ರಾಷ್ಟ್ರೀಯ ನಾಟಕೋತ್ಸವಕ್ಕೆ ಭದ್ರಾವತಿ ತಾಲ್ಲೂಕಿನಿಂದ 51 ಕ್ವಿಂಟಾಲ್ ಅಕ್ಕಿ ಸಮರ್ಪಣೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಸಾಣೇಹಳ್ಳಿ ಸೆಪ್ಟಂಬರ್ 15 : ನವೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯಲಿರುವ ರಾಷ್ಟ್ರಿಯ ನಾಟಕೋತ್ಸವಕ್ಕೆ ಭದ್ರಾವತಿ ತಾಲ್ಲೂಕಿನ ತರಳಬಾಳು ಯುವವೇದಿ ಮತ್ತು ತಾಲ್ಲೂಕಿನ ಸಾಧು ವೀರಶೈವ ಸಮಾಜದವರು 51ಕ್ವಿಂಟಲ್ ಅಕ್ಕಿಯನ್ನು ಸಾಣೇಹಳ್ಳಿ ಶ್ರೀಮಠಕ್ಕೆ ಸಮರ್ಪಿಸಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು.


ಪೂಜ್ಯರು ಭಕ್ತಾದಿಗಳು ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವುದು ಸಂತೋಷ. ಎಲ್ಲರೂ ಧರ್ಮದ ದಾರಿಯಲ್ಲಿ
ನಡೆದು ಆದರ್ಶ ವ್ಯಕ್ತಿತ್ವ ರೂಢಿಸಿಕೊಳ್ಳಲು ಸಾಧ್ಯವಾಗುವುದು. ವ್ಯಕ್ತಿ ಪರಿಶುದ್ದವಾಗಿದ್ದರೆ ಸಮಾಜವೂ ಶುದ್ಧವಾಗುವುದು. ಈ ನೆಲೆಯಲ್ಲಿ
ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಬೇಕು. ಆಗ ಮನ, ಮನೆ, ಸಮಾಜದಲ್ಲಿ ಸುಧಾರಣೆಯಾಗುವುದು. ನೀವು ಕಲೆ, ಸಾಹಿತ್ಯ,
ಸಂಗೀತದ ಒಲವು ಬೆಳಸಿಕೊಂಡು ಸುಸಂಸ್ಕೃತ ಜೀವನ ನಡೆಸುವಂತಾಗಲಿ ಎಂದು ಹಾರೈಸಿದರು. ಕಲೆಗೆ ನೆರವು ನೀಡುವ ನಿಮ್ಮ
ಸದ್ಭಾವನೆಗಳು ಹೀಗೇ ಮುಂದುವರಿದು ಇತರರಿಗೂ ಆದರ್ಶವಾಗಲಿ ಎಂದರು.
ಈ ಸಂದರ್ಭದಲ್ಲಿ ಭದ್ರಾವತಿ ತಾಲ್ಲೂಕು ಸಾಧುವೀರಶೈವ ಸಮಾಜದ ಅಧ್ಯಕ್ಷ ಕೆ ಜಿ ರವಿಕುಮಾರ, ಕಾರ್ಯದರ್ಶಿ ಭರಣೇಶ್, ಸಹ
ಕಾರ್ಯದರ್ಶಿ ಬಿ ಎಸ್ ಪರಮೇಶ್ವರಪ್ಪ, ಖಜಾಂಚಿ ನವೀನ್ ಸದಸ್ಯರಾದ ಮಲ್ಲಿಕಾರ್ಜುನ್ ಹೆಚ್ ಈ, ವಸಂತಕುಮಾರ್, ನರೇಂದ್ರ,
ನಾಗರಾಜ, ದಿನೇಶ್, ಕೆ ಹೆಚ್ ರವಿಕುಮಾರ ಕೊಮಾರನಹಳ್ಳಿ, ಶಿವಕುಮಾರ್ ಕೊಮಾರನಹಳ್ಳಿ, ರಾಜಕುಮಾರ, ಸತೀಶ್‌ಗೌಡ,
ರುದ್ರಪ್ಪ, ಹೆಚ್ ಬಿ ಕಿರಣ್, ಹೆಚ್ ಪಿ ನಟರಾಜ್, ಕೆ ಜಿ ಮಹೇಶ್ವರಪ್ಪ, ಸಂಜೀವ್‌ಕುಮಾರ್ ಹೆಚ್ ಎಸ್, ತರಳಬಾಳು ಯುವ
ವೇದಿಕೆಯ ಅಧ್ಯಕ್ಷ ಸಂಕೇತ ಎ ವಿ, ಸದಸ್ಯರಾದ ವಸಂತ್, ವೀರೇಶ್ ಪಾಟೀಲ್, ಆಕಾಶ್, ವೈ ನಾಗೇಶ್, ರಾಘವೇಂದ್ರ, ಡಿ ಎಸ್
ಮಂಜುನಾಥ್, ಮಲ್ಲಿಕಾರ್ಜುನ್ ಹೆಚ್ ಎನ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *