ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳಿಗೆ ನೀರು ಹರಿದ ಗ್ರಾಮದ ಪ್ರವಾಸಿ ಮಂದಿರಗಳಿಗೆ ಶಾಸಕ  ಕೆ.ಸಿ.ವಿರೇಂದ್ರ ಪಪ್ಪಿ ಬೇಟಿ.

ಚಿತ್ರದುರ್ಗ ಆ. 01 ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಚಿತ್ರದುರ್ಗ ತಾಲ್ಲೂಕಿನ 8 ಕೆರೆಗಳಿಗೆ ನೀರನ್ನು ಹರಿಸಲು ಕಾರಣರಾದ ಚಿತ್ರದುರ್ಗ ಕ್ಷೇತ್ರದ ಶಾಸಕರಾದ ಕೆ.ಸಿ.ವಿರೇಂದ್ರರವರನ್ನು ಇಂದು ಆಯಾ ಗ್ರಾಮದವರು ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡುವುದರ ಮೂಲಕ ಅಭಿನಂದಿಸಿದರು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ತಾಲ್ಲೂಕಿನ ಗೂಡಬನಹಾಳ್‍ನ ತಿಮ್ಮಣ್ಣ ನಾಯಕ ಕೆರೆ, ಹುಲ್ಲೂರು, ಮಾನಂಗಿ, ಕಾಟೇಹಳ್ಳಿ, ಸಿದ್ದಾಪುರ, ಮಠದ ಹಿಂದಿನ ಕೆರೆ, ಪಂಡರಹಳ್ಳಿ ಗೋಕಟ್ಟೆ, ಹಲಸಿನ ಕರೆ, ಸಿಂಗಾಪುರ ಗೊಲ್ಲರಹಟ್ಟಿಯ ಕರೆಗಳಿಗೆ ನೀರು ತರಬೇಕೆಂದು ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಆದರೆ ಕಾರ್ಯ ಗತವಾಗಿರಲಿಲ್ಲ, ಈಗ ಶಾಸಕರಾದ ವಿರೇಂದ್ರರವರು ಸರ್ಕಾರದಲ್ಲಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರನ್ನು ಬೇಟಿ ಮಾಡಿ ಬಾಗದಲ್ಲಿ ನೀರಿನ ಭವಣೆ ಹೆಚ್ಚಾಗಿದೆ ಈ ಕೆರೆಗಳಿಗೆ ನೀರನ್ನು ಉಣಿಸುವುದರ ಮೂಲಕ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿದ್ದರ ಫಲವಾಗಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದಿಂದ ಇದರ ಬಗ್ಗೆ ಸರ್ವೇ ಮಾಡುವಂತೆ ಅಧೀಕೃತವಾಗಿ ಆದೇಶವನ್ನು ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಇಂಜಿನಿಯರಿಗೆ ಸೂಚನೆ ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕೈಬಿಟ್ಟ ಕೆರೆಗಳನ್ನು ತಂಬಿಸುವ ಕಾಮಗಾರಿಗೆ ಕನ್ಸೆಲೆನ್ಸ್‍ಯಿಂದ ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಕಾರ್ಯ ಸಾಧ್ಯವಾಗುವಂತೆ ವಿವರವಾದ ಫೀಲ್ಡ್ ಸರ್ವೇ ಮಾಡಿಸಿ ಕಾರ್ಯಾಸಾಧ್ಯತಾ ವರದಿಯನ್ನು ತಯಾರಿಸುವ ಸಲುವಾಗಿ ಸಮಾಲೋಚಕರ ಸೇವೆಯನ್ನು ಪಡೆಯಲು 22 ಲಕ್ಷ ರೂ.ಗಳನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳ ಆನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಣ್ಣ ಇದರ ಮುಂದಾಳತ್ವವನ್ನು ವಹಿಸಿದ್ದರು, ಈ ಸಮಯದಲ್ಲಿ ಶೇಖರಪ್ಪ, ಸಿಂಗಾಪುರ, ಗಂಗಾಧರ ತಿಪ್ಪೇಸ್ವಾಮಿ ಹುಲ್ಲೂರು, ರವಿಕುಮಾರ್, ರೇವಣ್ಣ ಗೂಡಬನಹಾಳ್, ಸಿದ್ದಲಿಂಗಪ್ಪ, ಧನಂಜಯ, ನಿರಂಜನ, ಮಹಾದೇವಪ್ಪ, ಚಂದ್ರಶೇಖರ್, ಸಂದೀಪ್, ರೇವಣ್ಣ ಸಿದ್ದಪ್ಪ, ಶಿವಕುಮಾರ್, ಮಲೇಶಪ್ಪ, ನಿರಂಜನ, ಚಿತ್ರಲಿಂಗಪ್ಪ, ಸಿದ್ದಲಿಂಗಪ್ಪ, ಕಾಂತರಾಜ್, ಹಾಲೇಶ್,

Leave a Reply

Your email address will not be published. Required fields are marked *