ರಣಜಿ ಟ್ರೋಫಿಗೆ ರಾಜ್ಯದ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟ; ಕೆ ಎಲ್​ ರಾಹುಲ್​, ಸಮಿತ್​ ದ್ರಾವಿಡ್ ಸೇರಿ ಯಾರಿಗೆಲ್ಲಾ ಸ್ಥಾನ? 

ರಣಜಿ ಟ್ರೋಫಿಗೆ ರಾಜ್ಯ ತಂಡದ ಸಂಭಾವ್ಯ ಆಟಗಾರರ ಪಟ್ಟಿಯನ್ನ ಕರ್ನಾಟಕ ಕ್ರಿಕೆಟ್ ಸಂಸ್ಥೆ ಪ್ರಕಟಿಸಿದ್ದು, ಕೆ.ಎಲ್. ರಾಹುಲ್ ಮತ್ತು ಮತ್ತು ಮನೀಶ್ ಪಾಂಡೆ ನಿರೀಕ್ಷೆಯಂತೆ ಸ್ಥಾನ ಪಡೆದಿದ್ದಾರೆ.

ಬೆಂಗಳೂರು: 2024-25ರ ರಣಜಿ ಟ್ರೋಫಿಗೆ ರಾಜ್ಯ ತಂಡದ ಸಂಭಾವ್ಯ ಆಟಗಾರರ ಪಟ್ಟಿಯನ್ನ ಕರ್ನಾಟಕ ಕ್ರಿಕೆಟ್ ಸಂಸ್ಥೆ (KSCA) ಪ್ರಕಟಿಸಿದೆ. 35 ಜನ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ನಿರೀಕ್ಷೆಯಂತೆ ಅನುಭವಿಗಳಾದ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವೇಳೆಗೆ ಕೇರಳ ತಂಡ ಸೇರಿದ್ದ ಅನುಭವಿ ಆಲ್​​ರೌಂಡರ್ ಶ್ರೇಯಸ್ ಗೋಪಾಲ್ ರಾಜ್ಯ ತಂಡಕ್ಕೆ ಮರಳಿದ್ದಾರೆ.

ಉಳಿದಂತೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮಹಾರಾಜ ಟ್ರೋಫಿಯಲ್ಲಿ ಗಮನ ಸೆಳೆದಿದ್ದ ಆಲ್​ರೌಂಡರ್ ಮನೋಜ್ ಭಾಂಡಗೆ ಹಾಗೂ ಅನುಭವಿ ಸ್ಪಿನ್ನರ್ ಕೆ.ಗೌತಮ್ ಅವರನ್ನ ಸಂಭಾವ್ಯ ಆಟಗಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಅಕ್ಟೋಬರ್ 11ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಗ್ರೂಪ್‌ ಸಿನಲ್ಲಿ ಕರ್ನಾಟಕ ತಂಡವಿದೆ.

ರಣಜಿ ಟ್ರೋಫಿ: ರಾಜ್ಯದ ತಂಡದ ಸಂಭಾವ್ಯ ಆಟಗಾರರು
ಮಯಾಂಕ್ ಅಗರ್ವಾಲ್, ರಾಹುಲ್ ಕೆ.ಎಲ್, ಪ್ರಸಿದ್ಧ್ ಕೃಷ್ಣ, ವಿದ್ವತ್ ಕಾವೇರಪ್ಪ, ಮನೀಶ್ ಪಾಂಡೆ, ವೈಶಾಕ್.ವಿ, ನಿಕಿನ್ ಜೋಸ್.ಎಸ್.ಜೆ, ಸ್ಮರಣ್.ಆರ್, ಕಿಶನ್ ಎಸ್ ಬೆದರೆ, ಅನೀಶ್.ಕೆ.ವಿ, ಶರತ್ ಶ್ರೀನಿವಾಸ್ (ವಿ.ಕೀ), ಸುಜಯ್ ಸತೇರಿ (ವಿ‌.ಕೀ), ಕೃತಿಕ್ ಕೃಷ್ಣ (ವಿ.ಕೀ), ಕೌಶಿಕ್.ವಿ, ವಿದ್ಯಾಧರ್ ಪಾಟೀಲ್, ಅಭಿಲಾಷ್ ಶೆಟ್ಟಿ, ವೆಂಕಟೇಶ್.ಎಂ, ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್, ಶುಭಾಂಗ್ ಹೆಗ್ಡೆ, ರೋಹಿತ್ ಕುಮಾರ್.ಎ.ಸಿ, ಧೀರಜ್ ಜೆ ಗೌಡ, ಮೊಹ್ಸಿನ್ ಖಾನ್, ಶಶಿಕುಮಾರ್ ಕೆ, ಅಧೋಕ್ಷ್ ಹೆಗ್ಡೆ, ಶಿಖರ್ ಶೆಟ್ಟಿ, ಯಶೋವರ್ಧನ್ ಪರಂತಾಪ್, ವಿಶಾಲ್ ಓನತ್, ಜಾಸ್ಪರ್.ಇ.ಜೆ, ಸಮಿತ್ ದ್ರಾವಿಡ್, ಕಾರ್ತಿಕೇಯ.ಕೆ.ಪಿ, ಸಮರ್ಥ್ ನಾಗರಾಜ್, ಲವನಿತ್ ಸಿಸೋಡಿಯಾ (ವಿ.ಕೀ), ಚೇತನ್.ಎಲ್‌.ಆರ್, ಅಭಿನವ್ ಮನೋಹರ್.

Source : https://www.etvbharat.com/kn/!sports/probable-players-of-ranaji-trophy-2024-25-list-is-here-karnataka-news-kas24091703119

Leave a Reply

Your email address will not be published. Required fields are marked *