ಚನ್ನರಾಯಪಟ್ಟಣ ತಾಲೂಕಿನ ತಹಸಿಲ್ದಾರ್ ಗೆ,  ವರುಣ್ ಚಕ್ರವರ್ತಿಯವರಿಂದ ಮೈಕ್ರೋ ಫೈನಾನ್ಸ್ಗಳ ವಿರುದ್ಧ ದೂರು.

ಹಾಸನ: ಹಾಸನ ಜಿಲ್ಲೆಯಲ್ಲಿ ಹಾಗೂ ಚನ್ನರಾಯಪಟ್ಟಣ ತಾಲೂಕಿನಲ್ಲಿ ಆಧಾರರಹಿತವಾಗಿ ಕೈಸಾಲ ನೀಡಿ ದುಬಾರಿ ಬಡ್ಡಿ ವಿಧಿಸಿ ದೌರ್ಜನ್ಯವೆಸಗುವ ಮೈಕ್ರೋಫೈನಾನ್ಸ್ ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು ಮತ್ತು ಕಾನೂನುಬಾಹಿರ ನಡೆದ  ಸಾಲಗಳನ್ನು ಖಾಸಗಿ ಕಾನೂನು ಸಾಲಗಳಿಂದ ಪರಿಗಣಿಸಿ ರಾಜ್ಯ ಸರ್ಕಾರ ಕಾನೂನು ತರಬೇಕೆಂದು ಒತ್ತಾಯಿಸಿದರು.ರೈತಾಪಿ ಹಾಗೂ ಸಾರ್ವಜನಿಕರು ಬಡಜನರಿಗೆ ಖಾಸಗಿ ಮೈಕ್ರೋಫೈನಾನ್ಸ್ ಗಳು ಸಾಲ- ಬಡ್ಡಿ ಹೆಸರಿನಲ್ಲಿ ರೈತರ ಕಷ್ಟಗಳನ್ನು ಲೆಕ್ಕಿಸದೆ ಏಜೆನ್ಸಿಗಳ ಮೂಲಕ ದಬ್ಬಾಳಿಕೆ ಮಾಡುತ್ತಿರುವುದರಿಂದ ಎಷ್ಟರಮಟ್ಟಿಗೆ ಸರಿ ಜಪ್ತಿ ವಸೂಲಿ ಎಂದು ಹಣ ಪಡೆಯುತ್ತಾರೆ ಅದನ್ನು ಸಾಲಕ್ಕೆ ಬಳಸಿಕೊಳ್ಳುವುದಿಲ್ಲ

 ಮೈಕ್ರೋ ಫೈನಾನ್ಸ್ ಕಂಪೆನಿಗಳು ಅಮಾಯಕ ಮಹಿಳೆಯರ ವಿರುದ್ಧ ದಬ್ಬಾಳಿಕೆ ನಡೆಸುತ್ತಲಿದೆ ಒಂದು ವೇಳೆ ದಬ್ಬಾಳಿಕೆ ನಡೆಸಿದರೆ ತೀವ್ರತರದ ಹೋರಾಟ ಮಾಡಲಾಗುವುದು ಎಂದು ವರುಣ್ ಚಕ್ರವರ್ತಿ ಎಚ್ಚರಿಕೆ ನೀಡಿದರು. ಈಗಾಗಲೆ ಜಿಲ್ಲೆಯಲ್ಲಿ  ಈ ಕಂಪೆನಿಗಳ ತುಂಬಾ ಇದ್ದಾವೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ

ಈ ವೇಳೆ ಎಐಸಿಸಿ ಮಾನವ ಹಕ್ಕು ಹಾಸನ ಜಿಲ್ಲಾ ಅಧ್ಯಕ್ಷ ವರುಣ್ ಚಕ್ರವರ್ತಿ.ಡಿಎಸ್ಎಸ್ ಸಂಚಾಲಕ ಮನೋಜ್ ನಾಯಕ್. ಡಿ ಎಸ್ ಎಸ್ ಮುಖಂಡರು ಅನೀಫ್ ಹಾಗೂ ಅಜಿತ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *