CEAT Awards: ಸಿಯೆಟ್ ಪ್ರಶಸ್ತಿ ಗೆದ್ದ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರೋಹಿತ್ ಶರ್ಮಾ.

ಭಾರತದ ಟೈರ್ ತಯಾರಿಕಾ ಕಂಪನಿ ಸಿಯೆಟ್ ವರ್ಷದ ಕ್ರಿಕೆಟಿಂಗ್ ಪ್ರಶಸ್ತಿಗಳನ್ನು ಪ್ರಧಾನ ಮಾಡಿದೆ. ಈ ಬಾರಿ ಪುರುಷರ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ ಟೀಮ್ ಇಂಢಿಯಾ ನಾಯಕ ರೋಹಿತ್ ಶರ್ಮಾಗೆ ಒಲಿದರೆ, ಒಡಿಐ ಬ್ಯಾಟರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ವರ್ಷದ ಟಿ20 ಬ್ಯಾಟರ್ ಆಫ್ ದಿ ಇಯರ್ ಪ್ರಶಸ್ತಿಯು ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಪಾಲಾಗಿದೆ.

ಇನ್ನು ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಏಕದಿನ ಬೌಲರ್ ಪ್ರಶಸ್ತಿ ಪಡೆದರೆ, ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ವರ್ಷದ ಟೆಸ್ಟ್ ಬ್ಯಾಟರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ವರ್ಷದ ಟೆಸ್ಟ್ ಬೌಲರ್ ಪ್ರಶಸ್ತಿಯು ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ನೀಡಲಾಗಿದೆ.

ಮಹಿಳಾ ವಿಭಾಗದಲ್ಲಿ ಟೀಮ್ ಇಂಡಿಯಾ ಆಟಗಾರ್ತಿಯರಾದ ಹರ್ಮನ್​ಪ್ರೀತ್ ಕೌರ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ ಹಾಗೂ ಸ್ಮೃತಿ ಮಂಧಾನ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ರಾಹುಲ್ ದ್ರಾವಿಡ್​ಗೆ ಗೌರವ:

ಜೀವಮಾನದ ಸರ್ವಶ್ರೇಷ್ಠ ಸಾಧನೆಗಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸಿಯೆಟ್ ಕಂಪೆನಿ ಗೌರವಿಸಿದೆ. ಹಾಗೆಯೇ ಶ್ರೇಷ್ಠ ಕ್ರೀಡಾ ಆಡಳಿತಕ್ಕಾಗಿ ಜಯ್ ಶಾ ಅವರಿಗೂ ವಿಶೇಷ ಪ್ರಶಸ್ತಿ ನೀಡಲಾಗಿದೆ. ಅದರಂತೆ ಈ ಬಾರಿಯ ಸಿಯೆಟ್​ ಪ್ರಶಸ್ತಿ ಪಡೆದವರ ಪಟ್ಟಿ ಈ ಕೆಳಗಿನಂತಿದೆ.

ಸಿಯೆಟ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ:

ಸಂಖ್ಯೆಪ್ರಶಸ್ತಿಪ್ರಶಸ್ತಿ ಪಡೆದವರು
1ಜೀವಮಾನ ಸಾಧನೆ ಪ್ರಶಸ್ತಿರಾಹುಲ್ ದ್ರಾವಿಡ್
2ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗರೋಹಿತ್ ಶರ್ಮಾ
3ವರ್ಷದ ಏಕದಿನ ಬ್ಯಾಟರ್ವಿರಾಟ್ ಕೊಹ್ಲಿ
4ವರ್ಷದ ಏಕದಿನ ಬೌಲರ್ಮೊಹಮ್ಮದ್ ಶಮಿ
5ವರ್ಷದ ಟೆಸ್ಟ್ ಬ್ಯಾಟರ್ಯಶಸ್ವಿ ಜೈಸ್ವಾಲ್
6ವರ್ಷದ ಟೆಸ್ಟ್ ಬೌಲರ್ರವಿಚಂದ್ರನ್ ಅಶ್ವಿನ್
7ವರ್ಷದ ಟಿ20 ಬ್ಯಾಟರ್ಫಿಲ್ ಸಾಲ್ಟ್
8ವರ್ಷದ ಟಿ20 ಬೌಲರ್ಟಿಮ್ ಸೌಥಿ
9ವರ್ಷದ ದೇಶೀಯ ಕ್ರಿಕೆಟಿಗಸಾಯಿ ಕಿಶೋರ್
10ವರ್ಷದ ಮಹಿಳಾ ಬ್ಯಾಟರ್ಸ್ಮೃತಿ ಮಂಧಾನ
11ವರ್ಷದ ಮಹಿಳಾ ಬೌಲರ್ದೀಪ್ತಿ ಶರ್ಮಾ
12ಹೆಚ್ಚು ಟಿ20 ಪಂದ್ಯಗಳನ್ನಾಡಿದ ನಾಯಕಿಹರ್ಮನ್‌ಪ್ರೀತ್ ಕೌರ್
13ಐಪಿಎಲ್​ನ ಅತ್ಯುತ್ತಮ ನಾಯಕಶ್ರೇಯಸ್ ಅಯ್ಯರ್
14ಮಹಿಳಾ ಟೆಸ್ಟ್‌ನಲ್ಲಿ ವೇಗದ ದ್ವಿಶತಕ ಬಾರಿಸಿದ ಬ್ಯಾಟರ್ಶಫಾಲಿ ವರ್ಮಾ
15ಶ್ರೇಷ್ಠ ಕ್ರೀಡಾ ಆಡಳಿತಜಯ್ ಶಾ

Leave a Reply

Your email address will not be published. Required fields are marked *