Musheer Khan Health Update: ಪೂರ್ವಾಂಚಲ್ ಎಕ್ಸ್ಪ್ರೆಸ್ವೇಯಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕ್ರಿಕೆಟರ್ ಮುಶೀರ್ ಖಾನ್ ಅವರನ್ನು ತುರ್ತು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತರಲಾಗಿತ್ತು. ಅವರಿಗೆ ಆರ್ಥೋಪೆಡಿಕ್ಸ್ ವಿಭಾಗದ ನಿರ್ದೇಶಕ ಡಾ.ಧರ್ಮೇಂದ್ರ ಸಿಂಗ್ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂಬ ಮಾಹಿತಿ ನೀಡಿದೆ.
ಇಂದು ಬೆಳಿಗ್ಗೆ ಅಂದರೆ ಸೆಪ್ಟೆಂಬರ್ 28 ರಂದು ಉತ್ತರ ಪ್ರದೇಶದಿಂದ ಲಕ್ನೋಗೆ ತೆರೆಳುತ್ತಿರುವಾಗ ಟೀಂ ಇಂಡಿಯಾದ ಯುವ ಬ್ಯಾಟ್ಸ್ಮನ್ ಮುಶೀರ್ ಖಾನ್ ಕಾರು ಅಪಘಾತಕ್ಕೀಡಾಗಿದ್ದರು. ಈ ಅಪಘಾತದಲ್ಲಿ ಮುಶೀರ್ ಅವರ ಕುತ್ತಿಗೆಯ ಬಾಗಕ್ಕೆ ತೀವ್ರ ಗಾಯಗಳಾಗಿದ್ದವು. ಹೀಗಾಗಿ ಅವರನ್ನು ಕೂಡಲೇ ಲಕ್ನೋದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಮುಶೀರ್ ಖಾನ್ ಅವರ ಸದ್ಯದ ಪರಿಸ್ಥಿತಿಯ ಬಗ್ಗೆ ಮೇದಾಂತ ಆಸ್ಪತ್ರೆ ಹೆಲ್ಸ್ ಬುಲೆಟಿನ್ ಬಿಡುಗಡೆ ಮಾಡಿದೆ. ಅದರ ಪ್ರಕಾರ, ಮುಶೀರ್ ಖಾನ್ ಅವರ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ವಾಸ್ತವವಾಗಿ ಮುಶೀರ್ ಖಾನ್ ಮುಂದಿನ ತಿಂಗಳು ನಡೆಯಲ್ಲಿರುವ ಇರಾನಿ ಕಪ್ ಪಂದ್ಯಕ್ಕಾಗಿ ಲಕ್ನೋಗೆ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಈ ಪಂದ್ಯದಲ್ಲಿ ಮುಂಬೈ ತಂಡದ ಬಾಗವಾಗಿರುವ ಮುಶೀರ್ ಖಾನ್, ರೆಸ್ಟ್ ಆಫ್ ಇಂಡಿಯಾ ತಂಡದ ವಿರುದ್ಧ ಕಣಕ್ಕಿಳಿಯಬೇಕಿತ್ತು. ಆದರೀಗ ಅಪಘಾತಕ್ಕೀಡಾಗಿರುವ ಮುಶೀರ್ ಈ ಪಂದ್ಯದಿಂದ ಹೊರಬಿದ್ದಿರುವುದಲ್ಲದೆ, ತಿಂಗಳುಗಳ ಕಾಲ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ ಎಂದು ವರದಿಯಾಗಿದೆ.
ಮುಶೀರ್ ಕುತ್ತಿಗೆಗೆ ಗಾಯ
ಲಕ್ನೋದ ಮೇದಾಂತ ಆಸ್ಪತ್ರೆಯು ಮುಶೀರ್ ಖಾನ್ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಅದರಲ್ಲಿ, ‘ಪೂರ್ವಾಂಚಲ್ ಎಕ್ಸ್ಪ್ರೆಸ್ವೇಯಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕ್ರಿಕೆಟರ್ ಮುಶೀರ್ ಖಾನ್ ಅವರನ್ನು ತುರ್ತು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತರಲಾಗಿತ್ತು. ಅವರಿಗೆ ಆರ್ಥೋಪೆಡಿಕ್ಸ್ ವಿಭಾಗದ ನಿರ್ದೇಶಕ ಡಾ.ಧರ್ಮೇಂದ್ರ ಸಿಂಗ್ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂಬ ಮಾಹಿತಿ ನೀಡಿದೆ.
ಹಾಗೆಯೇ ಮುಶೀರ್ ಖಾನ್ ಅವರ ಚಿಕಿತ್ಸೆಯ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಂದರೆ ಎಂಸಿಎ, ಕಾರು ಅಪಘಾತದಲ್ಲಿ ಕುತ್ತಿಗೆಗೆ ಗಾಯ ಮಾಡಿಕೊಂಡಿರುವ ಮುಶೀರ್ ಖಾನ್ ಅವರ ಮೇಲೆ ಬಿಸಿಸಿಐ ಮತ್ತು ಎಂಸಿಎ ವೈದ್ಯಕೀಯ ತಂಡಗಳು ಕಣ್ಣಿಟ್ಟಿವೆ. ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಗುಣಮುಖರಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಕರೆತರಲಾಗುವುದು ಎಂದಿದೆ.
ತಂದೆಗೆ ಸಣ್ಣಪುಟ್ಟ ಇಂಜುರಿ
ಇರಾನಿ ಕಪ್ ತಯಾರಿಗಾಗಿ ಮುಶೀರ್ ಖಾನ್ ಅಜಂಗಢ್ನಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಇದಾದ ಬಳಿಕ ಇಲ್ಲಿಂದ ಪಂದ್ಯ ಆಡಲು ಲಕ್ನೋಗೆ ತೆರಳಿದ್ದರು. ಈ ವೇಳೆ ಅವರ ತಂದೆ ನೌಶಾದ್ ಖಾನ್ ಕೂಡ ಕಾರಿನಲ್ಲಿದ್ದರು. ಈ ಅಪಘಾತದಲ್ಲಿ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಇತ್ತೀಚೆಗಷ್ಟೇ ನಡೆದಿದ್ದ ದುಲೀಪ್ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯವನ್ನಾಡಿದ್ದ ಮುಶೀರ್ ಖಾನ್ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿದ್ದರು. ಸದ್ಯಕ್ಕೆ ಅತ್ಯುತ್ತಮ ಫಾರ್ಮ್ನಲ್ಲಿದ್ದ ಮುಶೀರ್ ಖಾನ್ ಇಂಜುರಿಗೊಂಡಿರುವುದು ಮುಂಬೈ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.