
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಸೆ. 17 : ಜಮೀನು ಪೋಡಿ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಿರಿಯೂರು ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ರೈತನೊಬ್ಬನ ಜಮೀನು ಪೋಡಿ ಮಾಡಿಕೊಡಲು ಕಂದಾಯ ಅಧಿಕಾರಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬೆಲೆಗೆ
ಬಿದ್ದಿದ್ದು ಕೋಡಿಹಳ್ಳಿ ಗ್ರಾಮದ ಕಂದಾಯ ಲೆಕ್ಕಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ನಾಗಪ್ಪ ಲಮಾಣಿ ಅವರು ಹಲಗಲದ್ದಿ ಗ್ರಾಮದ
ತಿಪ್ಪೇಸ್ವಾಮಿ ಅವರ ಜಮೀನು ಪೋಡಿ ಮಾಡಿಕೊಡಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು 9 ಸಾವಿರ ಲಂಚ ಸ್ವೀಕರಿಸುವಾಗ
ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಿರಿಯೂರು ತಾಲೂಕು ಕಛೇರಿಯಲ್ಲಿ ಈ ಘಟನೆ ನಡೆದಿದೆ. ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ, ಎಸ್ಪಿ ವಾಸುದೇವ, ಇನ್ಸೆಪೆಕ್ಟರ್
ಶಿಲ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ತನಿಖೆ ಮುಂದುವರೆಸಿದ್ದಾರೆ.