ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಚಿತ್ರದುರ್ಗ ಜಿಲ್ಲಾ ಹಾಗೂ ತಾಲ್ಲೂಕುಗಳ ಗ್ಯಾರೆಂಟಿ ಅನುಷ್ಠಾನ ಪದಾಧಿಕಾರಿಗಳ ಸಭೆ ಹಾಗೂ ಕಾಂಗ್ರೆಸ್ ಜಿಲ್ಲಾ ಕುಶಲಕರ್ಮಿಗಳ ವಿಭಾಗದ ಪದಾಧಿಕಾರಿಗಳ ಸನ್ಮಾನ ಸಮಾರಂಭ ಹಾಗೂ ಪದಾಧಿಕಾರಿಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜು. 29 : ರಾಜ್ಯ ಸರ್ಕಾರ ಜಾರಿ ತಂದಿರುವ ಪಂಚ ಗ್ಯಾರೆಂಟಿ ಭಾಗ್ಯಗಳು ಅರ್ಹ ವ್ಯಕ್ತಿಗೆ ಸಿಗುವಂತೆ ಮಾಡಬೇಕಿದೆ. ಈ ಭಾಗ್ಯದಿಂದ ಯಾವೊಬ್ಬ ವ್ಯಕಿಯೂ ಸಹಾ ತಪ್ಪಿಸಿಕೊಳ್ಳದಂತೆ ಎಚ್ಚರವಹಿಸಬೇಕಿದೆ ನಮ್ಮ ಪಂಚ ಭಾಗ್ಯಗಳಲ್ಲಿ ಯಾವುದಾದರೊಂದು ಭಾಗ್ಯವನ್ನು ಈ ನಾಡಿನ ಜನತೆ ಪಡೆಯಬೇಕು ಇದರ ಬಗ್ಗೆ ಜಿಲ್ಲಾ ಸಮಿತಿಯವರು ಕಾರ್ಯೋನ್ಮೂಖರಾಗಬೇಕಿದೆ ಎಂದು ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷರಾದ ಹೆಚ್.ಎಂ.ರೇವಣ್ಣ ಕರೆ ನೀಡಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಚಿತ್ರದುರ್ಗ ಜಿಲ್ಲಾ ಹಾಗೂ ತಾಲ್ಲೂಕುಗಳ ಗ್ಯಾರೆಂಟಿ ಅನುಷ್ಠಾನ ಪದಾಧಿಕಾರಿಗಳ ಸಭೆ ಹಾಗೂ ಕಾಂಗ್ರೆಸ್ ಜಿಲ್ಲಾ ಕುಶಲಕರ್ಮಿಗಳ ವಿಭಾಗದ ಪದಾಧಿಕಾರಿಗಳ ಸನ್ಮಾನ ಸಮಾರಂಭ ಹಾಗೂ ಪದಾಧಿಕಾರಿಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದಲ್ಲಿನ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮವಾದ ಜನಾಂಗವನ್ನು ಗುರುತಿಸಿ ಅವರಿಗೆ ಸ್ಥಾನವನ್ನು ನೀಡುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ದತಿಯಾಗಿದೆ. ಇಲ್ಲಿ ಎಲ್ಲರು ಒಂದೇ ಮೇಲು, ಕೀಳು, ಸಣ್ಣ ಮೇಲ್ವರ್ಗ, ಶ್ರೀಮಂತ ಬಡವ ಎಂಬ ಬೇಧ ಬಾವ ಇಲ್ಲ ಎಲ್ಲರು ಸಹಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದಾರೆ. ದೇವರಾಜ್ ಆರಸ್ ಹಾಗೂ ಇಂದಿರಾಗಾಂಧಿ ಕಾಲದಿಂದಲೇ ರಾಜ್ಯದಲ್ಲಿ ಹಲವಾರು ಯೋಜನೆಗಳನ್ನು ಜನತೆಗೆ ನೀಡುತ್ತಾ ಬರಲಾಗಿದೆ ಇದರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಗುಂಡುರಾವ್, ಸೇರಿದಂತೆ ಅನೇಕು ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮವಾದ ಯೋಜನೆಗಳನ್ನು ನೀಡುತ್ತಾ ಬಂದಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆಯ ಸಮಯದಲ್ಲಿ ನೀಡಿದಂತ 165 ಭರವಸೆಗಳನ್ನು ಈಡೇರಿಸಿದೆ. ನಮ್ಮ ಪಕ್ಷದ ಗ್ಯಾರೆಂಟಿಗಳು ಆರ್ಥಿಕವಾಗಿ ದುರ್ಬಲರಾದವರನ್ನು ಸಬಲರನ್ನಾಗಿ ಮಾಡುವಂತ ಯೋಜನೆಗಳಾಗಿವೆ ಎಂದರು.
