ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ (ರಿ)ದ ವತಿಯಿಂದ ಧರಣಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 09: ಸರ್ಕಾರದ ಆದೇಶವಿದ್ದರು ರಾಜ್ಯದ ಬಹುತೇಕ ತಹಶೀಲ್ದಾರ್‍ರರು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರವನ್ನು ನೀಡದೇ ತಿರಸ್ಕರಿಸುತ್ತಿದ್ದಾರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕಾಡುಗೊಲ್ಲರನ್ನು ಅವರ ಭವಿಷ್ಯದ ಹಿತದೃಷ್ಟಿಯಿಂದ ಕೂಡಲೇ ಅಲೆಮಾರಿ ಪಟ್ಟಿಗೆ ಸೇರ್ಪಡೆ ಮಾಡಬೇಕು. ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಇದುವರೆಗೂ ಅಧ್ಯಕ್ಷರ ನೇಮಕ ಮಾಡದೇ ಇರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ. ಈ ಕೂಡಲೇ ಕಾಡುಗೊಲ್ಲರನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು  ಸೇರಿದಂತೆ ಕಾಡುಗೊಲ್ಲ ಜನಾಂಗದ ರಾಜ್ಯ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಕರ್ನಾಟಕ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ (ರಿ)ದ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಾಂಕೇತಿಕವಾಗಿ ಧರಣಿಯನ್ನು ನಡೆಸಿ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷರಾದ ಶಿವುಯಾದವ್ ಸುಮಾರು ಎರಡು ಮೂರು ದಶಕಗಳಿಂದ ಕರ್ನಾಟಕ ರಾಜ್ಯ ಕಾಡುಗೊಲ್ಲ ಜನಾಂಗವು ತಮ್ಮ ಅಸ್ಮಿತೆಗಾಗಿ ಮತ್ತು ಉಳುವಿಗಾಗಿ ತಮ್ಮ ಬದುಕಿಗಾಗಿ ಈ ಹಿಂದಿನ ಸರ್ಕಾರದ ವಿರುದ್ಧ ಅನೇಕ ವಿವಿಧ ರೀತಿಯ ಹೋರಾಟಗಳನ್ನು ಮಾಡುತ್ತಾ ಬಂದಿರುತ್ತದೆ. ಆದರೂ ಸಹ ಅಧಿಕಾರ ನಡೆಸಿದ ಬಹುತೇಕ ಸರ್ಕಾರಗಳು ಕಾಡುಗೊಲ್ಲರನ್ನು ಮತ ಬ್ಯಾಂಕ್‍ಗಳಾಗಿ ಮಾಡಿಕೊಂಡಿವಿಯೇ ವಿನಃ ಅವರ ಬದುಕನ್ನು ಕಟ್ಟಿಕೊಡುವಲ್ಲಿ ಸಂಪೂರ್ಣ ವಿಫಲರಾಗಿವೆ ಎಂದು ದೂರಿದರು.

ಸಿದ್ಧರಾಮಯ್ಯನವರ ಸರ್ಕಾರ ಕಾಡುಗೊಲ್ಲರಿಗೆ ಕುಶಶಾಸ್ತ್ರ ಅಧ್ಯಯನ ನಡೆಸಿ ಕಾಡುಗೊಲ್ಲರಿಗೆ ಅಸ್ಥಿತಿ ನೀಡಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಶಿಫಾರಸ್ಸು ಮಾಡಿದ್ದು, ಸದರಿ ಶಿಫಾರಸ್ಸುಗಳು ಕಾರ್ಯರೂಪಕ್ಕೆ ಬರದೇ ಅಧಿಕಾರಿಗಳ ನಿರ್ಲಕ್ಷತನದಿಂದ ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ದೂರಿದ್ದು, ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ ಫಲಾನುಭವಿಗಳ ಅರ್ಜಿಗಳನ್ನು ಆಹ್ವಾನಿಸಿದ್ದು, ಜಾತಿ ಪ್ರಮಾಣ ಪತ್ರ ನೀಡದಿರುವುದಿರಂದ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಿದ ನಂತರ ಅರ್ಜಿ ಸ್ವೀಕರಿಸುವ ಅಂತಿಮ ದಿನಾಂಕವನ್ನು ನಿಗಧಿ ಮಾಡಬೇಕು ಎಂದು ಒತ್ತಾಯಿಸಿದರು.

ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಶಿಫಾರಸ್ಸು ರಾಜ್ಯಸರ್ಕಾರಕ್ಕೆ ಮರಳಿ ಬಂದಿದ್ದು, ಸರ್ಕಾರವು ಕೂಡಲೇ ಅದನ್ನು ಪರಿಶೀಲಿಸಿ ತನ್ನ ಸಚಿವ ಸಂಪುಟದಲ್ಲಿ ಅನುಮೋದಿಸಿ ಕೂಡಲೇ ಕೇಂದ್ರ ಸರ್ಕಾರಕ್ಕೆ ಅತಿ ತುರ್ತಾಗಿ ಶಿಫಾರಸ್ಸು ಮಾಡಬೇಕು. ಕಾಡುಗೊಲ್ಲರನ್ನು ಎಸ್.ಟಿ ಪಟ್ಟಿಗೆ ಸೇರ್ಪಡೆಯಾಗುವವರೆಗೂ ಪ್ರವರ್ಗ-1ರ ಮೀಸಲಾತಿಯನ್ನು ಮುಂದುವರೆಸಲು ಸ್ಪಷ್ಟ ಆದೇಶ ಮಾಡಬೇಕು.ಅಲೆಮಾರಿ/ಅರೆ ಅಲೆಮಾರಿಗಳಿಗೆ ವಸತಿ ಯೋಜನೆಯಡಿ ನೀಡುವ ಹಣದ ಮೊತ್ತವನ್ನು ರೂ.1,20,000/-ದಿಂದ ರೂ.5.00.000/-ಗಳಿಗೆ ಹೆಚ್ಚಿಸಬೇಕು.ಕಾಡುಗೊಲ್ಲರ ಹಟ್ಟಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಜೊತೆಗೆ ಸರ್ಕಾರದ ವತಿಯಿಂದ ಮೂಡ ನಂಬಿಕೆಗಳ ಬಗ್ಗೆ ಜಾಗೃತಿ ಶಿಬಿರಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಈ ಧರಣಿಯಲ್ಲಿ ಮಾಜಿ ಶಾಸಕರಾದ ಉಮಾಪತಿ, ಶ್ರೀಮತಿ ಜಯ್ಯಮ್ಮ, ತಾಲ್ಲೂಕು ಅಧ್ಯಕ್ಷರಾದ ಹರೀಶ್ ಪೂಜಾರ್, ಜಿಲ್ಲಾಧ್ಯಕ್ಷರಾದ ಡಿ.ಶಿವಣ್ಣ, ಮೂಡಲಗಿರಿಯಪ್ಪ, ತಿಮ್ಮೇಶಿ, ಕಲ್ಲೇಶಿ, ತಿಮ್ಮಯ್ಯ, ಸುದೀಪ್, ಹೇಂತ ಕುಮಾರ್, ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *