5 August India Olympics Schedule: ಪ್ಯಾರಿಸ್ ಒಲಿಂಪಿಕ್ಸ್ 2024ರ 10ನೇ ದಿನದ ಭಾರತದ ಸ್ಫರ್ಧೆಗಳು ಮತ್ತು ಸಮಯದ ವೇಳಾಪಟ್ಟಿ ವಿವರ ಇಲ್ಲಿದೆ.

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರ 9ನೇ ದಿನವು ಭಾರತದ ಇಬ್ಬರು ಪದಕ ಸ್ಪರ್ಧಿಗಳಾದ ಲೊವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್) ಮತ್ತು ಲಕ್ಷ್ಯ ಸೇನ್ (ಬ್ಯಾಡ್ಮಿಂಟನ್) ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಸೋಲನು ಕಂಡು ನಿರಾಸೆ ಅನುಭವಿಸಿದ್ದರು. ಆದರೇ ಭಾರತ ಹಾಕಿ ತಂಡ ಪೆನಾಲ್ಟಿ ಶೂಟೌಟ್ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ಹಾಗಾದರೆ 10ನೇ ದಿನವಾದ ಇಂದು ಭಾರತದ ಕ್ರೀಡಾಪಟುಗಳು ಭಾಗವಹಿಸುತ್ತಿರುವ ಕ್ರೀಡೆಗಳ ಸಂಪೂರ್ಣ ವೇಳಾ ಪಟ್ಟಿ ಇಲ್ಲಿದೆ.
ಆಗಸ್ಟ್ 5 ಭಾರತೀಯ ಕ್ರೀಡಾಪಟುಗಳ ಸ್ಪರ್ಧೆಗಳು
ಶೂಟಿಂಗ್ – ಸ್ಕೀಟ್ ಮಿಶ್ರ ಅರ್ಹತಾ ಸ್ಪರ್ಧೆಯಲ್ಲಿ ಭಾರತದ ಅನಂತ್ ಜೀತ್ ಸಿಂಗ್ ನರುಕಾ ಮತ್ತು ಮಹೇಶ್ವರಿ ಚೌಹಾಣ್ ಕಾಣಿಸಿಕೊಳ್ಳಲಿದ್ದಾರೆ. ಒಟ್ಟು 15 ದೇಶಗಳ ತಂಡಗಳು ಈ ಕೂಟದಲ್ಲಿ ಭಾಗವಹಿಸಲಿವೆ.
ಸ್ಕೀಟ್ ಮಿಶ್ರ ತಂಡ ಅರ್ಹತೆ ಪಂದ್ಯ – ಮಧ್ಯಾಹ್ನ 12:30ಕ್ಕೆ
ಟೇಬಲ್ ಟೆನಿಸ್ – ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳಾದ ಅರ್ಚನಾ ಕಾಮತ್, ಮನಿಕಾ ಬಾತ್ರಾ ಮತ್ತು ಶ್ರೀಜಾ ಅಕುಲಾ ಕಾಣಿಸಿಕೊಳ್ಳಲಿದ್ದಾರೆ. ಭಾರತ ತಂಡವು ಮಹಿಳಾ ತಂಡ ಈವೆಂಟ್‌ನ 16ನೇ ಸುತ್ತಿನಲ್ಲಿ ರೊಮೇನಿಯಾ ತಂಡದೊಂದಿಗೆ ಸೆಣಸಲಿದೆ.
16ನೇ ಸುತ್ತಿನ ಮಹಿಳಾ ತಂಡ ಟೆಬಲ್ ಟೆನ್ನಿಸ್ – ಮಧ್ಯಾಹ್ನ 1:30ಕ್ಕೆ
ಅಥ್ಲೆಟಿಕ್ಸ್ – ಭಾರತದ ಮಹಿಳಾ ಅಥ್ಲೀಟ್ ಕಿರಣ್ ಪಹಲ್ ಮಹಿಳೆಯರ 400 ಮೀಟರ್ ರೌಂಡ್ 1 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್ 1ನೇ ಸುತ್ತುನಲ್ಲಿ ಅವಿನಾಶ್ ಮುಕುಂದ್ ಸೇಬಲ್ ಕೂಡ ಸ್ಪರ್ಧಿಸಲಿದ್ದಾರೆ.
ಮಹಿಳೆಯರ 400 ಮೀ ಇನೇ ಸುತ್ತು – ಮಧ್ಯಾಹ್ನ 3:25ಕ್ಕೆ
ಪುರುಷರ 3000ಮೀ ಸ್ಟೀಪಲ್‌ಚೇಸ್ 1ನೇ ಸುತ್ತು – ರಾತ್ರಿ 10:34ಕ್ಕೆ
ಬ್ಯಾಡ್ಮಿಂಟನ್ – ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಈವೆಂಟ್‌ನ ಕಂಚಿನ ಪದಕ ಪಂದ್ಯದಲ್ಲಿ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಕಾಣಿಸಿಕೊಳ್ಳಲಿದ್ದಾರೆ. ಈ ಪಂದ್ಯದಲ್ಲಿ ಅವರು ಮಲೇಷ್ಯಾದ ಲಿ ಜಿ ಜಿಯಾ ಅವರೊಂದಿಗೆ ಆಡಲಿದ್ದಾರೆ. ಈ ಕೂಟದ ಸೆಮಿಫೈನಲ್‌ನಲ್ಲಿ ನಿನ್ನೆ ಲಕ್ಷ್ಯ ಅವರು ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರ ವಿರುದ್ದ 2-0 ಅಂತರದಿಂದ ಸೋಲನುಭವಿಸಿ ಚಿನ್ನದ ಪದಕ ರೇಸ್‌ನಿಂದ ಹೊರಬಿದ್ದಿದ್ದರು.
ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಕಂಚಿನ ಪದಕ ಪಂದ್ಯ (ಲಕ್ಷ್ಯ ಸೇನ್) – ಸಂಜೆ 6ಕ್ಕೆ
ಸೈಲಿಂಗ್ – ಒಲಿಂಪಿಕ್ಸ್‌ನ 10ನೇ ದಿನ, ಪುರುಷರ ಸೈಲಿಂಗ್ ಸ್ಪರ್ಧೆಯಲ್ಲಿ ಭಾರತದ ಅಥ್ಲೀಟ್ ವಿಷ್ಣು ಸರವಣನ್ ಭಾರತದ ಪರವಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಮಹಿಳೆಯರ ನೌಕಾಯಾನ ಸ್ಪರ್ಧೆಯಲ್ಲಿ ನೇತ್ರಾ ಕುಮನನ್ ತಮ್ಮ ಕೈಚಳಕ ತೋರಲಿದ್ದಾರೆ. ರೇಸ್ 7 ಮತ್ತು ರೇಸ್ 8ರಲ್ಲಿ ಇಬ್ಬರೂ ಭಾಗವಹಿಸಲಿದ್ದಾರೆ.
- ಪುರುಷರ ಸೈಲಿಂಗ್ ಡಿಂಗಿ ರೇಸ್ 9 ಮತ್ತು ರೇಸ್ 10 (ವಿಷ್ಣು ಸರವಣನ್) – ಮಧ್ಯಾಹ್ನ 3:35ಕ್ಕೆ
- ಮಹಿಳೆಯರ ಸೈಲಿಂಗ್ ಡಿಂಗಿ ರೇಸ್ 9 ಮತ್ತು 10 (ನೇತ್ರಾ ಕುಮನನ್) – ಸಂಜೆ 6:10ಕ್ಕೆ