ನಮ್ಮ ವಿರೋಧ ಪಕ್ಷದವರು ನಮ್ಮ ಗ್ಯಾರೆಂಟಿ ಯೋಜನೆಗಳ ಬಗ್ಗೆ ಇಲ್ಲ ಸಲ್ಲದೆ ಮಾತುಗಳನ್ನು ಆಡುತ್ತಿದ್ದಾರೆ ಇವುಗಳನ್ನು ನೀಡಿದರೆ ರಾಜ್ಯ ದಿವಾಳಿಯಾಗುತ್ತದೆ,ಆರ್ಥಿಕ ಸಂಕಷ್ಟ ಬರುತ್ತದೆ ಎಂದೆಲ್ಲಾ ಜನರಿಗೆ ಮಂಕುಬೂದಿಯನ್ನು ಎರಚುವ ಕಾರ್ಯವನ್ನು ಮಾಡುತ್ತಿದ್ದಾರೆ ಇದರ ಬಗ್ಗೆ ಜಿಲ್ಲಾ ಸಮಿತಿಯವರು ತಕ್ಕ ಉತ್ತರವನ್ನು ನೀಡಬೇಕಿದೆ, ಗೃಹಲಕ್ಷ್ಮಿ ಯೋಜನೆಯ ಹಣ ಮೇವರೆಗೂ ಬಂದಿದೆ ಇನ್ನು ಸ್ವಲ್ಪ ದಿನದಲ್ಲಿ ಜೂನ್ ತಿಂಗಳ ಹಣ ಬರುತ್ತದೆ, ಆದರೆ ಕೆಲವರು ಮೂರು ತಿಂಗಳಿಂದ ಹಣ ಬಂದಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಇವರಿಗೆ ತಕ್ಕ ಉತ್ತರವನ್ನು ನಮ್ಮ ಕಾರ್ಯಕರ್ತರು ಮುಖಂಡರು ನೀಡಬೇಕಿದೆ ಎಂದು ರೇವಣ್ಣ ತಿಳಿಸಿದರು.
ಕಾಂಗ್ರೆಸ್ ಪಕ್ಷ ಪ್ರಾರಂಭೀಸಿರುವ ಪಂಚ ಗ್ಯಾರೆಂಟಿ ಭಾಗ್ಯಗಳು ಯಾವುದೆ ಕಾರಣಕ್ಕೂ ನಿಲ್ಲುವುದಿಲ್ಲ, ಇವು ಸರ್ಕಾರ ಇರುವವರೆಗೂ ಮುಂದುವರೆಯುತ್ತವೆ ಆದರೆ ಬಿಜೆಪಿಯವರು ಇದರ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ, ಇವುಗಳ ಬಗ್ಗೆ ಯಾವುದೇ ಗೊಂದಲವಾಗಲಿ ಅಂತಕವಾಗಲಿ ಬೇಡ ಜನತೆಯೂ ಸಹಾ ನಿರಾಂತಕವಾಗಿ ಇರುವಂತೆ ಮನವಿ ಮಾಡಿದ ಅವರು, ಕಾಂಗ್ರೆಸ್ ಪಕ್ಷ ಕೂಡುವುದಕ್ಕೇ ಇರುವುದು ಆದರೆ ಬಿಜೆಪಿ ಕಿತ್ತುಕೊಳ್ಳುವುದಕ್ಕೆ ಇದೆ. ಪಂಚ ಗ್ಯಾರೆಂಟಿಗಳು ಸಿಗದೇ ಇರುವ ವ್ಯಕ್ತಿ ನಮ್ಮ ರಾಜ್ಯದಲ್ಲಿ ಇರಬಾರದು ಈ ರೀತಿಯಲ್ಲಿ ಜಿಲ್ಲಾ ಸಮಿತಿಯವರು ನೋಡಿಕೊಳ್ಳಬೇಕಿದೆ ಇದಕ್ಕಾಗಿ ಕಚೇರಿಯನ್ನು ಹಾಗೂ ಸಿಬ್ಬಂದಿಯನ್ನುಸ ಹಾ ನೀಡಲಾಗಿದೆ ಇದರ ಸದುಪಯೋಗ ಮಾಡಿ ಎಂದು ರೇವಣ್ಣ ಕರೆ ನೀಡಿದರು.
ಪಂಚ ಗ್ಯಾರೆಂಟಿಗಳ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಶಿವಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷ ನೀಡಿರುವ ಈ ಗ್ಯಾರೆಂಟಿಗಳನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಬೇಕಿದೆ. ಬಡವರನ್ನು ಆರ್ಥಿಕವಾಗಿ ಮೇಲೆತ್ತುವಂತ ಯೋಜನೆ ಇದಾಗಿದೆ. ಇದರ ಬಗ್ಗೆ ಹಲವಾರು ಜನತೆ ತಕರಾರು ಮಾಡುತ್ತಿದ್ದಾರೆ ಅವರಿಗೆ ಸರಿಯಾದ ಉತ್ತರವನ್ನು ಸಮಿತಿಯವರು ನೀಡಬೇಕಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಕುಶಲಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷರಾದ ಪ್ರಸನ್ನಕುಮಾರ್ ಮಾತನಾಡಿ, ನಮ್ಮ ವಿಭಾಗದಲ್ಲಿ ಸೂಕ್ಷ್ಮ, ಆತಿ ಸೂಕ್ಷ್ಮ ಜನಾಂಗವನ್ನು ಗುರುತಿಸುವುದರ ಮೂಲಕ ಅವರಿಗೆ ರಾಜಕೀಯವಾಗಿ ಸ್ಥಾನವನ್ನು ನೀಡಲಾಗುತ್ತಿದೆ. ಅವರು ಮಾಡುವ ಕೆಲಸವನ್ನು ನೋಡಿ ಜಿಲ್ಲಾ, ತಾಲ್ಲೂಕು ಸಮಿತಿಗಳಲ್ಲಿ ಸ್ಥಾನಗಳನ್ನು ನೀಡಲಾಗುತ್ತಿದೆ. ಈಗಾಗಲೇ ರಾಜ್ಯದ ವಿವಿಧೆಡೆಗಳಲ್ಲಿ ಜಿಲ್ಲಾ ಸಮಿತಿಗಳನ್ನು ಸ್ಥಾಪನೆ ಮಾಡಲಾಗಿದೆ ಇದ್ದಲ್ಲದೆ ತಾಲ್ಲೂಕು ಸಮಿತಿಗಳನ್ನು ಸಹಾ ರಚನೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಅಧ್ಯಕ್ಷ ತಾಜ್ ಪೀರ್, ಜಿ.ಪಂ.ಮಾಜಿ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ, ಸುರೇಶ್ ಬಾಬು, ಮೈಲಾರಪ್ಪ, ಶ್ರೀಮತಿ ಮೋಕ್ಷಾರುದ್ರಸ್ವಾಮಿ, ಕಿರಣ್, ಪ್ರಕಾಶ್, ನಜ್ಮತಾಜ್, ಲೋಕೇಶ್, ತಿಪ್ಪಮ್ಮ, ಶಿವಕುಮಾರ್, ಸೇರಿದಂತೆ ಇತರರು ಭಾಗವಹಿಸಿದ್ದರು.