುಟ್ಟಿದ ನಂತರ ಇರುವ ಬದುಕು ನಮ್ಮ ಕೈಯಲ್ಲಿದೆ. ಅದನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗಬೇಕಿದೆ. ನಮ್ಮಲ್ಲಿ ದೊಡ್ಡದಾದ ಸಾಧನೆಯನ್ನು ಮಾಡಿದವರ ಮೂಲ ಬೇರು ಗ್ರಾಮೀಣ, ದಲಿತ  ಹಿಂದುಳಿದ ವರ್ಗದವರಾಗಿರುತ್ತಾರೆ. ಎಲ್ಲಿ ಕಷ್ಠ ಇರುತ್ತದೆ ಅಲ್ಲಿ ಸಾಧನೆ ಮಾಡುವ ಛಲ ಇರುತ್ತದೆ. ಶಿಕ್ಷಣ ಸಂಘಟನೆ ಹೋರಾಟವನ್ನು ನಾವುಗಳು ನಾವು ಮೈಗೊಡಿಸಿಕೊಳ್ಳಬೇಕಿದೆ. ಅಗ ಮೇಲ್ಪಂಕ್ತಿಗೆ ಹೋಗಲು ಸಾಧ್ಯವಾಗುತ್ತದೆ. ಯಾವುದೇ ಜಾತಿಯಿಂದ ಉನ್ನತ ವ್ಯಕ್ತಿಯಾಗಲು ಸಾಧ್ಯವಿಲ್ಲ ಇದರ ಬದಲರಿ ಶಿಕ್ಷಣವನ್ನು ಪಡೆಯುವುದರ ಮೂಲಕ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸರ್ಕಾರದ ವಿವಿಧ ರೀತಿಯ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳುವುದರ ಮೂಲಕ ಉತ್ತಮವಾದ ಬದುಕನ್ನು ನಡೆಸಬೇಕಿದೆ. ಗ್ರಾಮೀಣದ ಬದುಕು ನನಗೆ ಅರಿವು ಇದೆ, ನಮ್ಮಲ್ಲಿ ಪ್ರತಿಭೆ ಇದ್ದರೆ ಯಾವ ರೀತಿ ನೋಡುತ್ತಾರೆ ಇಲ್ಲದಿದ್ದರೆ ಯಾವ ರೀತಿ ನೋಡುತ್ತಾರೆ ಎಂಬ ಭಾವನೆ ಇದೆ. ಸರ್ಕಾರ ಆಸ್ಪೃಶ್ಯತೆಯನ್ನು ನಿವಾರಣೆಯನ್ನು ಮಾಡುವುದು ಸರ್ಕಾರ, ಅಧಿಕಾರಿಗಳು ಹಾಗೂ ಜನತೆಯೆ ಕಾರ್ಯವಾಗಿದೆ. ನಿಮ್ಮಲ್ಲಿ ಇರುವ ಭೂಮಿಯನ್ನು ಯಾವುದೇ ಕಾರಣಕ್ಕೆ ಕಳೆದು ಕೊಳ್ಳಬೇಡಿ  ಇರುವ ಭೂಮಿಯನ್ನು ವಿವಿಧ ಕಾರಣಗಳಿಗೆ ಮಾರಬೇಡಿ ಎಂದು ಕಿವಿ ಮಾತು ಹೇಳಿದ ಕುಮಾರಸ್ವಾಮಿಯವರು, ಭೂಮಿಯ ಜೊತೆಗೆ ನಿಮ್ಮ ಭಾಂಧವ್ಯ ತಾಯಿಯ ರೂಪದಲ್ಲಿ ಇರಬೇಕಿದೆ. ದಲಿತರ ಬಗ್ಗೆ ಕಾಳಜಿಯನ್ನು ವಹಿಸಬೇಕಿದೆ. ಭೂಮಿಯನ್ನು ಬಿಡಬೇಡಿ ಎಂದರು.

