ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 27 : ಕಣ್ಣು ನಮ್ಮ ದೇಹದ ಪುಟ್ಟ ಅಂಗವಾದರೂ ಬಹು ಮಹತ್ವದ ಅಂಗ. ನಮಗೆ ದೃಷ್ಟಿ ನೀಡುವುದರೊಂದಿಗೆ ಜಗತ್ತಿನ ಸಂಪರ್ಕಕ್ಕೆ ಬಹುಮುಖ್ಯ ಸೇತುವೆಯಾಗಿದೆ ಎಂದು ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕರಾದ ಡಾ ಏ.ಃ.ಈಶ್ವರಪ್ಪ ತಿಳಿಸಿದರು.
ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್(ರಿ) ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಚಿತ್ರದುರ್ಗ ರೋಟರಿ ಕ್ಲಬ್ ಚಿನ್ಮೂಲಾದ್ರಿ, ಚಿತ್ರದುರ್ಗ ಅಮೃತ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಚಿತ್ರದುರ್ಗ ಇವರುಗಳ ಸಹಯೋಗದೊಂದಿಗೆ ಅಮೃತ ಆಯುರ್ವೇದ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ-2024ರ ಸಮಾರಂಭ ಉದ್ಘಾಟನೆ ಹಾಗೂ ನೇತ್ರದಾನದ ಬಗ್ಗೆ ಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಹದ ಎಲ್ಲಾ ಅಂಗಗಳು ಸಮಾನವಾಗಿ ಮಹತ್ವದ್ದಾಗಿದ್ದರೂ, ಕಣ್ಣುಗಳನ್ನು ಹೇಗಾದರೂ ಸ್ವಲ್ಪ ಹೆಚ್ಚು ವಿಶೇಷವೆಂದು ಪರಿಗಣಿಸಬಹುದು.ಇದು ನಮಗೆ ದೃಷ್ಟಿಯನ್ನು ನೀಡುತ್ತದೆ ಮತ್ತು ಪ್ರಪಂಚವು ನೀಡುವ ಸೌಂದರ್ಯವನ್ನು ಆನಂದಿಸಲು ನಮಗೆ ಅವಕಾಶ ನೀಡುತ್ತದೆ.ಆದಾಗ್ಯೂ, ಹಲವಾರು ರೀತಿಯ ದೃಷ್ಟಿ ದೋಷಗಳಿಂದಾಗಿ, ಅನೇಕ ಜನರು ತಮ್ಮ ದೃಷ್ಟಿ ಕಳೆದುಕೊಳ್ಳುತ್ತಾರೆ ಮತ್ತು ಅವರಿಗೆ ಪ್ರಪಂಚವು ಕತ್ತಲೆಯಾಗುತ್ತದೆ. ನೇತ್ರದಾನದ ಸರಳ ಹೆಜ್ಜೆಯ ಮೂಲಕ ನಾವು ಅವರಿಗೆ ಬೆಳಕಿನ ಉಡುಗೊರೆಯನ್ನು ನೀಡಬಹುದು. ಕುರುಡುತನ
ಇಂದು ಜಗತ್ತಿನಾದ್ಯಂತ ಕಳವಳಕ್ಕೆ ಪ್ರಮುಖ ಕಾರಣವಾಗಿದೆ. W ಪ್ರಕಾರ, ಕಣ್ಣಿನ ಪೊರೆ ಮತ್ತು ಗ್ಲುಕೋಮಾದ ನಂತರ,ಕುರುಡುತನವು ಹೆಚ್ಚಾಗಿ ಕಾರ್ನಿಯಲ್ ದುರ್ಬಲತೆಗಳಿಂದ ಉಂಟಾಗುತ್ತದೆ. ಈ ದುರ್ಬಲತೆಗಳಲ್ಲಿ ಹೆಚ್ಚಿನವು ಗುಣಪಡಿಸಬಹುದಾದವು,ವಿಶೇಷವಾಗಿ ನೇತ್ರದಾನದ ಮೂಲಕ, ಇದು ಮರಣದ ನಂತರ ಒಬ್ಬರ ಕಣ್ಣುಗಳನ್ನು ದಾನ ಮಾಡುವುದನ್ನು ಸೂಚಿಸುತ್ತದೆ. ಇತರ ದೇಹದ ಅಂಗಗಳಂತೆ, ಕಣ್ಣಿನ ಕಾರ್ನಿಯಾವನ್ನು ಸಹ ಮರಣದ ನಂತರ ದಾನ ಮಾಡಬಹುದು, ಇದು ಅಂಧರಿಗೆ ದೃಷ್ಟಿ ನೀಡುತ್ತದೆಎಂದರು.
