ಚನ್ನಪಟ್ಟಣ ತಲುಪಿದ ಮೈಸೂರು ಚಲೋ ಪಾದಯಾತ್ರೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 05 : ಭ್ರಷ್ಟ ಕಾಂಗ್ರಸ್ ಪಕ್ಷದ ಮೂಡ ಹಗರಣ ಎಸ್ ಟಿ ನಿಗಮದ ಹಗರಣ ಇತರೆ ಹಗರಣಗಳನ್ನು ಖಂಡಿಸಿ  ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯು ಇಂದು ಚನ್ನಪಟ್ಟಣ ತಲುಪಿತು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾದ್ಯಕ್ಷರಾದ ಬಿ ವೈ ವಿಜಯೇಂದ್ರ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ನೇತ್ರತ್ವದಲ್ಲಿ ನಡೆಯಿತು ಸಹಸ್ರಾರು ಬಿಜೆಪಿ ಶಾಸಕರು, ಪರಿಷತ್ ಸದಸ್ಯರು ಮುಖಂಡರು ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಹುಬ್ಬಳ್ಳಿ ಶಾಸಕರಾದ ಅರವಿಂದ ಬೆಲ್ಲದ, ಚಿತ್ರದುರ್ಗ ಜಿಲ್ಕಾದ್ಯಕ್ಷರಾದ  ಎ ಮುರಳಿ, ಜಿಲ್ಲಾ ಚಿತ್ರದುರ್ಗ ಪ್ರದಾನ ಕಾರ್ಯದರ್ಶಿಗಳಾದ ಸುರೇಶ ಸಿದ್ದಾಪುರ, ಬಿಜೆಪಿ ಮುಖಂಡ ಖಜಾಂಚಿ ಮಾಧುರಿ ಗಿರೀಶ್, ಮುಖಂಡರಾದ ಕೆ ಟಿ ಕುಮಾರಸ್ವಾಮಿ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್ ಎಸ್ ಸಿ ಮೊರ್ಚಾ ರಾಜ್ಯ ಕಾರಿಣಿ  ಸದಸ್ಯೆ ಭಾರ್ಗವಿ ದ್ರಾವಿಡ್ ಪಾದಯಾತ್ರೆಯಲ್ಲಿ ಸಾಥ್ ನೀಡಿದರು

ಚನ್ನಪಟ್ಟಣದ ಸರ್ಕಲ್‌ನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾಜಿಮುಖ್ಯ ಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ,ರಾಜ್ಯದ್ಯಕ್ಷರಾದ ವಿಜಯೆಂದ್ರ ವಿಪಕ್ಷ ನಾಯಕ ಆರ್ ಅಶೋಕ್ ,ನಿಖಿಲ್ ಕುಮಾಸ್ವಾಮಿ, ಡಾ ಅಶ್ವಥ್ ನಾರಾಯಣ್ ಮಾತನಾಡಿದರು.

Leave a Reply

Your email address will not be published. Required fields are marked *