ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಆ. 06: ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮತ್ತು ಪತ್ರಕರ್ತರ ಭವನದ ಬಳಿ ನೂತನವಾಗಿ ಕೊರೆಯಲಾದ ಕೊಳವೆಬಾವಿಗೆ ಜಿಲ್ಲಾಧಿಕಾರಿಗಳಾದ ವೆಂಕಟೇಶ್ ರವರು ಮಂಗಳವಾರ ಚಾಲನೆ ನೀಡಿದರು.
ಈ ಭಾಗದಲ್ಲಿ ನೀರಿನ ಕೊರತೆಯ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟ ಪತ್ರಕರ್ತರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತಾವೇ ಮುಂದೆ ನಿಂತು ಪೂಜೆ ಸಲ್ಲಿಸಿ,ಇಲ್ಲಿ ಕೊಳವೆಬಾವಿ ಕೊರೆಸಲಾಗಿತ್ತು. ಸುಮಾರು 350 ಅಡಿ ಆಳ ಹೋಗಿದ್ದು ಇದರಲ್ಲಿ 2 ಇಂಚು ನೀರಿನ ಜಲಸಿಕ್ಕಿದೆ. ಈ ಕೊಳವೆಬಾವಿಯಿಂದ ಪತ್ರಕರ್ತರ ಭವನದ, ನೀರಿನ ಸಮಸ್ಯೆ ಪರಿಹಾರವಾದಂತೆ ಆಗಿದೆ.
ಈ ಸಂದರ್ಭದಲ್ಲಿ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೋಮಶೇಖರ್, ಆಪರ ಜಿಲ್ಲಾಧಿಕಾರಿಗಳಾದ ಕುಮಾರಸ್ವಾಮಿ, ಪೌರಾಯುಕ್ತರಾದ ಶ್ರೀಮತಿ ರೇಣುಕಾ, ವಾರ್ತಾಧಿಕಾರಿ ತುಕರಾಂ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ದಿನೇಶ್ ಗೌಡಗೆರೆ, ಹಿರಿಯ ಪತ್ರಕರ್ತರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್. ಅಹೋಬಳಪತಿ, ರಾಷ್ಟ್ರೀಯ ಮಂಡಳಿ ಸದಸ್ಯ ಸಿ.ಹೆಚ್. ಹೆಂಜಾರಪ್ಪ, ಉಪಾಧ್ಯಕ್ಷರಾದ ನಾಕೀಕೆರೆ ತಿಪ್ಪೇಸ್ವಾಮಿ, ಕಾರ್ಯದರ್ಶಿಗಳಾದ ವಿ.ವೀರೇಶ್ (ಅಪ್ಪು),ವಿನಾಯಕಬಿ.ಎಸ್. ಖಜಾಂಚಿ, ಡಿ.ಕುಮಾರಸ್ವಾಮಿ. ಬಿ.ಎಸ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಗೌನಹಳ್ಳಿ ಗೋವಿಂದಪ್ಪ, ಬಿ.ಆರ್. ನಾಗೇಶ್, ರಾಜಶೇಖರ. ಸಿ,ಶಿವರಾಜ್.ಆರ್,ರಾಘವೇಂದ್ರ, ವೆಂಟಾಚಲಪತಿ, ಆನಂದ್, ಸಂಘದ ಪದಾಧಿಕಾರಿಗಳು ಸೇರಿದಂತೆ ವಾರ್ತಾ ಇಲಾಖೆಯ ಸಿಬ್ಬಂದಿ ವರ್ಗ ಹಾಜರಿದ್ದರು.