ತಿರುಪತಿ ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿ ನಮ್ಮ ಶ್ರದ್ದೆಗೆ ಮತ್ತು ಭಕ್ತಿಗೆ ನೋವುಂಟು ಮಾಡಿರುವ ವಿಷಯ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುಗ್ ಸೆ. 26 ಪವಿತ್ರವಾದ ಶ್ರದ್ಧಾಕೇಂದ್ರಗಳಾಗಿರುವ ಹಿಂದೂ ಧಾರ್ಮಿಕ ಮತ್ತು ತೀರ್ಥಕ್ಷೇತ್ರಗಳನ್ನು ಸರ್ಕಾರದ ದಬ್ಬಾಳಿಕೆ/ ನಿಯಂತ್ರಣದಿಂದ ಮುಕ್ತಗೊಳಿಸಿ ಭಕ್ತ ನಿರ್ವಹಣೆಗೆ ನೀಡುವಂತೆ ವಿಶ್ವ ಹಿಂದೂ ಪರಿಷತ್ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರನ್ನು ಒತ್ತಾಯಿಸಿದೆ.

ತಿರುಪತಿ ಪ್ರಸಾದದಲ್ಲಿ ಮೀನಿನ ಎಣ್ಣೆ ಬೆರೆಸಿ ನಮ್ಮ ಶ್ರದ್ದೆಗೆ ಮತ್ತು ಭಕ್ತಿಗೆ ನೋವುಂಟು ಮಾಡಿರುವ ವಿಷಯ ಮತ್ತು ಎಲ್ಲಾ ಮಂದಿರಗಳನ್ನು ಭಕ್ತರೇ ನಡೆಸಲು ಸರ್ಕಾರವನ್ನು ಒತ್ತಾಯಿಸಲು ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‍ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯ್‍ದರ್ಶಿ ಜಗನ್ನಾಥ್ ಶಾಸ್ತ್ರಿ ಮಾತನಾಡಿ, ನಮ್ಮ ರಾಜ್ಯ ಮತ್ತು ಭಾರತದಾದ್ಯಂತ ಕೋಟ್ಯಂತರ ಹಿಂದೂಗಳಿಗೆ ತಿರುಮಲ ತಿರುಪತಿ ದೇವಸ್ಥಾನ, ಅಲ್ಲಿನ ಶ್ರೀವೆಂಕಟೇಶ್ವರ ಸ್ವಾಮಿಯ ಬಗ್ಗೆ ಮತ್ತು ಅಲ್ಲಿ ಭಕ್ತರಿಗೆ ಪ್ರಸಾದ ರೂಪವಾಗಿ ನೀಡುವ ಲಾಡುಗಳ ಬಗ್ಗೆ ಹಾಗೂ ಆ ಮಹಾಪ್ರಸಾದದ ಮುದ್ಧತೆ ಮತ್ತು ಪರಿಪೂರ್ಣತೆಯ ಮೇಲೆ ಅನಾದಿಕಾಲದಿಂದಲೂ ಅಪಾರ ನಂಬಿಕೆ ಇದೆ. ಆದರೆ, ಇತ್ತೀಚೆಗೆ ಮಾಧ್ಯಮಗಳ ಮೂಲಕ ತಿಳಿದು ಬಂದಿರುವಂತೆ, ಅಂದ್ರಪ್ರದೇಶದ ಸರ್ಕಾರದ ಅಧೀನದಲ್ಲಿರುವ ತಿರುಪತಿಯಲ್ಲಿ ನೀಡಲಾಗುತ್ತಿರುವ ಲಾಡು ಪ್ರಸಾದದ ತಯಾರಿಕೆಯಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುವ ಶುದ್ಧ ಹಾಗೂ ಪೋಷಕಾಂಶಗಳಲ್ಲಿ ಶ್ರೀಮಂತವಾದ ಹಸುವಿನ ತುಪ್ಪದ ಬದಲು ಗೋಮಾಂಸದ ಕೊಬ್ಬು, ಹಂದಿಯ ಚರ್ಮದ ಕೊಬ್ಬು (ಚರ್ಬಿ) ಮತ್ತು ಮೀನಿನ ಎಣ್ಣೆ ಸೇರಿಸುತ್ತಿದ್ದರೆಂಬ ವಿಷಯ ಸಾರ್ವಜನಿಕವಾದ ವಿರೋಧವನ್ನು ಎದುರಿಸುತ್ತಿದೆ ಮತ್ತು ಇದು ವೈಷ್ಣವ ಪರಂಪರೆಯಲ್ಲಿ ಸಂಪೂರ್ಣವಾಗಿ ನಿಷೇಧಿತವಾಗಿದೆ.

ಧರ್ಮದ್ರೋಹಿಗಳು ಮತ್ತು ಸರ್ಕಾರೀ ಲಂಚಕೋರರು ದುರುದ್ದೇಶದಿಂದ ಮತ್ತು ಸ್ವಾರ್ಥದಿಂದ ತಮ್ಮ ಧರ್ಮಕ್ಕೇ ದ್ರೋಹ
ಬಗೆದಿರುವುದಲ್ಲದೆ ಕೋಟ್ಯಾಂತರ ಹಿಂದು ಭಕ್ತಾದಿಗಳು ಮತ್ತು ವಿಶ್ವದ 1/6ನೇ ಜನಸಂಖ್ಯೆಯನ್ನು ಹೊಂದಿರುವ ಅವಿಭಜಿತ ಹಿಂದೂಗಳ ಮನಸ್ಸಿಗೆ ಘಾಸಿಯನ್ನುಂಟುಮಾಡಿದ್ದಾರೆ. ಈ ಧರ್ಮದ್ರೋಹಿ ಕಾರ್ಯದಲ್ಲಿ ಭಾಗಿಯಾಗಿರುವವರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಶಂಕೆಯಿದೆ. ಸನಾತನ ವಿರೋಧಿ ಶಕ್ತಿಗಳು ಸಂವಿಧಾನಬದ್ದ ಹಿಂದೂಗಳ ನಂಬಿಕೆಯೊಂದಿಗೆ ಈ ಮಹಾಪ್ರಸಾದದ ತಯಾರಿಕೆಯ ವಿಷಯದಲ್ಲಿ ಅವರ ಧಾರ್ಮಿಕ ಹಕ್ಕುಗಳ ಮೇಲೆ ಕುಮ್ಮಕ್ಕು ಮಾಡಿವೆ. ಇನ್ನೂ, ಅದಕ್ಕಿಂತಲೂ ಮಿಗಿಲಾಗಿ, ಈ ದೇವಸ್ಥಾನದಲ್ಲಿ ಭಕ್ತಾದಿಗಳು ಭಕ್ತಿಯಿಂದ ದೇವರಿಗೆ ಅರ್ಪಿಸುವ ದೇಣಿಗೆ ಮತ್ತು ಕಾಣಿಕೆಗಳ ದುರುಪಯೋಗ ಆಗುತ್ತಿದ್ದು, ಸರ್ಕಾರದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಹುಂಡಿ ಹಣವನ್ನು ಧರ್ಮದ ವಿರುದ್ಧ ಬಳಸುತ್ತಿರುವುದು ಭಕ್ತರಿಗೆ ಅಪಾರವಾದ ನೋವು ತಂದಿದೆ ಎಂದಿದ್ದಾರೆ.

ನಮ್ಮ ದೇಶದ ಸಂವಿಧಾನದಲ್ಲಿ ಮೌಲ್ಯಗಳು ಸದಾ ಎತ್ತಿಹಿಡಿಯಲ್ಪಟ್ಟಿವೆ. ಅದರೆ ಸರ್ಕಾರಗಳು ಚರ್ಚ್ ಮತ್ತು ಮಸೀದಿಗಳನ್ನು ಬಿಟ್ಟು ಕೇವಲ ಹಿಂದೂ ದೇವಾಲಯಗಳ ಮೇಲೆ ಮಾತ್ರ ತಾವೇ ನಿಯಂತ್ರಣ ಇರಿಸಿಕೊಂಡಿ ರುವುದನ್ನು ಹಿಂದೂಗಳ ಧಾರ್ಮಿಕ ಸ್ಥಳಗಳಿಗೆ ಬಗೆಯುತ್ತಿರುವ ಮೋಸವೆಂದು ಪರಿಗಣಿಸಲಾಗುತ್ತಿದೆ. ಆದುದರಿಂದ ಈ ಸಮಯದಲ್ಲಿ ದೇಣಿಗೆಯ ಹಣಗಳನ್ನು ದುರುಪಯೋಗ ಪಡಿಸುತ್ತಿರುವ ಸರ್ಕಾರಗಳ ಬಗ್ಗೆ ವಿಚಾರಣೆ ನಡೆಸುವುದು ಅತ್ಯಗತ್ಯವಾಗಿದೆ.ಹಲವಾರು ವರ್ಷಗಳಿಂದ ಹಲವಾರು ರಾಜ್ಯಗಳಲ್ಲಿ ಹಿಂದೂ ದೇವಾಲಯಗಳಲ್ಲಿ ಭಕ್ತರು ಭಕ್ತಿಯಿಂದ ಅರ್ಪಿಸುವ ಕಾಣಿಕೆಯ ಹಣವನ್ನು ಹಿಂದುಗಳ ಧರ್ಮವನ್ನು ಅವಹೇಳನ ಮಾಡುವ, ಅಪಪ್ರಚಾರ ಮಾಡುವ, ಹಿಂಸಿಸುವ, ಹಿಂದುಗಳ ಪೌರಾಣಿಕ ಆಚಾರಗಳನ್ನು ನಾಶಮಾಡಲು ಪ್ರೇರಣೆ ನೀಡುವ ಹಿಂದೂಯೇತರ ಸಂಘಟನೆಗಳಿಗೆ, ಸಂಸ್ಥೆಗಳಿಗೆ ದೇಣಿಗೆಯ ಹಣವನ್ನು ನೀಡುವ ಕುರಿತು ಸುದ್ದಿಗಳು ಕೇಳಿಬರುತ್ತಲೇ ಇವೆ.