ಹೈಕೋರ್ಟ್ ನ್ಯಾಯಾವಾದಿಗಳಾದ ಬಾಲನ್ ಮಾತನಾಡಿ, ಸರ್ಕಾರ ಈಗ ಜಾರಿಗೆ ತಂದಿರುವ ಈ ಕಾನೂನುಗಳು ಹಳೆಯದಾದ ಬಾಟಲ್ ಹೊಸದಾದ ವಿಷದ ಬಾಟಲ್ ಆಗಿದೆ, ಈಗ ಇರುವ ಕಾನೂನು ಯಾವ ಭಾಷೆಯಲ್ಲಿ ಇದೆ ಎಂಬುದು ಅರ್ಥವಾಗುತ್ತಿಲ್ಲ, ಈಗ ಆಡಳಿತದಲ್ಲಿ ಇರುವ ಶೇ. 100ರಲ್ಲಿ ಶೇ. 70 ರಷ್ಟು ಬ್ರಾಹ್ಮಣರಾಗಿದ್ದಾರೆ. ಎಲ್ಲಾ ಮುಂಚೂಣಿಯ ಸ್ಥಾನದಲ್ಲಿಯೂ ಸಹಾ ಅವರು ಇದ್ದಾರೆ. ಶೇ. 3ರಷ್ಟು ಇರುವ ಅವರು ಶೇ.70ರಷ್ಟ ಇರುವವರನ್ನು ಆಳುತ್ತಿದ್ದಾರೆ. ಸರ್ಕಾರ ಈಗ ಜಾರಿ ಮಾಡಿರುವ ಕಾನೂನುಗಳು ದಲಿತ, ಮಾನವ ವಿರೋಧಿಯಾಗಿದೆ.ಬ್ರಿಟಿಷರ ಕಾಲದಲ್ಲಿ ನಮ್ಮ  ದೇಶದಲ್ಲಿ ಇದ್ದ ಸಂಪತ್‌ನ್ನು ಲೂಟಿ ಮಾಡುತ್ತಿದ್ದಾಗ ಇದನ್ನು ಸ್ಥಳಿಯರು ವಿರೋಧ ಮಾಡಿದರು ಅವರನ್ನು ನಿಯಂತ್ರಿಸಲು ಕಾನೂನುಗಳನ್ನು ಜಾರಿ ಮಾಡಲಾಯಿತು. ಕಾನೂನು ರಚನೆ ಮಾಡುವವರಲ್ಲಿ ದಲಿತರು ಇದ್ದರೆ ಅಗ ದಲಿತರ ಪರವಾದ ಕಾನೂನು ರಚನೆಯಾಗುತ್ತದೆ ಆದರೆ ಅಲ್ಲಿ ನಮ್ಮವರು ಯಾರು ಇಲ್ಲದಿರುವುದರಿಂದ ನಮಗೆ ಪೂರಕವಾದ ಕಾನೂನುಗಳು ಬರುತ್ತಿಲ್ಲ ಎಂದು ವಿಷಾಧಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಮೀಸಲಾತಿ)ಯ ರಾಜ್ಯಾಧ್ಯಕ್ಷರಾದ ವೈ.ರಾಜಣ್ಣ ತುರುವನೂರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಗಾರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮೀಸಲಾತಿ)ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ರವಿ, ವಕೀಲರಾದ ಎಂ.ಕೆ.ಲೋಕೇಶ್, ಎನ್.ಚಂದ್ರಪ್ಪ, ಮಾಲತೇಶ್ ಆರಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಮೀಸಲಾತಿ)ಯ ಗೌರವಾಧ್ಯಕ್ಷರಾದ ಹುಲ್ಲೂರು ಕುಮಾರಸ್ವಾಮಿ, ಜಿಲ್ಲಾಧ್ಯಕ್ಷರಾದ ಜಗದೀಶ್ ಪಿ ಕವಾಡಿಗರ ಹಟ್ಟಿ, ಜಿಲ್ಲಾ ಕಾರ್ಯದರ್ಶಿ ಎಂ.ಅಂಜಿನಪ್ಪ, ರಾಜ್ಯ ಉಪಾಧ್ಯಕ್ಷ ಹೆಚ್.ಕೃಷ್ಣಮೂರ್ತಿ, ಜೈ ಭೀಮ್ ಯುವಕ ಸಂಘದ ರಾಜ್ಯಾಧ್ಯಕ್ಷ ಮಹೇಶ್. ಎಂ ಭಾಗವಹಿಸಿದ್ದರು.

ಹನುಮಂತ ಪೂಜಾರಿ ನನ್ನವಾಳರವರು ದಲಿತ ಗೀತ ಗಾಯನ ಮಾಡಿದರೆ, ಹೆಚ್.ಈಶ್ವರಪ್ಪ ಸ್ವಾಗತಿಸಿದರು. ಶಿವಣ್ಣ ವಂದಿಸಿದರು, ರಮೇಶ್ ಕಾರ್ಯಕ್ರಮ ನಿರೂಪಿಸಿದರು. 

Leave a Reply

Your email address will not be published. Required fields are marked *