ಚಿತ್ರದುರ್ಗ|ಮಹಾತ್ಮ ಗಾಂಧೀಜಿಯವರ ಸ್ಮರಣೆ ಇಂದು ನಮಗೆ ಆದರ್ಶ: ಕೆ.ಎಂ.ವೀರೇಶ್.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ನಗರದ ಹೂರವಲಯದ ಪಿಳ್ಳೇಕೇರನಹಳ್ಳಿಯಲ್ಲಿನ ಬಾಪೂಜಿ ವಿದ್ಯಾ ಸಂಸ್ಥೆಯ ಬಾಪೂಜಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ
ಮಹಾತ್ಮ ಗಾಂಧಿಯವರ 155ನೇ ಹಾಗೂ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 120ನೇ ಜಯಂತಿಯ ಅಂಗವಾಗಿ
ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಉಪ್ಪಿನ ಸತ್ಯಾಗ್ರಹ, ಶಾಂತಿ ಮಂತ್ರ, ಹಾಗೂ ಉಪವಾಸವನ್ನು ಮಾಡುವುದರ
ಮೂಲಕ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೂಳಿಸಿದರು. ಜಗತ್ತಿಗೆ ನಾಡಿಗೆ ಸ್ವಾತಂತ್ರವಾಗಿ ಇರಲು ಅವಕಾಶವನ್ನು ಮಾಡಿಕೊಟ್ಟ
ಶ್ರೇಷ್ಠ ವ್ಯಕ್ತಿ ಮಹಾತ್ಮ ಗಾಂಧಿಯವರಾಗಿದ್ದಾರೆ. ಅವರ ನಾಮಾಕಿಂತದ ಮೇಲೆ ನಮ್ಮ ವಿದ್ಯಾ ಸಂಸ್ಥೆ ನಡೆಯುತ್ತಿದೆ ಇದರಿಂದ ನಮಗೂ
ಸಹಾ ಹೆಸರು ಬಂದಿದೆ. ಅವರ ಹೆಸರಿಗೆ ತಕ್ಕಂತೆ ಇರಬೇಕಿದೆ. ಜಯದೇವ ಶ್ರೀಗಳನ್ನು ಮಹಾತ್ಮ ಗಾಂಧಿಯವರು ಹಾವೇರಿಯಲ್ಲಿ ಭೇಟಿ
ಮಾಡುವುದರ ಮೂಲಕ ಮಾತುಕಥೆಯನ್ನು ನಡೆಸಿದ್ದರು. ಶ್ರೀಗಳ ಮಾರ್ಗದರ್ಶನ ಆರ್ಶೀವಾದವನ್ನು ಪಡೆದಿದ್ದಾರೆ ಎಂದರು.


ಮಹಾತ್ಮ ಗಾಂಧೀಜಿಯವರ ಸ್ಮರಣೆಯನ್ನು ಮಾಡಬೇಕಿದೆ. ಅವರ ಸ್ಮರಣೆ ಇಂದು ನಮೆಗೆಲ್ಲಾ ಆದರ್ಶವಾಗಿದೆ. ಅವರ ಬದುಕು ಅವರ
ಜೀವನ ಅವರ ಸರಳತೆ ಅವರ ಸತ್ಯತೆ ಅವರು ಮಂಡಿಸಿದ ಪ್ರಮಾಣಿಕತೆ ಹಾಗೂ ಸತ್ಯತೆಯ ಬಗ್ಗೆ ಜೀವನ ಸಾಗಿಸಿದ ಅಪರೂಪದ ವ್ಯಕ್ತಿ
ಮಹಾತ್ಮ ಗಾಂಧೀಜಿಯವರಾಗಿದ್ದಾರೆ. ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡಿಸಲು ಬಹಳಷ್ಟು ಶ್ರಮವನ್ನು
ಹಾಕಿದ್ದಾರೆ.ಪ್ರಮಾಣಿಕತೆ ಮತ್ತೊಂದು ಹೆಸರು ಲಾಲಾ ಬಹದ್ದೂರ್ ಶಾಸ್ತ್ರಿಯವರಾಗಿದ್ದಾರೆ. ಧೇಶದ ಪ್ರಧಾನ ಮಂತ್ರಿಗಳಾಗಿ
ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಅವರ ಉಡುಗೆ ತೂಡುಗೆ ಅವರು ದೇಶದ ಆಭೀವೃದ್ದಿ ತ್ಯಾಗವನ್ನು ಮಾಡಿದ್ದಾರೆ. ಈ ರೀತಿಯ
ಜನಗಳು ಮತ್ತೇ ಈ ನಾಡಿನಲ್ಲಿ ಹುಟ್ಟಿ ಬರಬೇಕಿದೆ. ಈ ಹಿನ್ನಲೆಯಲ್ಲಿ ಈ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ. ಎಲ್ಲರು ಸಹಾ
ಧಾನ್ಯ ಶಾಂತಿ ಮಂತ್ರ ಜಪಿಸುವುದು, ಗಾಂಧೀಜಿಯವರ ಆದರ್ಶಗಳನ್ನು ಸ್ಮರಣೆ ಮಾಡುವುದು, ಅಗತ್ಯವಾಗಿದೆ ಎಂದರು.

ಮಠದ ಸ್ವಾಮೀಜಿಯಾಗುವುದು ಸುಲಭ ಆದರೆ ಶರಣರಾಗುವುದು ಕಷ್ಠದ ಕೆಲಸವಾಗಿದೆ. ಭಯ ಇದ್ದರೆ ಭಕ್ತಿ ಬರುತ್ತದೆ ಭಯ ಇಲ್ಲದಿದ್ದರೆ
ಭಕ್ತಿ ಬರುವುದಿಲ್ಲ, ಕಷ್ಠ ಬಂದರೆ ಭಕ್ತಿ ಬರುತ್ತದೆ ನೋವಾದರೆ ಭಗವಂತನನ್ನು ನೆನೆಯಲಾಗುತ್ತದೆ. ಸ್ವಾತ್ವಿಕತೆಯ ಬದುಕನ್ನು ಕಟ್ಟಿಕೊಳ್ಳಿ,
ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಿ, ಕಷ್ಠ ಯಾಕೆ ಬರುತ್ತದೆ, ಬಡತನ ಬರುತ್ತದೆ ಯಾಕೆ ಕೆಟ್ಟದಾಗುತ್ತದೆ ಆಲೋಚನೆ ಮಾಡಿ
ಕೆಟ್ಟದಾಗುವುದು ಕೆಟ್ಟ ಪರಿಸ್ಥಿತಿ ಕೆಟ್ಟ ಪರಿಸರ ನಮ್ಮ ಸುತ್ತಾ-ಮುತ್ತಲು ಇರಬಾರದು ಸ್ವಚ್ಚತೆಯಿಂದ ಇರಬೇಕಿದೆ. ಮಾನವರಾದ
ನಾವುಗಳು ಸ್ವೇಚ್ಚವಾಗಿರುವುದರಿಂದ ಸ್ವತಂತ್ರವಾಗಿ ಸ್ವಚ್ಚಂದವಾಗಿ ಇರಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಜಯಲಕ್ಷ್ಮೀ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *