ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಸೆ. 05: ನಮ್ಮ ಕಣ್ಣುಗಳನ್ನು ದಾನ ಮಾಡುವುದು. ನಿಸ್ವಾರ್ಥ ಸೇವೆಯಾಗಿದೆ. ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಅಂಧರ ಬಾಳಲ್ಲಿ ಸಹಾಯ ಮಾಡಲು ಸಾವಿನ ನಂತರ ನಮ್ಮ ಅಮೂಲ್ಯವಾದ ಕಣ್ಣುಗಳನ್ನು ದಾನ ಮಾಡುವುದೇ ನೇತ್ರ ದಾನವಾಗಿದೆ. ನೇತ್ರದಾನ ಮಾಡುವುದರಿಂದ ಸಾವಿನ ನಂತರವೂ ಜಗತ್ತನ್ನು ನೋಡುವ ಸುಂದರ ಅವಕಾಶವಿದೆ ಎಂದು ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನೇತ್ರ ತಜ್ಞರಾದ ಡಾ || ಅನುಶ್ರೀ ತಿಳಿಸಿದರು.

ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್(ರಿ)ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮತ್ತು ಜಿಲ್ಲಾ ಪೊಲೀಸ್ ತರಬೇತಿ ಶಾಲೆ. ಐಮಂಗಲ ಇವರುಗಳ ಸಹಯೋಗದಲ್ಲಿ 39 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ 2024ರ ಅಂಗವಾಗಿ ಐಮಂಗಲದ ಜಿಲ್ಲಾ ಪೊಲೀಸ್ ತರಬೇತಿ ಶಾಲೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೇತ್ರದಾನದ ಬಗ್ಗೆ ಪೊಲೀಸ್ ತರಬೇತಿಗಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾವಿನ ನಂತರವೂ ಜಗತ್ತನ್ನು ನೋಡುವ ಅವಕಾಶ ಕಲ್ಪಿಸುವ ನೇತ್ರದಾನ ಅತ್ಯಂತ ಶ್ರೇಷ್ಠವಾದುದು. ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ವ್ಯಕ್ತಿಯ ಸಾವಿನ ಜೊತೆಗೆ ಮಣ್ಣಾಗುವ ಕಣ್ಣುಗಳನ್ನು ದಾನಮಾಡಿ ಅಂಧರಿಗೆ ನೆರವಾಗಬೇಕಿದೆ. ನೇತ್ರದಾನ ಮಾಡುವುದರಿಂದ ಅಂಧರ ಬಾಳಿಗೆ ಬೆಳಕು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಆಚರಿಸಲಾಗುತ್ತದೆ. ಮರಣದ ನಂತರ ನೇತ್ರದಾನ ಮಾಡುವುದರ ಮೂಲಕ ಜೀವಂತವಾಗಿರೋಣ ಎಂದರು.
ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕಿನ ಸಂಚಾಲಕರಾದ ರೋಟರಿಯನ್ ವೀರೇಶ್ ಮಾತನಾಡಿ,” ನಿಸ್ವಾರ್ಥಿಯಾಗಿ ಕಣ್ಣುಗಳನ್ನು ದಾನ ಮಾಡುವತ್ತ ಎಲ್ಲರೂ ಗಮನ ಹರಿಸಬೇಕು. ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಿಸಲಾಗುತ್ತದೆ. ಮರಣದ ನಂತರ ನೇತ್ರದಾನ ಮಾಡುವುದರ ಮೂಲಕ ಜೀವಂತವಾಗಿರೋಣ “,“ಸಂಸ್ಥೆಯ ವತಿಯಿಂದ 1,800 ಅಂಧ ವ್ಯಕ್ತಿಗಳಿಗೆ ದೃಷ್ಟಿ ನೀಡಲಾಗಿದೆ. ನಿಮ್ಮ ಸಂಬಂಧಿಕರು ಯಾರಾದರೂ ಮೃತಪಟ್ಟರೆ ನಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ತಕ್ಷಣವೇ ಕಣ್ಣುಗಳನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ತಲುಪಿಸಲಾಗುತ್ತದೆ. ನಾವೆಲ್ಲರೂ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸೋಣ” ಎಂದು ಹೇಳಿದರು.
ದೇಶದಲ್ಲಿ ಇನ್ನೂ ನೇತ್ರದಾನದ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲ. ನೇತ್ರದಾನ ಸಾರ್ವಕಾಲಿಕ ಶ್ರೇಷ್ಠದಾನ. ಯಾವುದೇ ಆರೋಗ್ಯವಂತ ವ್ಯಕ್ತಿ ನೇತ್ರದಾನ ಮಾಡಬಹುದು. ನಾವೆಲ್ಲರೂ ಜೀವಂತವಾಗಿರುವಾಗ ನೇತ್ರದಾನ ಮಾಡಲು ತನ್ನನ್ನು ನೋಂದಾಯಿಸಿಕೊಳ್ಳಬಹುದು ನೇತ್ರ ದಾನಿಯಾಗಲು ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಐಮಂಗಲದ ಜಿಲ್ಲಾ ಪೊಲೀಸ್ ತರಬೇತಿ ಶಾಲೆಯ S.P.ಮತ್ತು ಪ್ರಾಶುಂಪಾಲರಾದ ಪಿ.ಪಾಪಣ್ಣ ಮಾತನಾಡಿ, ನೇತ್ರದಾನ ಮಹಾದಾನ ವ್ಯರ್ಥ ಮಾಡದೇ ಮೃತ ವ್ಯಕ್ತಿಯ ಕಣ್ಣುಗಳನ್ನು ದಾನ ಮಾಡಿ ಇಬ್ಬರ ಅಂಧರ ಬದುಕಿಗೆ ದೃಷ್ಟಿ ನೀಡೋಣ ನೇತ್ರದಾನ ಒಂದು ಮಹಾ ದಾನವಾಗಿದೆ. ಸತ್ತ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸಿ ಅಥವಾ ಅಗ್ನಿ ಸ್ಪರ್ಶ ಮಾಡಿ ಸುಡುವುದು ಬೇಡ ದಾನ ಮಾಡುವುದರಿಂದ ಇನನೂಬ್ಬರಿಗೆ ನೆರವಾಗುತ್ತದೆ. ಕರ್ತವ್ಯ ಸಮಯದಲ್ಲಿ ಎಲ್ಲಿಯಾದರೂ ಅಪಘಾತವಾದಾಗ ಅವರ ಸಂಬಂಧಿಗಳು ಇದ್ದರೆ ಅವರನ್ನು ಕೇಳಿ ಕಣ್ಣುಗಳನ್ನು ದಾನ ಮಾಡಿಸುವ ಕಾರ್ಯವನ್ನು ಮಾಡಿ ಇದರಿಂದ ಪುಣ್ಯ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯೋಗ ಗುರುಗಳಾದ ಚಿನ್ಮಯಾನಂದರವರು ಆರೋಗ್ಯ ಮತ್ತು ಯೋಗದ ಬಗ್ಗೆ ತಿಳಿಸಿಕೊಟ್ಟರು, 39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಅಂಗವಾಗಿ ನೇತ್ರದಾನ ಕುರಿತ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಇದೆ ಸಂದರ್ಭದಲ್ಲಿ ಹಾಜರಿದ್ದವರ ನೇತ್ರದ ಬಗ್ಗೆ ಇದ್ದ ಅನುಮಾನಕ್ಕೆ ಉತ್ತರವನ್ನು ನೀಡಲಾಯಿತು.
ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ನ ಕಾರ್ಯದರ್ಶಿ ಟಿ.ವೀರಭದ್ರಸ್ವಾಮಿ, ಸಂಸ್ಥೆಯ ನಿರ್ದೇಶಕರಾದ ಕನಕರಾಜು, ಸುರೇಶ್, ಶಿವಕುಮಾರ್, ಪುಷ್ಪಲತಾ,ನಾಗರಾಜ್,ಚಿತ್ರದುರ್ಗ ಜಿಲ್ಲಾ ಪೊಲೀಸ್ ತರಬೇತಿ ಶಾಲೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
Views: 0