ಇಂದು ಭಾರತದಲ್ಲಿ 25-30 ಲಕ್ಷ ಕಾರ್ನಿಯಾ ಅಂಧರು (ಮಕ್ಕಳು ವೃದ್ಧರಾದಿ) ಮರುದೃಷ್ಟಿ ಹೊಂದಲು ಸಾಕಷ್ಟು ದಾನಿ ನೇತ್ರಗಳಿಲ್ಲದೇ ಹತಾಶರಾಗುತ್ತಿದ್ದಾರೆ. ವರ್ಷಕ್ಕೆ ಒಂದು ಲಕ್ಷದಷ್ಟು ನೇತ್ರದಾನಿಗಳ ಬೇಡಿಕೆಗೆ ಪ್ರತಿಯಾಗಿ ಕೇವಲ ಶೇ.5 ರಷ್ಟು ಪೂರೈಕೆಯಾಗುತ್ತಿದೆ.ಅಲ್ಲದೇ 20,000 ಅಧಿಕ ಹೊಸ ಅಂಧರು ಈ ಗುಂಪಿಗೆ ಸೇರುತ್ತಿದ್ದಾರೆ. ನಮ್ಮ ದೇಶದಲ್ಲಿ ನೇತ್ರದಾನದ ವಿರಳತೆಗೆ ಮುಖ್ಯ ಕಾರಣ ಜನಜಾಗೃತಿಯ ಅಭಾವ. ಇದಕ್ಕೆ ಪೂರಕವಾಗಿ ಅಜ್ಞಾನ, ಮೂಢನಂಬಿಕೆ, ಅಲಕ್ಷ್ಯ ಮತ್ತು ನೇತ್ರ ಸಂಗ್ರಹಣೆಗೆ ಸೌಲಭ್ಯ ಕೆಲವೇ ನಗರಗಳಿಗೆ ಸೀಮಿತವಾಗಿರುವುದು. ಅರಿವಿನ ಕೊರತೆ, ಸಾಮಾಜಿಕ ಅಥವಾ ಧಾರ್ಮಿಕ ಮೀಸಲು ಇತ್ಯಾದಿಗಳಿಂದ, ನೇತ್ರದಾನಕ್ಕೆ ನಮ್ಮ ದೇಶದಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿಲ್ಲ ಎಂದರು.
ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷರಾದ ಮಂಜುನಾಥ್ ಭಾಗ್ವತ್ ಮಾತನಾಡಿ, ವಯಸ್ಸು, ಲಿಂಗ, ರಕ್ತದ ಗುಂಪು ಅಥವಾ ಧರ್ಮವನ್ನು ಲೆಕ್ಕಿಸದೆ ಯಾರಾದರೂ ದಾನಿಯಾಗಬಹುದು ಕಣ್ಣಿನ ಪೊರೆ, ದೀರ್ಘ/ಸಣ್ಣ ದೃಷ್ಟಿ, ಆಪರೇಟೆಡ್ ಕಣ್ಣುಗಳು ಅಥವಾಸಾಮಾನ್ಯ ಕಾಯಿಲೆ ಇರುವ ಯಾರಾದರೂ ನೇತ್ರದಾನ ಮಾಡಬಹುದು. ಹಾನಿಗೊಳಗಾದ ಕಾರ್ನಿಯಾವನ್ನು ಆರೋಗ್ಯಕರ ದಾನಮಾಡಿದ ಮಾನವ ಕಾರ್ನಿಯಾದೊಂದಿಗೆ ಬದಲಾ ಯಿಸುವ ಮೂಲಕ ಕಾರ್ನಿಯಲ್ ಕುರುಡುತನಕ್ಕೆ ಚಿಕಿತ್ಸೆ ನೀಡಬಹುದು. ವ್ಯಕ್ತಿಯ ಮರಣದ ಆರು ಗಂಟೆಗಳ ಒಳಗೆ ಕಾರ್ನಿಯಾವನ್ನು ದೇಹದಿಂದ ತೆಗೆದುಹಾಕುವುದು ಅತ್ಯಗತ್ಯ ಒಬ್ಬ ವ್ಯಕ್ತಿಯಿಂದ ನೇತ್ರದಾನ ಮಾಡುವುದರಿಂದ ಇಬ್ಬರು ಕಾರ್ನಿಯಲ್ ಅಂಧರಿಗೆ ದೃಷ್ಟಿ ಪಡೆಯಬಹುದು ನೇತ್ರಗಳನ್ನು ಮೃತರು ಮರಣಹೊಂದಿದ ಆರು ಗಂಟೆಗಳೊಳಗೆ ತೆಗೆಯಬೇಕು. ಅದನ್ನು ಹತ್ತಿರದ ನೇತ್ರ ಭಂಡಾರಕ್ಕೆ ತಿಳಿಸುವುದಕ್ಕೆ ತಡಮಾಡಬಾರದು. ನಿಮ್ಮ ಕುಟುಂಬದಲ್ಲಿ ಇಲ್ಲವೇ ಸ್ನೇಹಿತರ ವಲಯದಲ್ಲಿ ಯಾರಾದರೂ ಮೃತರಾದ ತಕ್ಷಣ ಕೂಡಲೇ ಈ ಕಾರ್ಯ ನಡೆಯಬೇಕು ಎಂದರು.
ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ನ ಸಂಚಾಲಕರಾದ ಎಸ್.ವೀರೇಶ್ ಮಾತನಾಡಿ, ನೇತ್ರದಾನದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಆಗಸ್ಟ್ 25 ರಿಂದ ಸೆಪ್ಟೆಂಬರ್ 9 ರವರೆಗೆ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಆಚರಿಸಲಾಗುತ್ತದೆ. ನೇತ್ರದಾನ ಮಾಡುವುದು ಮರಣಾನಂತರ ಮತ್ತು ಬಂಧುಗಳ ಅನುಮತಿ ಇದ್ದಾಗ ಮಾತ್ರ. ಜಾತಿಧರ್ಮದ ಕಟ್ಟುಪಾಡುಗಳಿಲ್ಲ. ಸ್ತ್ರೀಪುರುಷರೆನ್ನದೇ ಮೃತ ವ್ಯಕ್ತಿ ದಾನದ ಬಗ್ಗೆ ಅನುಮತಿ ನೀಡಿರಲಿ, ಇಲ್ಲದಿರಲಿ ದಾನಕ್ಕೆ ಅರ್ಹ. ದಾನ ನೀಡುವವರು ಕನ್ನಡದ ಧರಿಸುತ್ತಿರಲಿ,ದೃಷ್ಟಿದೋಷ ಹೊಂದಿರಲಿ, ಸಕ್ಕರೆ ಕಾಯಿಲೆ, ರಕ್ತದ ಏರೋತ್ತಡ, ಅಸ್ತಮಾ, ಕ್ಷಯದಂತಹ ಕಾಯಿಲೆಗಳಿಂದ ನರುಳುತ್ತಿರಲಿ ಅಥವಾಮೋತಿಬಿಂದು ತೆಗೆಸಿಕೊಳ್ಳುವ ಶಸ್ತ್ರಕ್ರಿಯೆಗೆ ಒಳಗಾಗಿರಲಿ, ನೇತ್ರದಾನ ಮಾಡಬಹುದಾಗಿದೆ ಎಂದರು.
ನಮ್ಮೆಲ್ಲರಿಗೂ ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುವ ಅವಕಾಶವಿದೆ. 18 ವರ್ಷಕ್ಕೆ ಮೇಲ್ಪಟ್ಟ ಯಾವುದೇ ವ್ಯಕ್ತಿ ಯಾವುದೇ ನೇತ್ರಭಂಡಾರದಲ್ಲಿ ತಮ್ಮ ಮರಣೋತ್ತರ ನೇತ್ರದಾನದ ಅಭಿಲಾಷೆಯನ್ನು ಲಿಖಿತ ರೂಪದಲ್ಲಿ ನೋಂದಾಯಿಸಬಹುದು. ಎಲ್ಲ ನೇತ್ರಭಂಡಾರಗಳು 24 ಗಂಟೆಗಳೂ ದಾನಿ ನೇತ್ರ ಸಂಗ್ರಹಣಾ ಕಾರ್ಯವನ್ನು ಉಚಿತವಾಗಿ ಮೃತರಿರುವ ಸ್ಥಳಕ್ಕೆ ಧಾವಿಸಿ ಮಾಡುತ್ತವೆ.
ದಾನ ಮಾಡುವ ಮತ್ತು ಪಡೆಯುವ ವ್ಯಕ್ತಿಯ ವಿವರಗಳನ್ನು ಗುಪ್ತವಾಗಿ ಇರಿಸಲಾಗುತ್ತದೆ. ನೇತ್ರದಾನದಿಂದ ಅಂಧರಾದ ಇಬ್ಬರು ವ್ಯಕ್ತಿಗಳಿಗೆ ದೃಷ್ಟಿ ಲಭಿಸುತ್ತದೆ. ಈ ದಾನಕ್ಕಾಗಿ ಯಾವುದೇ ಹಣವನ್ನು ದಾನಿಯ ಕುಟುಂಬಕ್ಕೆ ನೀಡುವುದಿಲ್ಲ ಅಥವಾ ಇದಕ್ಕಾಗಿ ದಾನಿ ಯಾವುದೇ ಹಣ ವೆಚ್ಚ ಮಾಡುವಂತಿಲ್ಲ. ದಾನವಾಗಿ ಬರುವ ನೇತ್ರಗಳು ಮಾರಾಟದ ವಸ್ತುವಲ್ಲ. ಮೃತರ ನೇತ್ರಗಳನ್ನು ಸಂಗ್ರಹಿಸಿದ ನಂತರ ನೇತ್ರಭಂಡಾರಕ್ಕೆ ತೆಗೆದುಕೊಂಡು ಹೋಗಿ ಪರೀಕ್ಷಿಸಿ, ಸಂಸ್ಕರಿಸಿ ನಾಟಿಗೆ ಅಣಿ ಮಾಡಿಕೊಳ್ಳುತ್ತಾರೆ. ಅದಾಗಲೇ ನೇತ್ರ ಭಂಡಾರದಲ್ಲಿ ನೋಂದಣೆ ಮಾಡಿಸಿ ಸಿದ್ಧಪಡಿಸಿದ ಅಂಧರ ಪಟ್ಟಿಯಲ್ಲಿನ ರೋಗಿಗಳನ್ನು ಕೂಡಲೇ ಸಂಪರ್ಕಿಸಿ ಅವರು ಭಂಡಾರಕ್ಕೆ ಬರುವಂತೆ ವ್ಯವಸ್ಥೆ ಮಾಡಲಾಗುತ್ತದೆ ನಂತರ ಅವರಿಗೆ ಶಸ್ತ್ರಚಿಕಿತ್ಸೆಯ ಮೂಲಕ ಕಾರ್ನಿಯ ಜೋಡಿಸಲಾಗುತ್ತದೆ. ದಾನ ನೀಡಿದ ಮತ್ತು ದಾನ ಪಡೆದ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸುವುದಿಲ್ಲ ಪ್ರಪಂಚದ ಮೊಟ್ಟಮೊದಲ ನೇತ್ರ ಭಂಡಾರ ಇಂಗ್ಲೆಂಡಿನಲ್ಲಿ 1945ರಲ್ಲಿ ಆರಂಭವಾಯಿತು. ಶ್ರೀಲಂಕಾದ ಅಂತರ ರಾಷ್ಟ್ರೀಯ ನೇತ್ರಭಂಡಾರ ಪ್ರಪಂಚದಲ್ಲಿಯೇ ಬೃಹತ್ ನೇತ್ರ ಭಂಡಾರ ಹೊಂದಿದ್ದು, ವಿವಿಧ ದೇಶಗಳಿಗೆ ದಾನಿ ನೇತ್ರಗಳನ್ನು ಕಳುಹಿಸಿಕೊಡುತ್ತದೆ ಭಾರತದ ಒಟ್ಟು ಜನಸಂಖ್ಯೆ 121 ಕೋಟಿ ಒಂದು ದಿನಕ್ಕೆ ಸಾಯೋರು 62,389. ಒಂದು ದಿನಕ್ಕೆ ಹುಟ್ಟೋರು 86,853, ಭಾರತದಲ್ಲಿ ಕಣ್ಣು ಇಲ್ಲದವರು 6,82,460 ದಿನ ಸಾಯೋರು ಕಣ್ಣು ದಾನ ಮಾಡಿದರೆ 10 ದಿನದಲ್ಲಿ.ಎಲ್ಲರು ಪ್ರಪಂಚವನ್ನ ನೋಡಬಹುದು ಆಗ ಭಾರತದಲ್ಲಿ ಕಣ್ಣು ಇಲ್ಲದವರು ಯಾರು ಇರೋಲ್ಲ ಎಂದು ತಿಳಿಸಿದರು.
ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ನ ಕಾರ್ಯದರ್ಶಿ ಟಿ.ವೀರಭದ್ರಸ್ವಾಮಿ, ನಿರ್ದೆಶಕರಾದ ಚಂದ್ರಮೋಹನ್, ಅರುಣ್ಕುಮಾರ್,ಗುರುಮೂರ್ತಿ, ಅಮೃತ ಸ್ಕೂಲ್ ಅಫ್ ನರ್ಸಿಂಗ್ನ ಪ್ರಾಶುಂಪಾಲರಾದ ಮೊಹಮ್ಮದ್ ವಜಾಹತ್ ಉಲ್ಲಾ, ನೀಲಕಂಠಯ್ಯಮೆಮೋರಿಯಲ್ ಪಿ ಯು ಕಾಲೇಜಿನ ಪ್ರಾಶುಂಪಾಲರಾದ ದುರುಗಪ್ಪ, ಅಮೃತ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ||ನವೀನ್ ಬಿ ಸಜ್ಜನ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.