ಸ್ವಾತಂತ್ರ್ಯ ಪಡೆದ 77 ವರ್ಷಗಳ ನÀಂತರವೂ ಹಿಂದೂಗಳು ನಮ್ಮ ದೇವಾಲಯಗಳನ್ನು ನಿರ್ವಹಿಸಲು ಅವಕಾಶ ಹೊಂದಲಾರದೇ? ಅಲ್ಪಸಂಖ್ಯಾತರು ತಮ್ಮ ಧಾರ್ಮಿಕ ಸಂಸ್ಥೆಗಳನ್ನು ನಿರ್ವಹಿಸಲು ಅವಕಾಶ ಪಡೆದಿದ್ದಾರೆ. ಅದನ್ನು ದುರುಪಯೋಗಪಡಿಸಿಕೊಂಡು ಈ ದೇಶಕ್ಕೇ ದ್ರೋಹ ಬಗೆಯುತ್ತಿದ್ದಾರೆ. ಅದರೆ ಈ ರಾಷ್ಟ್ರದಲ್ಲಿ ಹಿಂದೂಗಳಿಗೆ ಈ ಸಂವಿಧಾನಿಕ ಹಕ್ಕು ಏಕೆ ನೀಡಲಾಗುತ್ತಿಲ್ಲ ಮತ್ತು ಏಕೆ ಅವರನ್ನು ವೈಷಮ್ಯಕ್ಕೆ ಒಳಪಡಿಸಲಾಗುತ್ತಿದೆ? ಇದು ಉತ್ತರಿಸಬೇಕಾದ ಪ್ರಶ್ನೆಯಾಗಿದೆ. ಸ್ವಾತಂತ್ರ್ಯ ಪಡೆದ 77 ವರ್ಷಗಳ ನಂತರವೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇವಾಲಯಗಳ ಮೇಲೆ ನಿಯಂತ್ರಣವನ್ನು ತೆಗೆದುಕೊಳ್ಳುವುದರ ಮೂಲಕ ಶೋಷಿಸುತ್ತಿವೆ.

ತಿರುಪತಿ ಬಾಲಾಜಿ ಮತ್ತು ಇತರ ಸ್ಥಳಗಳಲ್ಲಿ ನಡೆದಿರುವ ಅನಿಯಮಿತತೆಯ ಕಾರಣದಿಂದ, ಹಿಂದೂ ಸಮಾಜವು ಈಗ ತಮ್ಮ
ದೇವಾಲಯಗಳ ಪಾವಿತ್ರ್ಯತೆಗಳನ್ನು ಕಾವಾಡಿಕೊಳ್ಳಬೇಕೆಂದರೆ ಅವು ಸರ್ಕಾರದ ನಿಯಂತ್ರಣದಿಂದ ಮುಕ್ತವಾದರೆ ಮಾತ್ರ ಸಾಧ್ಯ. ಇಲ್ಲವಾದಲ್ಲಿ ಅವುಗಳನ್ನು ಪುನಃ ಸ್ಥಾಪಿಸಲಾಗುವುದಿಲ್ಲ ಎಂಬ ನಂಬಿಕೆಗೆ ಬಂದಿದ್ದಾರೆ. ಇದು ತೀರ ದೃಢವಾದ ನಂಬಿಕೆ ಮತ್ತು ವಿಶ್ವಾಸವಾಗಿದ್ದು, ಪ್ರತಿ ಹಿಂದೂ ದೇವಾಲಯಗಳ ಅಸ್ತಿ ಮತ್ತು ಅದಾಯವನ್ನು ದೇವಾಲಯಗಳ ಅಭಿವೃದ್ಧಿಗಾಗಿ ಮತ್ತು ಧಾರ್ಮಿಕ ಮತ್ತು ಸಂಬಂಧಿತ ಸೇವಾ ಚಟುವಟಿಕೆಗಳಿಗಾಗಿ ಮಾತ್ರವೇ ಬಳಸಬೇಕು ಎಂದು ಆಶಿಸುತ್ತಾರೆ. ವಾಸ್ತವದಲ್ಲಿ, ದೇವಾಲಯಗಳ ಆದಾಯ ಮತ್ತು ಅಸ್ತಿಪಾಸ್ತಿಗಳ ತೆರೆದ ಲೂಟಿಯನ್ನು ಅಧಿಕಾರಿ ಮತ್ತು ರಾಜಕಾರಣಿಗಳು ಮಾತ್ರವಲ್ಲ, ಅವರೊಂದಿಗೆ ಕೈಜೋಡಿಸಿರುವ ಸನಾತನ ವಿರೋಧೀ ಪಾತ್ರಧಾರಿಗಳು ಕೂಡ ಮಾಡುತ್ತಿದ್ದಾರೆ.

ನಮ್ಮ ರಾಜ್ಯ ಸರ್ಕಾರವು ತಕ್ಷಣವೇ ಎಲ್ಲಾ ಹಿಂದೂ ದೇವಾಲಯಗಳನ್ನು ತಮ್ಮ ನಿಯಂತ್ರಣದಿಂದ ಬಿಡುಗಡೆ ಮಾಡಿ, ಪ್ರಾದೇಶಿಕ
ವ್ಯವಸ್ಥೆಯಡಿಯಲ್ಲಿ ಹಿಂದೂ ಸಂತರು ಮತ್ತು ಭಕ್ತರಿಗೆ ಒಪ್ಪಿಸಬೇಕು,ಪವಿತ್ರ ಸಂತರು ಹಲವಾರು ವರ್ಷಗಳ ಅನುಭವ ಮತ್ತು
ಸತ್ಯಾಸತ್ಯತೆಗಳನ್ನು ಅರಿತು, ಚರ್ಚಿಸಿದ ನಂತರ ಇದನ್ನು ನಿರ್ಧರಿಸಿದ್ದಾರೆ.ತಾವು ತಮ್ಮ ಸಾಂವಿಧಾನಿಕ ಅಧಿಕಾರವನ್ನು ಬಳಸಿ
ಸೂಕ್ತಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಬೇಕಿದೆ ಪರಸ್ಪರ ಸಂವಾದದ ಮೂಲಕ ಆಯಾ ದೇವಸ್ಥಾನಗಳ ನಿಯಂತ್ರಣವನ್ನು ಅಯಾ ಮಂದಿರಗಳ ಭಕ್ತವೃಂದಕ್ಕೆ ನೀಡುವುದು ಅತ್ಯಂತ ಸೂಕ್ತವಾಗಿದೆ. ಅಂತಹವರು ತಮ್ಮ ತಮ್ಮ ದೇವಾಲಯಗಳನ್ನು ಅತ್ಯಂತ ಪವಿತ್ರ ಶ್ರದ್ಧಾಕೇಂದ್ರಗಳನ್ನಾಗಿ ಪರಿವರ್ತಿಸಬಲ್ಲರು. ಈ ಬಗ್ಗೆ ಸರ್ಕಾರಕ್ಕೆ ಈ ಸಂಬಂಧ ಆದೇಶವನ್ನು ನೀಡಿ ಮಂದಿರಗಳ ನಿಯಂತ್ರಣವನ್ನು ಅವುಗಳ ಭಕ್ತಾಧಿಗಳ ನಿಯಂತ್ರಣಕ್ಕೆ ನೀಡುವ ವ್ಯವಸ್ಥೆಯನ್ನು ಮಾಡುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಕೆ.ಸಿ.ವಿರೇಂದ್ರ, ಬಿಜೆಪಿ ಮುಖಂಡರಾದ ಅನಿತ್ ಕುಮಾರ್, ಉಮೇಶ್ ಕಾರಜೋಳ, ವಿಶ್ವ ಹಿಂದೂ ಪರಿಷತ್‍ನ ಪ್ರಭಂಜನ್ ಮುಖಂಡರಾದ ಬದರಿನಾಥ್, ನಯನ ಸೇರಿದಂತೆ ವಿಶ್ವ ಹಿಂದೂ ಪರಿಷದ್ ಪದಾಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *