ದಲಿತರು ಮತ್ತು ಹಿಂದುಳಿದವರು ಸಮಾಜದ ಮುಖ್ಯವಾಹಿನಿಗೆ ಬರಲು ಸಂಘಟಿತರಾಗವುದು ಅವಶ್ಯಕ : ರಾಜ್ಯ ಅಹಿಂದ ಸಂಚಾಲಕ  ಆರ್.ಸುರೇಂದ್ರ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಅಹಿಂದ ಚಳುವಳಿಯ ಪೂರ್ವಬಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಭಾರತ ದೇಶಕ್ಕೆ ಆರ್ಯರು ಪ್ರವೇಶಿಸಿ ಮನುವಾದ, ವರ್ಣಾಶ್ರಮ ನೀತಿ ಜಾತಿವ್ಯವಸ್ಥೆಯಲ್ಲಿ ಮೊಘಲರ ಆಳ್ವಿಕೆ, ಬ್ರಿಟಿಷರ ಆಳ್ವಿಕೆ ಇಂತಹ ಹತ್ತು ಹಲವಾರು ಕಾರಣಗಳಿಂದ ಮೂಲ ನಿವಾಸಿಗಳು ಆದಿದ್ರಾವಿಡರು, ದಲಿತ ಹಿಂದುಳಿದ ಅಲ್ಪಸಂಖ್ಯಾತರು ರೂಪಾಂತರವಾಗದೆ ಚಿದ್ರಗೊಂಡು ಈ ದೇಶದಲ್ಲಿ ಬದುಕುತ್ತಿವೆ. ಸಮಾನ ಮನಸುಗಳು ಸಂಘಟಿತರಾಗಿ ಸಮಾಜದಲ್ಲಿ ಅಹಿಂದ ಚಳುವಳಿಯ ಮೂಲಕ ಅಲ್ಪಸಂಖ್ಯಾತ ಹಿಂದುಳಿದವರು ಮತ್ತು ದಲಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಈ ಮೂಲಕ ದೇಶದ ಪ್ರಗತಿಗೆ ಅಸಾಮಾನತೆ ನಿವಾರಣೆ ಪ್ರಮುಖವಾಗಿ ಈ ದೇಶದ ಮೂಲ ನಿವಾಸಿಗಳಾದ ಈ ಮೂರು ವರ್ಗದವರನ್ನು ಪುನರ್ ಸಂಘಟನೆ ಮತ್ತು ಸಮ ಸಮಾಜದ ರಾಷ್ಟ್ರ ನಿರ್ಮಾಣಕ್ಕೆ ಅಹಿಂದ ಚಳುವಳಿ ಹೊರಟಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಕೆಂಚಪ್ಪನವರು ಮಾತನಾಡಿ ಈ ಅಹಿಂದ ಸಂಘಟನೆ ಕರ್ನಾಟಕ ರಾಜ್ಯದಲ್ಲಿ ಬಲಿಷ್ಠವಾಗಿ ಬೆಳೆಸಿ ತುಳಿತಕ್ಕೆ ಒಳಗಾದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕೊಡಿಸಿಕೊಡಲು ಈ ಸಂಘ ಶ್ರಮಿಸಬೇಕೆಂದು ಜಿಲ್ಲೆಯಲ್ಲಿ ಅಹಿಂದ ಸಂಘಟನೆಯನ್ನು ಬೆಳೆಸಿ ಸಮಾನತೆಯ ಹೊರಾಟದ ಜೊತೆಗೆ ನ್ಯಾಯಯುತವಾದ ಹಕ್ಕುಗಳನ್ನು ಪಡೆಯಲು ಈ ಅಹಿಂದ  ಜಿಲ್ಲೆಯಲ್ಲಿ ಬಲಪಡಿಸಲು ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕೆಂದು ತಿಳಿಸಿದರು.

ಪತ್ರಕರ್ತರಾದ ಟಿ.ರಾಮು ಮಾತನಾಡಿ ಈ ಮುಖೇನ ಭಾರತ ದೇಶದ ಸಮಸಮಾಜದ ನಿರ್ಮಾಣ ಮತ್ತು ಭವಿಷ್ಯ ಭಾರತ ನಿರ್ಮಾಣದಲ್ಲಿ ಅಹಿಂದ ಸಮುದಾಯಗಳು ಸಜ್ಜುಗೊಳಿಸಬೇಕು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸುಧಾರಣೆಗೊಳಿಸಲು ಉನ್ನತೀಕರಿಸಲು ಜಿಲ್ಲೆಯಲ್ಲಿ ಅಹಿಂದವನ್ನು ಬಲಪಡಿಸಿ ಚಿತ್ರದುರ್ಗ ಜಿಲ್ಲೆ ಹಿಂದುಳಿದ ಜಿಲ್ಲೆ ಅತೀ ಹೆಚ್ಚು ಸಂಘಟಿತವಾಗಲಿ ಎಂದರು.

ಕಾರ್ಯಕ್ರಮದಲ್ಲಿ ಆನಂದ್‌ಕುಮಾರ್, ಪ್ರದೀಪ್, ರಂಗಸ್ವಾಮಿ, ಜಮೀರ್, ಖಾಸಿಂ, ಜಾವೀದ್ ಮತ್ತು ರೈತ ಮುಖಂಡರಾದ ಸತ್ಯಪ್ಪ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *