
ಚಿತ್ರದುರ್ಗ ಸೆ. 24 ಸಹಕಾರ ಸಂಘದಲ್ಲಿ ಕೆಲಸ ಮಾಡುವುದು ಲಾಭದಾಯಕ ಹುದ್ದೆಯಲ್ಲ, ಇಲ್ಲಿ ಸೇವಾ ಮನೋಭಾವನೆಯಿಂದ ಕೆಲಸ ಮಾಡುವವರಿ ಅಗತ್ಯ ಇದೆ ಜವಾಬ್ದಾರಿಯಿಂದ ಕೆಲಸವನ್ನು ಮಾಡುವುದರ ಮೂಲಕ ಸಹಕಾರ ಸಂಘವನ್ನು ಮುನ್ನಡೆಸಬೇಕಿದೆ ಎಂದು ಡಿ.ಸಿ.ಸಿ. ಬ್ಯಾಂಕ್ನಿ ದೇಶಕರಾದ ಮಾಧುರಿ ಗಿರೀಶ್ ತಿಳಿಸಿದರು.
ಹೊಳಲ್ಕರೆ ತಾಲ್ಲೂಕಿನ ಶಿವಗಂಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ
ಮಾತನಾಡಿದ ಅವರು, ಇಲ್ಲಿ ಕೆಲಸ ಮಾಡುವವರು ಕೈ ಬಾಯಿ ಶುದ್ದವಾಗಿರಬೇಕಿದೆ ಆಗ ಮಾತ್ರ ಸಹಕಾರ ಸಂಘ ಬೆಳೆಯಲು
ಸಾಧ್ಯವಿದೆ. ಸಹಕಾರ ಸಂಘದ ಸದಸ್ಯನಾಗಿ ನನ್ನ ಜೀವನ ಇರುವವರೆಗೂ ಯಾವ ರೈತರಿಂದಲೂ ಎನನ್ನು ಸಹಾ ಆಪೇಕ್ಷೆ ಮಾಡದೆ
ಪ್ರಮಾಣಿಕವಾಗಿ ಸೇವೆಯನ್ನು ಮಾಡುತ್ತೇನೆ. ಇಲ್ಲಿ ಜಾತಿ ತಾರತಮ್ಯವಾಗಲೀ ಬೇರೆ ಬೇಧಭಾವ ಮಾಡದೇ ಎಲ್ಲರನ್ನು ಒಂದಾಗಿ
ನೋಡುವುದರ ಮೂಲಕ ಸಂಘವನ್ನು ಪ್ರಗತಿಯತ್ತ ಕೊಂಡ್ಯೂಯುವ ಕಾರ್ಯವನ್ನು ಮಾಡಲಾಗುವುದೆಂದು ತಿಳಿಸಿದರು.
ಸಹಕಾರ ಸಂಘದಲ್ಲಿ ಇರುವಂತ ಆಡಳಿತ ಮಂಡಳಿಯವರು ತಮ್ಮ ಸಂಘದ ಬಗ್ಗೆ ಕಾಳಜಿಯನ್ನು ವಹಿಸಿ ಸಾಮಾನ್ಯ ಸಭೆ, ಸಾಲ
ನೀಡುವುದು ಮರುಪಾವತಿ ಮಾಡಿಸುವುದು, ವಹಿವಾಟನ್ನು ನಡೆಸಬೇಕಿದೆ ಆಗ ಮಾತ್ರ ಡಿಸಿಸಿ ಬ್ಯಾಂಕ್‍ನಲ್ಲಿ ಮತದಾನಕ್ಕೆ
ಅರ್ಹರಾಗುತ್ತಾರೆ. ಈ ಚುನಾವಣೆಯಲ್ಲಿ ಜಿಲ್ಲೆಯಲ್ಲಿನ ಸುಮಾರು 200 ಸಂಘಗಳು ಸರಿಯಾದ ರೀತಿಯಲ್ಲಿ ವಹಿವಾಟನ್ನು ನಡೆಸದೆ
ಇದ್ದಿದ್ದರಿಂದ ಅವುಗಳು ಚುನಾವಣೆಯಲ್ಲಿ ಮತದಾನದಿಂದ ಅನರ್ಹವಾಗಿವೆ. ಸಂಘಗಳ ಬಗ್ಗೆ ಉಸ್ತುವಾರಿಯನ್ನು ಮಾಡುವುದರ ಮೂಲಕ
ಸಂಘಗಳು ಸರಿಯಾದ ರೀತಿಯಲ್ಲಿ ನಡೆಯುವಂತೆ ಮುಂದಿನ ದಿನಮಾನದಲ್ಲಿ ಅದರ ಬಗ್ಗೆ ಕಾಳಜಿಯನ್ನು ವಹಿಸಲಾಗುವುದು. ಮನೆಯಲ್ಲಿ
ಹಿರಿಯರು ಮರಣದ ನಂತರ ಅವರ ಹೆಸರಿನಲ್ಲಿನ ಭೂಮಿಯನ್ನು ವರ್ಗಾವಣೆಯನ್ನು ಮಾಡಿಸಿಕೊಳ್ಳಿ ಸಾಲವನ್ನು ಸರಿಯಾದ ಸಮಯಕ್ಕೆ
ಮರುಪಾವತಿ ಮಾಡಿ ಸಾಲ ಮನ್ನಾ ಆಗುತ್ತದೆ ಎಂದು ಕಾಯಬೇಡಿ, ಅದನ್ನು ತಲೆಯಿಂದ ತೆಗೆದು ಹಾಕಿ, ಸಾಲ ಕಟ್ಟುವ ಸಮಯ ಮುಗಿದ
ಮೇಲೆ ಏನು ಮಾಡಲು ಆಗುವುದಿಲ್ಲ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಇದಕ್ಕೆ ಅವಕಾಶವನ್ನು ನೀಡಬೇಡಿ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿನ ಡಿಸಿಸಿ ಬ್ಯಾಂಕ್ ಉತ್ತಮವಾದ ಕೆಲಸವನ್ನು ಮಾಡುತ್ತಿದೆ ಸಾಲವನ್ನು ಹೆಚ್ಚಿನ ರೀತಿಯಲ್ಲಿ ನೀಡುವುದರ ಮೂಲಕ
ರೈತರಿಗೆ ಆರ್ಥಿಕವಾಗಿ ಸಹಾಯವನ್ನು ಮಾಡಲಾಗಿದೆ ಬೇರೆ ಜಿಲ್ಲೆಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚಿಗೆ ಸಾಲವನ್ನು ನೀಡುವುದಿಲ್ಲ, ಆದರೆ ನಮ್ಮಲ್ಲಿ
ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ನೀಡಲಾಗುತ್ತಿದೆ ಇದರ ಸದುಪಯೋಗವಾಗಬೇಕಿದೆ. ನಾನು ಡಿಸಿಸಿ ಬ್ಯಾಂಕ್‍ಗೆ ನಿರ್ದೆಶಕನಾಗಲು
ಸಂಘದ ಸದಸ್ಯರು ಸಹಕಾರವನ್ನು ನೀಡಿದ್ದಾರೆ. ನಾನು ಮೂರು ಬಾರಿ ನಿರ್ದೇಶಕನಾಗಿದ್ದೇನೆ ಇದರಲ್ಲಿ ಒಂದು ಬಾರಿ ಮಾತ್ರ
ಚುನಾವಣೆಯಾಯಿತು ಎರಡು ಬಾರಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಇದಕ್ಕೆ ನಾನು ಆಬಾರಿಯಾಗಿದ್ದೇನೆ, ಜಿಲ್ಲೆಯಲ್ಲಿ
ಮನೆ ನಿರ್ಮಾಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸಾಲವನ್ನು ನೀಡಿಲ್ಲ ಆದರೆ ನಮ್ಮ ತಾಲ್ಲೂಕಿನಲ್ಲಿ ಎಲ್ಲರಿಗೂ ಸಹಾ ಮನೆ ನಿರ್ಮಾಣಕ್ಕೆ 5 ಲಕ್ಷ
ರೂ.ಗಳವರೆವಿಗೂ ಸಾಲವನ್ನು ಕೊಡಿಸಲಾಗಿದೆ. ತಾಲ್ಲೂಕಿನ ಸೋಸೈಟಿಗಳಲ್ಲಿ ಇರುವ ಅಧಾಯದಲ್ಲಿ ಶೇ.20 ರಷ್ಟು ಹಣವನ್ನು ಮದುವೆ,
ಶಿಕ್ಷಣ ಹಾಗೂ ಅನಾರೋಗ್ಯಕ್ಕೆ ಮೀಸಲಿಡಲು ಸೂಚನೆ ನೀಡಲಾಗಿದೆ ಎಂದರು.
ಶಿವಗಂಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷರಾದ ಎನ್ ಮೌನೇಶ್ ಉಪಾದ್ಯಕ್ಷರಾದ ಪುಷ್ಷವತಿ, ಮುಖ್ಯ
ಕಾರ್ಯನಿರ್ವಣಾಧಿಕಾರಿ ಜಿ.ಸಿ. ನಾಗರಾಜ್ ನಿರ್ದೇಶಕರುಗಳಾದ ಯು.ಎಂ, ವೀರಭದ್ರಪ್ಪ ಸತೀಶ್ ನಾಡಿಗ್ ಸುರೇಶ್ ಡಿ,
ಮಂಜುನಾಥ್ ಸುಜಾತ, ತಿಪ್ಪೆಸ್ವಾಮಿ ಎಂ ಬಿ, ರಾಜಪ್ಪ, ಸಂಘದ ಮಾಜಿ ಅದ್ಯಕ್ಷರುಗಳಾದ ದಗ್ಗೆ ಶಿವಪ್ರಕಾಶ್, ಮಂಜಣ್ಣ ,ಯೋಗೆಶ್,
ಸದಸ್ಯರುಗಳಾದ ಮಹೇಶಣ್ಣ ಜಿ.ಆರ್ ರಾಜಪ್ಪ ಎಚ್ ಕುಬೇರಪ್ಪ ದಗ್ಗೆ ದೆವೇಂದ್ರಪ್ಪ, ಉಮೇಶ್ ಈಚಗಟ್ಟ , ಸೇರಿದಂತೆ ಸರ್ವ ಸದಸ್ಯರು
ಉಪಸ್ಥಿತರಿದ್ದರು
ಇದೆ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್‍ಗೆ ನಿದೇಶಕರಾಗಿ ಅವಿರೋಧವಾಗಿ ಅಯ್ಕೆಯಾದ ಮಾಧುರಿ ಗಿರೀಶ್ ರವರನ್ನು ಸನ್ಮಾನಿಸಿ
ಗೌರವಿಸಲಾಯಿತು