
ಚಿತ್ರದುರ್ಗ: ಸೆ.22 ಭಾವಸಾರ ಕ್ಷತ್ರಿಯ ಸಮಾಜ, ಭಾವಸಾರ ಮಹಿಳಾ ಮಂಡಳಿ ಚಿತ್ರದುರ್ಗ ಸಂಯುಕ್ತಾವಾಗಿ ಇತ್ತೀಚೆಗೆ ನಗರದ ಅಯ್ಯಣ್ಣನ ಪೇಟೆಯ ಶ್ರೀ ಅಂಬಾಭವಾನಿ ದೇವಸ್ಥಾನದ ಭಾವಸಾರ ಸಮುದಾಯ ಭವನದಲ್ಲಿ ಶ್ರೀ ಶಂಕರ ತತ್ವ ಪ್ರಸಾರ ಅಭಿಯಾನದಡಿಯಲ್ಲಿ ಸಾಮೂಹಿಕ ಕಲ್ಯಾಣವೃಷ್ಟಿಸ್ತವ ಪಾರಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಚಿತ್ರದುರ್ಗ ನಗರದ ವಿವಿಧ ಸಮಾಜದ ಮಹಿಳೆಯರು ಶ್ರೀಲಲಿತಸಹಸ್ರನಾಮ, ಗುರುದೇವತಾಭಜನೆ ಕಲ್ಯಾಣವೃಷ್ಟಿಸ್ತವ ಸೇರಿದಂತೆ ವಿವಿಧ ಸ್ತೋತ್ರಗಳ ಪಾರಾಯಣದ ಜೊತೆಗೆ ದೇವರನಾಮಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಭಾವಸಾರ ದೈವಮಂಡಳಿಯ ಅಧ್ಯಕ್ಷ ಆರ್.ಎಂ. ಶ್ಯಾಮ್, ಭಾವಸಾರ ಮಹಿಳಾ ಮಂಡಳಿ ಅಧ್ಯಕ್ಷೆ ಮಮತಬೇದ್ರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.