ಪರಿಸರದಲ್ಲಿನ ಮರ ಗಿಡಗಳ ಮಹತ್ವವನ್ನು ಅರಿಯಲು ಆಡು ಮಲ್ಲೇಶ್ವರ ಅರಣ್ಯಕ್ಕೆ ವಿದ್ಯಾರ್ಥಿಗಳ ಭೇಟಿ.

ಚಿತ್ರದುರ್ಗ : ನಗರದ ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 6ಮ ತ್ತು7ನೇ ತರಗತಿಯ ವಿದ್ಯಾರ್ಥಿಗಳಿಗೆ ಆಡು ಮಲ್ಲೇಶ್ವರ  ಅರಣ್ಯದಲ್ಲಿರುವ  ವಿವಿಧ ಜಾತಿಯ ಔಷಧೀಯ ಸಸ್ಯ,  ವಿಶೇಷ ಜಾತಿಯ ಮರ ಮತ್ತು  ಪರಿಸರದಲ್ಲಿ ಮರ ಗಿಡಗಳ ಮಹತ್ವವನ್ನು ಪರಿಚಯಿಸಲು ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ವಿದ್ಯಾರ್ಥಿಗಳಿಗೆ ಯಾವ ಯಾವ ಸಸ್ಯ ಯಾವ ಯಾವ ರೋಗಗಳಿಗೆ ಔಷಧ ವಾಗಿ ಬಳಸಲಾಗುತ್ತದೆ, ಮರಗಳ ಗಾತ್ರ, ಎಲೆಯ ಮಹತ್ವ ಗಿಡಗಳಿಂದ ಔಷಧಿ ತಯಾರಿಸುವ ವಿಧಾನ ಮುಂತಾದ ಅಮೂಲ್ಯ ಮಾಹಿತಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಭಾಸ್ಕರ್ ಎಸ್, ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ ಪ್ರಾಚಾರ್ಯರಾದ ಸಿ ಡಿ ಸಂಪತ್ ಕುಮಾರ್ ಮತ್ತು ಶಿಕ್ಷಕರಾದ  ಚಂದ್ರಶೇಖರ್, ಮಮಜಾನ್, ಸುನಿತ, ಮುಂತಾದವರು ಹಾಜರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

Leave a Reply

Your email address will not be published. Required fields are marked *