ನಗರದ ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಯಲ್ಲಿ ಶ್ರೀಕೃಷ್ಣ ಗೋಕುಲಾಷ್ಟಮಿ ಸಂಭ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪೂರ್ವಪ್ರಾಥಮಿಕ ವಿಭಾಗದ ಪ್ಲೇ ಹೋಮ್, ಎಲ್ ಕೆ ಜಿ ಯುಕೆಜಿ ಯ ಮುದ್ದು ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು, ಶಾಲೆಯ ಎಲ್ಲಾ ಮುದ್ದು ಪುಟಾಣಿಗಳು ಶ್ರೀ ಕೃಷ್ಣ ರಾಧೆಯ ವೇಷಭೂಷಣಗಳನ್ನು ಹಾಕಿಕೊಂಡು ಸಂಭ್ರಮಿಸಿದರು.
![](https://samagrasuddi.co.in/wp-content/uploads/2024/08/image-166-1024x683.png)
![](https://samagrasuddi.co.in/wp-content/uploads/2024/08/image-160-1024x684.png)
ವಿಶೇಷವಾಗಿ ತಾಯಂದಿರು ಯಶೋದೆಯರಾಗಿ ಬಂದು ತಮ್ಮ ಮಕ್ಕಳೊಂದಿಗೆ ನೃತ್ಯಮಾಡಿ ಖುಷಿ ಪಟ್ಟರು. ಹಗ್ಗ ಜಾಗ್ಗಟ ಸ್ಫರ್ಧೆ, ಬೆಣ್ಣೆ ತಯಾರಿಸುವ ಸ್ಫರ್ಧೆ, ಮೊಸರಿನ ಮಡಿಕೆ ಒಡೆಯುವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.
![](https://samagrasuddi.co.in/wp-content/uploads/2024/08/image-161-1024x684.png)
![](https://samagrasuddi.co.in/wp-content/uploads/2024/08/image-162-1024x682.png)
![](https://samagrasuddi.co.in/wp-content/uploads/2024/08/image-163-1024x682.png)
![](https://samagrasuddi.co.in/wp-content/uploads/2024/08/image-164-1024x684.png)
![](https://samagrasuddi.co.in/wp-content/uploads/2024/08/image-165-1024x682.png)
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಭಾಸ್ಕರ್ ಎಸ್, ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ, ಶಾಲಾ ಆಡಳಿತ ಮಂಡಳಿಯ ಸುನಿತ ಭಾಸ್ಕರ್, ಶಿವಮ್ಮ ಸೋಮಶೇಖರ್, ಪ್ರಾಚಾರ್ಯರಾದ ಸಿ ಡಿ ಸಂಪತ್ ಕುಮಾರ್, ಮುಖ್ಯೋಪಾಧ್ಯಾಯರಾದ ವೆಂಕಟೇಶ್ , ಹೆಡ್ ಕೋರ್ಡಿನೇಟರ್ ಬಸವರಾಜ್.ಕೆ ಮತ್ತು ಶಿಕ್ಷಕ ವರ್ಗವದವರು, ಶಿಕ್ಷಕೇತರ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.